Long Sword : ಕೈಯಲ್ಲಿ ತಲವಾರ್​ ಹಿಡಿದು ಗ್ರಾಮದ ಸುತ್ತೆಲ್ಲ ಓಡಾಡಿದ ಯುವಕ : ಸುಳ್ಯ ತಾಲೂಕಿನಲ್ಲಿ ವಿಚಿತ್ರ ಘಟನೆ

ದಕ್ಷಿಣ ಕನ್ನಡ : Long Sword : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಎಂದರೆ ಸಾಕು ನಡುಕ ಹುಟ್ಟುವಂತಹ ಪರಿಸ್ಥಿತಿ ಸದ್ಯ ಎದುರಾಗಿದೆ. ಹಿಂದೂ ಕಾರ್ಯಕರ್ತ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯನಾಗಿದ್ದ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣ ಇನ್ನೂ ಜನರ ನೆನಪಿನಿಂದ ಮಾಸಿಲ್ಲ. ಇದಕ್ಕೂ ಮುನ್ನ ಇದೇ ಬೆಳ್ಳಾರೆಯ ನಿವಾಸಿಯಾಗಿದ್ದ ಮಸೂದ್​ ಎಂಬಾತ ಕೂಡ ಕೊಲೆಯಾಗಿದ್ದ. ಹೀಗಾಗಿ ಸುಳ್ಯ ತಾಲೂಕು ಅಂದರೆ ಸಾಕು ಜನರು ಒಮ್ಮೆ ತಿರುಗಿ ನೋಡುವಂತಾಗಿದೆ.


ಇದೀಗ ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಸುಣ್ಣಮೂಲೆ ಎಂಬಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮೊದಲೆ ಇಬ್ಬರು ಯುವಕರ ಸಾವಿನ ಬಳಿಕ ಸುಳ್ಯ ತಾಲೂಕಿನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಸುಣ್ಣಮೂಲೆ ಗ್ರಾಮದಲ್ಲಿ ಯುವಕನೊಬ್ಬ ತಲ್ವಾರ್​ ಹಿಡಿದು ಗ್ರಾಮದ ತುಂಬೆಲ್ಲ ಓಡಾಡಿದ್ದು ಯುವಕನನ್ನು ಸುಳ್ಯ ಠಾಣೆಯ ಪೊಲೀಸರು ಬಂಧಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ರೀತಿ ತಲವಾರ್​ ಹಿಡಿದು ಹುಚ್ಚಾಟ ತೋರಿದ ಯುವಕನನ್ನು ಸಂದೀಪ್​ ಎಂದು ಗುರುತಿಸಲಾಗಿದೆ. ಈತ ವಿಪರೀತ ಮದ್ಯವ್ಯಸನಿಯಾಗಿದ್ದ. ಕಳೆದ 8 ತಿಂಗಳಿನಿಂದ ಮದ್ಯ ಸೇವನೆ ಮಾಡುವುದನ್ನು ನಿಲ್ಲಿಸಿದ್ದ. ಆದರೆ ನಿನ್ನೆ ಪುನಃ ಮದ್ಯಸೇವನೆ ಮಾಡಿದ ಬಳಿಕ ಈತನಿಗೆ ಮಾನಸಿಕ ಸ್ಥಿಮಿತ ತಪ್ಪಿ ಹೋಗಿದ್ದು ಈ ರೀತಿ ಹುಚ್ಚಾಟಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಸಂದೀಪ್​ ತಲವಾರ್ ಹಿಡಿದು ಅಡ್ಡಾಡುತ್ತಿರುವ ವಿಡಿಯೋ ವೈರಲ್​ ಆಗಿದ್ದೇ ತಡ ಕೂಡಲೇ ಅಲರ್ಟ್​ ಆದ ಸುಳ್ಯ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿಕೊಂಡು ಆರೋಪಿ ಸಂದೀಪ್​ನನ್ನು ಬಂಧಿಸಿದ್ದಾರೆ.


ಈತನನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಪ್ರವೀಣ್​ ನೆಟ್ಟಾರುವಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಮಿತ್ತ ಕನಕಮಜಲು ಪೇಟೆಯಲ್ಲಿ ಬ್ಯಾನರ್​ ಅಳವಡಿಕೆ ಮಾಡಲು ಅನುಮತಿ ಸಿಕ್ಕಿಲ್ಲ ಎಂಬ ಕಾರಣಕ್ಕೆ ಈತ ಸಿಟ್ಟಿನಲ್ಲಿ ಈ ರೀತಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಆದರೆ ಇದಕ್ಕೆ ಕನಕಮಜಲು ಗ್ರಾಮ ಪಂಚಾಯ್ತಿ ಅಧ್ಯಕ್ಷ ಶ್ರೀಧರ ಕುತ್ಯಾಳ ಹಾಗೂ ಪಂಚಾಯತ್​ ಅಭಿವೃದ್ಧಿ ಅಧಿಕಾರಿ ಸರೋಜಿನಿ ಸ್ಪಷ್ಟನೆ ನೀಡಿದ್ದು ನಮ್ಮ ಬಳಿ ಯಾರೂ ಬ್ಯಾನರ್​ ಅಳವಡಿಸಲು ಅನುಮತಿಯನ್ನು ಕೇಳಿಲ್ಲ . ಬಟ್ಟೆ ಬ್ಯಾನರ್​ ಅಳವಡಿಕೆ ಮಾಡಲು ನಾವು ಅನುಮತಿ ನೀಡಿದ್ದೆವು ಎಂದು ಹೇಳಿದ್ದಾರೆ .

ಇದನ್ನು ಓದಿ : MS Dhoni Menton CSA T20 League : ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಎಂ.ಎಸ್ ಧೋನಿ ಮೆಂಟರ್

ಇದನ್ನೂ ಓದಿ : HIV Positive Blood: ಪ್ರೀತಿ ಸಾಬೀತುಪಡಿಸಬೇಕೆಂದು ಹೆಚ್​ಐವಿ ಸೋಂಕಿತ ಪ್ರಿಯಕರನ ರಕ್ತವನ್ನು ತನ್ನ ದೇಹಕ್ಕೆ ಚುಚ್ಚಿಸಿಕೊಂಡ ಬಾಲಕಿ

Youth Man Running With Long Sword Mongered Fears Among Villagers At Kanakamajalu

Comments are closed.