IND vs SL 3rd T20I : ಶ್ರೀಲಂಕಾ ವಿರುದ್ದ ಸರಣಿ ಗೆದ್ದ ಭಾರತ : T20 ಇತಿಹಾಸದಲ್ಲಿ ದಾಖಲೆ ಬರೆದ ರೋಹಿತ್‌ ಶರ್ಮಾ

ಧರ್ಮಶಾಲಾ : ಭರವಸೆಯ ಯುವ ಆಟಗಾರ ಶ್ರೇಯಸ್‌ ಅಯ್ಯರ್‌ ಸ್ಪೋಟಕ ಆಟದ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ದದ T20 (IND vs SL 3rd T20I) ಸರಣಿಯ ಮೂರನೇ ಪಂದ್ಯವನ್ನು 6 ವಿಕೆಟ್‌ಗಳ ಅಂತರದಿಂದ ಜಯಿಸುವ ಮೂಲಕ ಸರಣಿಯನ್ನು ಕ್ಲೀನ್‌ಸ್ವೀಪ್‌ ಮಾಡಿದೆ. ಈ ನಡುವಲ್ಲೇ ಭಾರತ ತಂಡದ ನಾಯಕ ಸತತವಾಗಿ ಮೂರು T20 ಸರಣಿಗಳನ್ನು ಗೆಲ್ಲುವ ಮೂಲಕ ವಿಶಿಷ್ಠ ದಾಖಲೆಯನ್ನು ಬರೆದಿದ್ದಾರೆ.

ind-vs-sl-3rd-t20i-india-to-6-wicket-win-sl 2

ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಶನ್‌ ಸ್ಟೇಡಿಯಂನಲ್ಲಿ ನಡೆದ ಅಂತಿಮ T20 ಪಂದ್ಯದಲ್ಲಿ (ಭಾರತ ತಂಡದ ನಾಯಕ ಸತತವಾಗಿ ಮೂರು T20 ಸರಣಿಗಳನ್ನು ಗೆಲ್ಲುವ ಮೂಲಕ ವಿಶಿಷ್ಠ ದಾಖಲೆಯನ್ನು ಬರೆದಿದ್ದಾರೆ.) ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ತಂಡಕ್ಕೆ ಆವೇಶ್‌ ಖಾನ್‌, ಮೊಹಮ್ಮದ್‌ ಸಿರಾಜ್‌ ಹಾಗೂ ರವಿ ಬಿಶ್ನೋಯಿ ಆಘಾತವನ್ನು ನೀಡಿದ್ರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ವಿಕೆಟ್‌ ಕೀಪರ್‌ ಚಾಂಡಿಮಾನ್‌ ಹಾಗೂ ನಾಯಕ ಶನಕ ಉತ್ತಮ ಜೊತೆಯಾಟವಾಡಿದ್ರು. ಚಾಂಡಿಮಾಲ್‌ 22 ರನ್‌ ಗಳಿಸಿ ಔಟಾದ್ರೆ, ಶನಕ ಅಜೇತ ೭೪ರನ್‌ ರನ್‌ ಬಾರಿಸಿದ್ದಾರೆ. ಸಿ ಕರುಣರತ್ನೆ 12 ರನ್‌ ಆಟದ ನೆರವಿನಿಂದ ಶ್ರೀಲಂಕಾ ತಂಡ 20 ಒವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 146 ರನ್‌ ದಾಖಲಿಸಿತ್ತು. ಭಾರತ ಪರ ಆವೇಶ್‌ ಖಾನ್‌ 2 ಹಾಗೂ ಸಿರಾಜ್‌, ಹರ್ಷಲ್‌ ಪಟೇಲ್‌ ಹಾಗೂ ರವಿ ಬಿಶ್ನೋಯಿ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡಿದ್ದಾರೆ.

ind-vs-sl-3rd-t20i-india-to-6-wicket-win-sl 1

ಇಶಾನ್‌ ಕಿಶನ್‌ ಅನುಪಸ್ಥಿತಿಯಲ್ಲಿ ರೋಹಿತ್‌ ಶರ್ಮಾ ಜೊತೆಗೆ ಸಂಜು ಸ್ಯಾಮ್ಸನ್‌ ಇನ್ನಿಂಗ್ಸ್‌ ಆರಂಭಿಸಿದ್ರು. ಆದರೆ ನಾಯಕ ರೋಹಿತ್‌ ಶರ್ಮಾ ಮತ್ತದೆ ಕಳಪೆ ಫಾರ್ಮ್‌ ಪ್ರದರ್ಶಿಸಿದ್ರು. ಕೇವಲ 5ರನ್‌ ಗಳಿಗೆ ವಿಕೆಟ್‌ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ರು. ನಂತರ ಸ್ಯಾಮ್ಸನ್‌ ಜೊತೆಯಾದ ಶ್ರೇಯಸ್‌ ಅಯ್ಯರ್‌ ಉತ್ತಮ ಇನ್ನಿಂಗ್ಸ್‌ ಕಟ್ಟೋದಕ್ಕೆ ಮುಂದಾದ್ರು. ಆದರೆ 18 ರನ್‌ ಗಳಿಸಿ ಆಡುತ್ತಿದ್ದ ಸಂಜು ಸ್ಯಾಮ್ಸನ್‌ ಕರುಣರತ್ನಗೆ ವಿಕೆಟ್‌ ಒಪ್ಪಿಸಿದ್ರು. ನಂತರ ದೀಪಕ್‌ ಹೂಡಾ ಜೊತೆಯಾದ ಶ್ರೇಯಸ್‌ ಅಯ್ಯರ್‌ ಭಾರತ ತಂಡವನ್ನು ಗೆಲುವಿನ ದಡ ಸಾಗಿಸಿದ್ರು. ಶ್ರೇಯಸ್‌ ಅಯ್ಯರ್‌ 45 ಎಸೆತಗಳಲ್ಲಿ 73ರನ್‌ ಸಿಡಿಸಿದ್ರೆ ಹೂಡ 21 ರನ್‌ ಬಾರಿಸಿದ್ರು. ಅಂತಿಮವಾಗಿ ವೆಂಕಟೇಶ್‌ ಅಯ್ಯರ್‌ 5 ರನ್‌ ಗಳಿಸುವ ಮೂಲಕ ಭಾರತ ತಂಡ ಇನ್ನೂ 3.1 ಓವರ್‌ ಬಾಕಿ ಇರುವಂತೆಯೇ ೨೦ ಓವರ್‌ ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ೧೪೮ ರನ್‌ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿದೆ. ಶ್ರೀಲಂಕಾ ಪರ ಲಹಿರು ಕುಮಾರ್‌ 2, ಕರುಣರತ್ನೆ ಹಾಗೂ ಚಾಮೀರ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡಿದ್ದಾರೆ.

IND vs SL 3rd T20I ಸಂಕ್ಷೀಪ್ತ ಸ್ಕೋರ್‌ :

ಭಾರತ (148/4 ) : ಶ್ರೇಯಸ್‌ ಅಯ್ಯರ್‌ 73, ದೀಪಕ್‌ ಹೂಡಾ 21 , ಸಂಜು ಸ್ಯಾಮ್ಸನ್‌ 18 , ಲಹಿರು ಕುಮಾರ್‌ 39/2 , ಚಾಮೀರ 19/1 , ಕರುಣರತ್ನೆ 31/1

ಶ್ರೀಲಂಕಾ (146) : ಶನಕ 74 , ಚಾಂಡಿಮಾಲ್‌ 22 , ಸಿ.ಕರುಣರತ್ನೆ12 , ಆವೇಶ್‌ ಖಾನ್‌ 23/2, ಹರ್ಷಲ್‌ ಪಟೇಲ್‌ 29/1, ರವಿ ಬಿಶ್ನೋಯಿ 32/1, ಸಿರಾಜ್‌ 22/1

ಇದನ್ನೂ ಓದಿ : Virat Kohli : ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ವಿರಾಟ್‌ ಕೊಹ್ಲಿ ನಾಯಕ

ಇದನ್ನೂ ಓದಿ : IPL 2022 New format : ಹೊಸ ಸ್ವರೂಪದಲ್ಲಿ IPL 2022 : 2 ಗುಂಪು, 10 ತಂಡ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

IND vs SL 3rd T20I 2022 live updates India to 6 wicket win against SL

Comments are closed.