CM Yogi Adityanath : ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕೃಷ್ಣ ನಗರಿ ಉಡುಪಿಗೆ ಆಗಮನ

ಉಡುಪಿ : ಇದೇ ಪ್ರಥಮ ಬಾರಿಗೆ ಕರಾವಳಿ ಕರ್ನಾಟಕ್ಕೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (CM Yogi Adityanath) ಬರಲಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಡಿ.25ರಂದು ಯುವ ಮತದಾರರ ಸಮಾವೇಶ ನಡೆಯಲಿದ್ದು, ಹಿಂದುತ್ವದ ಭದ್ರ ಕೋಟೆಯಲ್ಲಿ ಹಿಂದೂ ಸಂತನ ಆಗಮನಕ್ಕಾಗಿ ಭರ್ಜರಿ ಸ್ವಾಗತ ಕೋರಲು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಬಹಳಷ್ಟು ಉತ್ಸಾಹದಿಂದ ತಯಾರಿ ನಡೆಸುತ್ತಿದ್ದಾರೆ.

ಈ ಕುರಿತು ಇಂಧನ ಸಚಿವ ಸುನೀಲ್‌ ಕುಮಾರ್‌ ಮಾಹಿತಿ ನೀಡಿದ್ದು, ಡಿ.25ರಂದು ಉಡುಪಿ ಜಿಲ್ಲೆಯಲ್ಲಿ ನಡೆಯಲಿರುವ ಯುವ ಮತದಾರರ ಸಮಾವೇಶದಲ್ಲಿ ಉತ್ತರಪ್ರದೇಶದ ಜನಪ್ರಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಡಿ.6ರಂದು ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಸೀಟುಗಳನ್ನು ಗೆಲ್ಲಲು ತಂತ್ರಗಾರಿಕೆ ರೂಪಿಸುತ್ತಿದೆ. ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : Janardhan Reddy: ಗಣಿಧಣಿ ಜನಾರ್ಧನ್ ರೆಡ್ಡಿ ವಿರುದ್ಧದ 4 ಕೇಸ್ ಗಳು ರದ್ದು: ರಾಜಕೀಯ ಹಾದಿ ಇನ್ನಷ್ಟು ಸುಗಮ

ಇದನ್ನೂ ಓದಿ : Bus facility for government school : ಶಾಲೆಗಳಿಗೆ ಸರಕಾರದಿಂದಲೇ ಬಸ್‌ ಸೌಲಭ್ಯ : ಸಿಎಂ ಬಸವರಾಜ್‌ ಬೊಮ್ಮಾಯಿ

ಇದನ್ನೂ ಓದಿ : Disabled Welfare Department : ಅಂಗವಿಕಲರ ಕಲ್ಯಾಣ ಇಲಾಖೆ ಹೊಂದಿದ ಮೊದಲ ರಾಜ್ಯ ಮಹಾರಾಷ್ಟ್ರ

ಇದನ್ನೂ ಓದಿ : CM Bommai announcement: ವಿಕಲಚೇತನ ಮಕ್ಕಳಿಗೆ ವಿಶೇಷ ಯೋಜನೆ : ಸಿಎಂ ಬಸವರಾಜ್ ಬೊಮ್ಮಾಯಿ ಘೋಷಣೆ

ಇದನ್ನೂ ಓದಿ : High Court Notice: ಕೆಜಿಎಫ್- 2 ಹಾಡನ್ನು ತೆಗೆಯದೆ ನ್ಯಾಯಾಂಗ ನಿಂದನೆ; ಕರ್ನಾಟಕ ಹೈಕೋರ್ಟ್ ನಿಂದ ರಾಹುಲ್ ಗಾಂಧಿಗೆ ನೋಟಿಸ್

ಯೋಗಿ ಆದಿತ್ಯನಾಥ್‌ ಕಠೋರ ಹಿಂದುತ್ವದ ಮೂರ್ತರೂಪದ ರಾಜಕಾರಣಿ, ಪ್ರಸ್ತುತ ಉತ್ತರಪ್ರದೇಶದ ಮುಖ್ಯಮಂತ್ರಿ. ಮುಖ್ಯಮಂತ್ರಿ ಆಗುವ ಮೊದಲು ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ತಾರಾ ವರ್ಚಸ್ಸಿನ ಚಳುವಳಿಗಾರ. 1998ರಿಂದ ಸತತ ಐದು ವರ್ಷ ಅವಧಿಗೆ ಅವರು ಉತ್ತರ ಪ್ರದೇಶದ ಗೋರಕ್ಪುರ ಕ್ಷೇತ್ರದ ಸಂಸತ್‌ ಸದಸ್ಯರಾಗಿದ್ದಾರೆ. ಇವರು ನಮ್ಮ ಕರಾವಳಿಗೆ ಆಗಮಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ವಿಚಾರವಾಗಿದೆ.

Yogi Adityanath: Uttar Pradesh CM Yogi Adityanath arrives at Krishna Nagar Udupi

Comments are closed.