ಕೊರೊನಾ ವೈರಸ್ನ ಇನ್ನೂ ಹೆಚ್ಚಿನ ವೇಗದಲ್ಲಿ ಹರಡುವ ಕೊರೊನಾ ವೈರಸ್ನ ಹೊಸ ರೂಪಾಂತರಿಯ ಕ್ಸಿ ರೂಪಾಂತರಿ ಪ್ರಕರಣವು (XE variant ) ಗುಜರಾತ್ನಲ್ಲಿ ಬೆಳಕಿಗೆ ಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ. ಮಾರ್ಚ್ 13ರಂದು ರೋಗಿಯೊಬ್ಬರು ಕೋವಿಡ್ 19 ಪಾಸಿಟಿವ್ ವರದಿಯನ್ನು ಪಡೆದಿದ್ದಾರೆ . ಇವರು ಸೋಂಕು ತಗುಲಿದ ಒಂದು ವಾರದಲ್ಲಿ ಚೇತರಿಸಿಕೊಂಡಿದ್ದಾರೆ.
ಜೀನೋಮ್ – ಸ್ವಿಕ್ವೆನ್ಸಿಂಗ್ ನಡೆಸಿದ ಬಳಿಕ ರೋಗಿಗೆ ಕೊರೊನಾ ವೈರಸ್ನ ಕ್ಸಿ ರೂಪಾಂತರದ ಸೋಂಕಿಗೆ ಒಳಗಾಗಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಇದು ಕ್ಸಿ ರೂಪಾಂತರವೇ ನಿಜವಾಗಿಯೂ ಹೌದು ಖಚಿತಪಡಿಸಲು ಈ ಮಾದರಿಯನ್ನು ಮರುಪರಿಶೀಲಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಈ ಮೂಲಕ ಗುಜರಾತ್ ಹಾಗೂ ಮಹಾರಾಷ್ಟ್ರದ ಮುಂಬೈನಲ್ಲಿ ಕ್ಸಿ ರೂಪಾಂತರದ ತಲಾ ಒಂದೊಂದು ಪ್ರಕರಣಗಳು ಪತ್ತೆಯಾದಂತಾಗಿದೆ.
ಏನಿದು ಕ್ಸಿ …?
ಹೊಸ ರೂಪಾಂತರವಾದ ಕ್ಸಿ ಓಮಿಕ್ರಾನ್ನ ಎರಡು ಆವೃತ್ತಿಗಳಾದ BA.1 ಮತ್ತು BA.2. ರೂಪಾಂತರಿತ ಹೈಬ್ರಿಡ್ ಆಗಿದೆ. ಇದೀಗ ಸಣ್ಣ ಪ್ರಮಾಣದಲ್ಲಿ ವಿಶ್ವದಲ್ಲಿ ಕಾಣಿಸಿಕೊಳ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯು ನೀಡಿರುವ ಮಾಹಿತಿಯ ಪ್ರಕಾರ ಓಮಿ್ಕ್ರಾನ್ನ ಈ ಹೊಸ ರೂಪಾಂತರವು ಹಿಂದಿನ ರೂಪಾಂತರಕ್ಕಿಂತ ಸುಮಾರು 10 ಪ್ರತಿಶತ ವೇಗದಲ್ಲಿ ಹರಡುತ್ತದೆ ಎನ್ನಲಾಗಿದೆ. ಹೀಗಾಗಿ ಈ ರೂಪಾಂತರಿಯನ್ನು ಈವರೆಗಿನ ಕೊರೊನಾದ ಎಲ್ಲಾ ರೂಪಾಂತರಿಗಳಿಗಿಂತ ಅತ್ಯಂತ ವೇಗವಾಗಿ ಹರಡುವ ರೂಪಾಂತರಿ ಎಂದು ಪರಿಗಣಿಸಲಾಗಿದೆ.
ಬುಧವಾರದಂದು ಬಿಎಂಸಿಯು ಕ್ಸಿ ರೂಪಾಂತರದ ಮೊದಲ ಪ್ರಕರಣವು ಮುಂಬೈನಲ್ಲಿ ಪತ್ತೆಯಾಗಿದೆ ಎಂದು ಘೋಷಣೆ ಮಾಡಿತ್ತು. ಆದರೆ ಕೇಂದ್ರ ಸರ್ಕಾರವು ಇದನ್ನು ಒಪ್ಪಿರಲಿಲ್ಲ.
ಇದನ್ನು ಓದಿ : KGF 2 : ಕೆಜಿಎಫ್ ಅನ್ನು ಪಾನ್ ಇಂಡಿಯಾ, ಸೌತ್ ಇಂಡಿಯಾ ಸಿನಿಮಾ ಅನ್ನ ಬೇಡಿ! ಅದು ಅದ್ಭುತ ಹಿಂದೂಸ್ತಾನ್ ಮೂವಿ ಎಂದ ಸಂಜಯ್ ದತ್
ಇದನ್ನೂ ಓದಿ : COVID-19 Booster Dose ನೋಂದಣಿ ಹೇಗೆ, ಲಸಿಕೆಯ ಬೆಲೆ ಎಷ್ಟು : ಬೂಸ್ಟರ್ ಡೋಸ್ ಪಡೆಯಲು ನೀವು ಅರ್ಹರೆ : ಇಲ್ಲಿದೆ ಕಂಪ್ಲೀಟ್ ಮಾಹಿತಿ
After Mumbai scare, XE variant of coronavirus detected in Gujarat: Govt sources