Monsoon Trip : ಮಳೆಗಾಲದ ಸೌಂದರ್ಯ ವರ್ಣಿಸುವ 4 ಆಫ್‌ಬೀಟ್‌ ಸ್ಥಳಗಳು

ಮಳೆಗಾಲದ ಪ್ರವಾಸ (Monsoon Trip) ನಿಸ್ಸಂದೇಹವಾಗಿ ಒಂದು ಸುಂದರ ಅನುಭವ. ಎಲ್ಲ ಕಡೆ ಕಾಣಸಿಗುವ ಹಸಿರು ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಭಾರತದ ಅನೇಕ ಆಕರ್ಷಕ ತಾಣಗಳು ಅವುಗಳ ಸೌಂದರ್ಯದಿಂದ ನೋಡುಗರನ್ನು ಬೆರಗುಗೊಳಿಸುತ್ತವೆ.

ಮಳೆಗಾಲ, ಬಿಸಿಲು ಮತ್ತು ಶಾಖದಿಂದ ನೆಮ್ಮದಿ ನೀಡುತ್ತದೆ. ಈ ಋತುವಿನ ತಂಪಾದ ಗಾಳಿ ಮೈ–ಮನಗಳಿಗೆ ಆನಂದ ನೀಡುತ್ತದೆ. ಮೋಡ ಕವಿದ ವಾತಾವರಣದಲ್ಲಿ ಪ್ರಯಾಣಿಸುವುದೇ ಒಂದು ಮಜಾ. ತಂಪಾದ ಪರಿಸರದಲ್ಲಿರುವ ಆಕರ್ಷಕ ತಾಣಗಳು ಅವುಗಳ ಸೌಂದರ್ಯದಿಂದ ನಿಮ್ಮನ್ನು ಬೆರಗುಗೊಳಿಸುತ್ತವೆ. ಇಂತಹ ಭೂದೃಶ್ಯಗಳನ್ನು ನೋಡುವ ಅವಕಾಶವನ್ನು ನೀವು ಕಳೆದುಕೊಳ್ಳಬೇಡಿ. ಈ ಋತುವಿನ ಪ್ರವಾಸದ ಹೆಚ್ಚಿನ ಪ್ರಯೋಜನವನ್ನು ಪಡೆಯಲು ನಾವು ನಿಮಗೆ ಕೆಲವು ಸ್ಥಳಗಳನ್ನು ಆಯ್ದು ಇಲ್ಲಿ ಹೇಳಿದ್ದೇವೆ.

ಮಳೆಗಾಲದಲ್ಲಿ ಭೇಟಿ ನೀಡಬಹುದಾದ ಸ್ಥಳಗಳು :

  1. ಲೋನಾವಾಲಾ, ಮಹಾರಾಷ್ಟ್ರ

ಮಹಾರಾಷ್ಟ್ರದ ಲೋನಾವಲಾ ಎಂಬ ಸುಂದರವಾದ ಬೆಟ್ಟದ ಪಟ್ಟಣವು ಮುಂಬೈಗೆ ಸಮೀಪದಲ್ಲಿದೆ. ಇದರ ವೈವಿಧ್ಯಮಯ ಪರ್ವತ ಶ್ರೇಣಿಗಳು, ಕಣ್ಮನ ಸೆಳೆಯುವ ಜಲಪಾತಗಳು, ಕುತೂಹಲ ಕೆರಳಿಸುವ ಗುಹೆಗಳು ಮತ್ತು ಅತ್ಯಾಕರ್ಷಕ ವಸತಿ ಗೃಹಗಳು ಮಳೆಗಾಲದ ಪ್ರವಾಸಕ್ಕೆ ಜೀವ ತುಂಬುತ್ತವೆ. ಈ ಸ್ಥಳವು ಮಳೆಗಾಲದ ಪ್ರಶಾಂತ ವಾತಾವರಣದಲ್ಲಿ ಭೇಟಿ ನೀಡಲು ಯೋಗ್ಯವಾಗಿದೆ.

  1. ಕೋಟಗಿರಿ, ತಮಿಳುನಾಡು

ದೇವಾಲಯಗಳು, ಹಳ್ಳಿಗಳು, ನಗರಗಳು, ಅತ್ಯಂತ ಪ್ರಶಾಂತವಾದ ಕಡಲತೀರಗಳು, ಪ್ರಕೃತಿಯ ದೃಶ್ಯಾವಳಿಗಳು ಮತ್ತು ಸಂಸ್ಕೃತಿಯಿಂದ ತುಂಬಿರುವ ಗಿರಿಧಾಮಗಳು ತಮಿಳುನಾಡಿನಲ್ಲಿ ಕಂಡುಬರುತ್ತವೆ. ತಮಿಳುನಾಡಿನ ಕೋಟಗಿರಿ ಅತ್ಯಂತ ಸುಂದರವಾದ ತಾಣವಾಗಿದೆ.

  1. ಜಿರೋ, ಅರುಣಾಚಲ ಪ್ರದೇಶ

ಕಣಿವೆ ಪ್ರದೇಶವಾದ ಅರುಣಾಚಲ ಪ್ರದೇಶ ಸಾಟಿಯಿಲ್ಲದ ಸೌಂದರ್ಯವನ್ನು ತನ್ನಲ್ಲಿ ಅಡಗಿಸಿಟ್ಟುಕೊಂಡಿದೆ. ಅತ್ಯಂತ ಹಳೆಯ ಇನ್ನೂ ಅಭಿವೃದ್ಧಿಯಾಗದ ತಾಣ ಜಿರೋ ವ್ಯಾಲಿ ಆಗಿದೆ. ಇದು ಅರುಣಾಚಲ ಪ್ರದೇಶದ ದಕ್ಷಿಣ ಸುಬಾನ್ಸಿರಿ ಪ್ರದೇಶದಲ್ಲಿದೆ. ಮಾನ್ಸೂನ್ ಮಳೆಯು ಈ ಕಣಿವೆಗೆ ಹೊಸ ಆಯಾಮವನ್ನು ನೀಡುತ್ತದೆ ಮತ್ತು ಭೂದೃಶ್ಯವನ್ನು ಸುಂದರಗೊಳಿಸುವ ಸೊಂಪಾದ ಮತ್ತು ತಾಜಾ ಹೂವುಗಳಿಂದ ಕಂಗೊಳಿಸುತ್ತದೆ.

  1. ಮೌಂಟ್ ಅಬು, ರಾಜಸ್ಥಾನ

ರಾಜಸ್ಥಾನ ಎಂದರೆ ನಮಗೆಲ್ಲರಿಗೂ ನೆನಪಾಗುವುದು ಬಿಸಿಯಾದ ವಾತಾವರಣ. ಹಾಗೆ ಪರಿಗಣಿಸುವುದರಿಂದ, ಬೇಸಿಗೆಯಲ್ಲಿ ಅಲ್ಲಿಗೆ ಪ್ರವಾಸಕ್ಕೆ ಹೋಗಲು ಹಿಂಜರಿಯುತ್ತೇವೆ, ಅಲ್ಲವೇ? ಆದರೆ ನಿರ್ಜನ ರಾಜ್ಯದ ಸಿರೋಹಿ ಪ್ರದೇಶದಲ್ಲಿ ಮೌಂಟ್ ಅಬು ಎಂಬ ಪ್ರಶಾಂತ ಗಿರಿಧಾಮವಿದೆ. ಇದು ಪ್ರಕೃತಿ ಸೌಂದರ್ಯ ಮತ್ತು ಹಿತವಾದ ಪರಿಸರದ ಧಾಮವಾಗಿದೆ. ಗಿರಿಧಾಮದ ಪ್ರಶಾಂತ ಅನುಭವಗಳನ್ನು ಹೊಂದಲು ಮೌಂಟ್‌ ಅಬು ಉತ್ತಮ ಸ್ಥಳವಾಗಿದೆ.

ಇದನ್ನೂ ಓದಿ : A Trip to the Village : ನಗರಗಳಿಗೆ ಭೇಟಿ ನೀಡಿ ಬೇಜಾರಾಗಿದೆಯೇ ? ಹಾಗಾದರೆ, ಮುಂದಿನ ಸಲ ಈ ಹಳ್ಳಿಗಳಿಗೆ ಟ್ರಿಪ್‌ ಹೋಗಿ…

ಇದನ್ನೂ ಓದಿ : Best Places In Bangalore: ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ ಬೆಂಗಳೂರಿನ ಈ ತಾಣಗಳು

(Monsoon Trip 4 off-beat places that illustrate the beauty of monsoons)

Comments are closed.