students lost corona vaccine : ಮಕ್ಕಳ ಲಸಿಕೆಗೆ ನಿಯಮವೇ ಅಡ್ಡಿ: 8 ಲಕ್ಷ ವಿದ್ಯಾರ್ಥಿಗಳು ಲಸಿಕೆ ವಂಚಿತರು

ಬೆಂಗಳೂರು : ಕರ್ನಾಟಕದಲ್ಲಿ ಕರೋನಾವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರೋ ಉದ್ದೇಶದಿಂದ ಕೊರೋನಾ ವಾಕ್ಸಿನ್ ಶೇಕಡಾ ನೂರಕ್ಕೆ ನೂರರಷ್ಟು ಜನರಿಗೆ ವಿತರಿಸಲು ಸರ್ಕಸ್ ನಡೆಸಿದೆ ರಾಜ್ಯ ಸರ್ಕಾರ. ಈ ಮಧ್ಯೆ ರಾಜ್ಯದಲ್ಲಿ ಮಕ್ಕಳಿಗೂ ಕೊರೋನಾ ಲಸಿಕೆ ವಿತರಣೆಯಾಗುತ್ತಿದೆ. ಆದರೆ ಜನ್ಮದಿನಾಂಕ ಹಾಗೂ ಜನ್ಮ ವರ್ಷದ ಗೊಂದಲದಿಂದ ರಾಜ್ಯದ ಅಂದಾಜು 8 ಲಕ್ಷ ಮಕ್ಕಳು ಕೊರೋನಾ ಲಸಿಕೆಯಿಂದ (students lost corona vaccine) ವಂಚಿತರಾಗಿದ್ದಾರೆ ಎಂಬ ಸಂಗತಿ ಬಯಲಾಗಿದೆ.

ಕರೋನಾ ತೀವ್ರತೆಯನ್ನು ಮನಗಂಡ ಕೇಂದ್ರ ಸರಕಾರ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಅನುಮತಿ ನೀಡಿದೆ. ಅದರಂತೆ ರಾಜ್ಯದಲ್ಲೂ ಮಕ್ಕಳಿಗೆ ಲಸಿಕೆ ವಿತರಣೆ ಆರಂಭವಾಗಿದೆ. ಆದರೆ ಲಸಿಕೆ ವಿತರಣೆಗೆ ಜನ್ಮ ವರ್ಷ ವನ್ನು ಪರಿಗಣಿಸಿ ಜನ್ಮದಿನಾಂಕವನ್ನು ಕಡೆಗಣಿಸುತ್ತಿರುವುದರಿಂದ ಲಕ್ಷಾಂತರ ಮಕ್ಕಳು ಲಸಿಕೆ ಯಿಂದ ( students lost corona vaccine) ವಂಚಿತರಾಗಿದ್ದು, ಪೋಷಕರು ಮಕ್ಕಳಿಗೆ ಮೊದಲ ಲಸಿಕೆ ಕೊಡಿಸದೇ ಶಾಲೆಗೂ ಕಳುಹಿಸಲಾಗದೇ ಆತಂಕಕ್ಕೆ ಒಳಗಾಗಿದ್ದಾರೆ.

ಲಸಿಕಾ ನಿಯಮದಂತೆ 2007 ಡಿಸೆಂಬರ್ 31 ರೊಳಗೆ ಜನಿಸಿದ ಮಕ್ಕಳು ಕೊರೋನಾ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಆದರೆ ಈ ನಿಯಮದಿಂದ 2008 ಜನವರಿ 1 ರಿಂದ ಜನಿಸಿದ ಮಕ್ಕಳಿಗೆ ವಾಕ್ಸಿನ್ ಸಿಗುತ್ತಿಲ್ಲ. ಇದರಿಂದ ಒಂದೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೇ ಲಸಿಕೆ (students lost corona vaccine) ಸಿಗುತ್ತಿಲ್ಲ. ಸರ್ಕಾರದ ಈ ನಿಯಮದಿಂದ ಅಂದಾಜು 8 ಲಕ್ಷ ಮಕ್ಕಳಿಗೆ ಮೊದಲ ಲಸಿಕೆಯೇ ಸಿಕ್ಕಿಲ್ಲ. ಹೀಗಾಗಿ ಮಕ್ಕಳಿಗೆ ಲಸಿಕೆ ವಿತರಿಸಲು ಅನುಕೂಲವಾಗುವಂತೆ ಮಾರ್ಗಸೂಚಿಯನ್ನು ಬದಲಾಯಿಸುವಂತೆ ಪೋಷಕರು ಒತ್ತಾಯಿಸಿದ್ದಾರೆ.

ವಯಸ್ಕರ ಲಸಿಕೆ ವೇಳೆ ಅಂದ್ರೆ 60 ವರ್ಷಕ್ಕೆ ಮೇಲ್ಪಟ್ಟವರು, 45 ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಜನ್ಮ ದಿನಾಂಕ ಹಾಗೂ ವರ್ಷವನ್ನು ಪರಿಗಣಿಸಿ ವಾಕ್ಸಿನ್ ನೀಡಲಾಗುತ್ತಿತ್ತು. ಆದರೆ ಮಕ್ಕಳ ಲಸಿಕೆ ವಿಚಾರದಲ್ಲಿ ಮಾತ್ರ ಈ‌ ನಿಯಮ ಅನುಸರಿಸುತ್ತಿಲ್ಲ. ಹೀಗಾಗಿ ಪೋಷಕರು ಲಸಿಕೆ ವಿತರಿಸಲು ನಿಯಮ ಬದಲಾಯಿಸಿ ಎಂದು ಒತ್ತಾಯಿಸಿದ್ದಾರೆ. ಸದ್ಯ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಪ್ರಮಾಣ ತಗ್ಗಿದ್ದು ಫೆ.26 ಕ್ಕೆ ಕೊನೆಗೊಂಡ ಅಂಕಿಅಂಶಗಳ ಪ್ರಕಾರ 514 ಹೊಸ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಇನ್ನೂ ಕೊರೋನಾ ಅಪಾಯ ಸಂಪೂರ್ಣ ತಗ್ಗದೇ ಇರೋದರಿಂದ ಮಕ್ಕಳ ಲಸಿಕೆಗೆ ಅವಕಾಶ ನೀಡಲು ಪೋಷಕರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ : ಮುಂದಿನ ಕೋವಿಡ್​ ರೂಪಾಂತರಿಯ ಬಗ್ಗೆ ಬೆಚ್ಚಿಬೀಳಿಸುವ ಮಾಹಿತಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆ

ಇದನ್ನೂ ಓದಿ : ಈ ದೇಶಗಳಲ್ಲಿ ಕೊರೊನಾ ವೈರಸ್‌ನ ಒಂದೇ ಒಂದು ಪ್ರಕರಣವೂ ಇಲ್ಲ!

(Rules obstruct children to get vaccinated, 8 lakh students lost corona vaccine )

Comments are closed.