Christmas Cakes : ಈ ವರ್ಷದ ಕ್ರಿಸ್‌ಮಸ್‌ ಗೆ ಮನೆಯಲ್ಲಿಯೇ ಹೀಗೆ ಕೇಕ್‌ ತಯಾರಿಸಿ

ಇನ್ನೇನು ಕ್ರಿಸ್‌ಮಸ್‌ (Christmas) ಬಂದೇ ಬಿಟ್ಟಿತು. ಎಲ್ಲಡೆ ಕ್ರಿಸ್‌ಮಸ್‌ ಖರೀದಿ ಜೋರು. ನಗರಗಳ ದೊಡ್ಡ ಶಾಪಿಂಗ್ ಮಾಲ್‌ಗಳಿರಲಿ, ರೆಸ್ಟೋರೆಂಟ್‌ಗಳಿರಲಿ, ಎಲ್ಲೆಡೆ ಈ ಹಬ್ಬದ (Festival) ಸಂಭ್ರಮ. ಅದರಲ್ಲೂ, ಕ್ರಿಸ್‌ಮಸ್‌ನಲ್ಲಿ ವಿಶೇಷವೆಂದರೆ ವಿವಿಧ ಕೇಕ್‌ಗಳು (Christmas Cakes). ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರಂತೂ, ಕೇಕ್‌, ಕುಕ್ಕೀಸ್‌ಗಳ ಉದ್ದ ಲೀಸ್ಟ್‌ ಇರುತ್ತದೆ. ನೀವು ಮಕ್ಕಳಿಗಾಗಿ ಮನೆಯಲ್ಲಿಯೇ ಕೇಕ್‌ ತಯಾರಿಸಬಹುದು.

ಕೇಕ್‌ ಅನ್ನು ಓವನ್‌ ಇಲ್ಲದೆಯೂ ತಯಾರಿಸಬಹುದು. ಯಾವಾಗಲೂ ಹೊರಗಡೆಯಿಂದ ಕೇಕ್‌ ತರುವ ಬದಲು ನೀವೇ ಮನೆಯಲ್ಲಿ ಅದನ್ನು ತಯಾರಿಸಬಹುದು. ಹಾಗಾದರೆ ಮನೆಯಲ್ಲಿಯೇ ಓವನ್‌ ಇಲ್ಲದೆಯೇ ಕೇಕ್‌ ತಯಾರಿಸುವುದು ಹೇಗೆ ಎಂದು ಇಲ್ಲಿ ಹೇಳಿದ್ದೇವೆ. ಮಕ್ಕಳಿಗೆ ಚಾಕಲೇಟ್‌ ಕೇಕ್‌ ಎಂದರೆ ಬಹಳ ಇಷ್ಟ. ಹಾಗಾಗಿ ಇಲ್ಲಿ ಚಾಕಲೇಟ್‌ ತಯಾರಿಸುವ ವಿಧಾನ ಹೇಳಿದ್ದೇವೆ.

Christmas Cakes : ಮನೆಯಲ್ಲಿಯೇ ಚಾಕಲೇಟ್‌ ಕೇಕ್‌ ತಯಾರಿಸುವುದು ಹೇಗೆ?

ಬೇಕಾಗುವ ಸಾಮಾನುಗಳು:
2 –3 ಕಪ್‌ ತುರಿದ ಡಾರ್ಕ್‌ ಚಾಕಲೇಟ್‌
3 ಕಪ್‌ ಕಂಡೆನ್ಸ್ಡ್‌ ಹಾಲು
3/4 ಕಪ್‌ ಮೈದಾ
1 ಕಪ್‌ ಕತ್ತರಿಸಿದ ಅಕ್ರೋಟ್‌
1 ಚಮಚ ವೆನಿಲ್ಲಾ ಎಸ್ಸೆನ್ಸ್‌
1 ಲಿಂಬೆ ಗಾತ್ರದಷ್ಟು ಬೆಣ್ಣೆ

ತಯಾರಿಸುವ ವಿಧಾನ:
ಮೊದಲಿಗೆ ಚಾಕಲೇಟ್‌ ಮತ್ತು ಬೆಣ್ಣೆಯನ್ನು ಕಡಿಮೆ ಉರಿಯಲ್ಲಿ ಇಡಿ. ಅದಕ್ಕೆ 2 ಚಮಚ ನೀರನ್ನು ಸೇರಿಸಿ ಮಿಕ್ಸ್‌ ಮಾಡಿ. ನಂತರ ಅದನ್ನು ಸ್ಟೋವ್‌ ನಿಂದ ಕೆಳಗಿಳಿಸಿ, ಅದಕ್ಕೆ ಕಂಡೆನ್ಸ್ಡ್‌ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ. ನಂತರ ಆ ಮಿಶ್ರಣಕ್ಕೆ ಅಕ್ರೋಟ್‌ ಮತ್ತು ವೆನಿಲ್ಲಾ ಎಸೆನ್ಸ್‌ ಸೇರಿಸಿ ಮತ್ತೆ ಮಿಕ್ಸ್‌ ಮಾಡಿ. ಈ ಮಿಶ್ರಣವನ್ನು ಬೆಣ್ಣೆಯಿಂದ ಗ್ರೀಸ್‌ ಮಾಡಿದ ಮಫಿನ್‌ ಅಚ್ಚುಗಳಿಗೆ ಹಾಕಿ, ಇಲ್ಲವೇ ಕೇಕ್‌ ಕಂಟೇನರ್‌ಗೆ ಹಾಕಿ ಅದನ್ನು ತಣ್ಣಗಾಗಲು ಬಿಡಿ.

ಪ್ರೆಶರ್‌ ಕುಕ್ಕರ್‌ ಅನ್ನು ವಿಸಲ್‌ ಹಾಕದೇ ಮೂರರಿಂದ ನಾಲ್ಕು ನಿಮಿಷಗಳವರೆಗೆ ಬಿಸಿ ಮಾಡಿ. ನಂತರ ಮಿಶ್ರಣದ ಕಂಟೇನರ್‌ ಅನ್ನು ಅದರಲ್ಲಿಡಿ. ಕಡಿಮೆ ಉರಿಯಲ್ಲಿ 30 ನಿಮಿಷಗಳ ಕಾಲ ಬೇಯಿಸಿ. ಕುಕ್ಕರ್‌ ತಣ್ಣಗಾದ ನಂತರ ಕಂಟೇನರ್‌ ಹೊರತೆಗೆದು ಸರ್ವ್‌ ಮಾಡಿ.

ಇದನ್ನೂ ಓದಿ : Sugarcane Juice Benefits : ಕಬ್ಬಿನ ಹಾಲಿನ ಆರೋಗ್ಯ ಪ್ರಯೋಜನಗಳು ನಿಮಗೆ ಗೊತ್ತಾ…

ಇದನ್ನೂ ಓದಿ : Home Remedy For Period Pain: ಋತುಚಕ್ರದಲ್ಲಿ ಕಾಡುವ ಹೊಟ್ಟೆನೋವಿಗೆ ಇಲ್ಲಿದೆ ಮನೆಮದ್ದು

(How to make Christmas Cakes at home using a pressure cooker)

Comments are closed.