Bengaluru corona fear: ಬೆಂಗಳೂರಲ್ಲಿ ಕೊರೊನಾ ಸೋಂಕು ಹೆಚ್ಚುವ ಭೀತಿ : ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆ ಮೀಸಲಿರಿಸಿದ ಆರೋಗ್ಯ ಇಲಾಖೆ

Bengaluru corona fear ರಾಜ್ಯದಲ್ಲಿ ನಿಧಾನಕ್ಕೆ ಕರೋನಾ ಪ್ರಕರಣಗಳು ಏರಿಕೆಯಾಗುತ್ತಿದೆ. ಇನ್ನೊಂದೆಡೆ ಬೆಂಗಳೂರಿನ ಅಪಾರ್ಟ್ಮೆಂಟ್ ಗಳು ಕೊರೋನಾ ಹಾಟ್ ಸ್ಪಾಟ್ ಗಳಾಗುತ್ತಿವೆ. ಅಲ್ಲದೇ ಓಮೈಕ್ರಾನ್ ಪ್ರಕರಣಗಳು ಏರಿಕೆಯಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಹೆಚ್ಚುತ್ತಿರುವ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಮತ್ತೊಂದು ಆಸ್ಪತ್ರೆಯನ್ನು ಚಿಕಿತ್ಸೆಗಾಗಿ ಸಜ್ಜುಗೊಳಿಸಿದೆ.

ಈಗಾಗಲೇ ಬೆಂಗಳೂರು ನಗರದಲ್ಲಿ ಬೌರಿಂಗ್ ಆಸ್ಪತ್ರೆಯನ್ನು ಓಮೈಕ್ರಾನ್ ಚಿಕಿತ್ಸೆಗೆ ಮೀಸಲಿರಿಸಲಾಗಿತ್ತು. Bengaluru corona fear ಹೈರಿಸ್ಕ್ ದೇಶದಿಂದ ಬಂದ ಓಮೈಕ್ರಾನ್ ರೋಗಿಗಳಿಗೆ ಇಲ್ಲಿಯೇ ಚಿಕಿತ್ಸೆ ನೀಡಿ ಕಳುಹಿಸಲಾಗಿತ್ತು. ಆದರೆ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚಿದ್ದರಿಂದ ಹಾಗೂ ಓಮೈಕ್ರಾನ್ ಸಮುದಾಯಕ್ಕೆ ಹಬ್ಬಿದ ಭೀತಿ ಎದುರಾಗಿದ್ದರಿಂದ ಆರೋಗ್ಯ ಇಲಾಖೆ ರಾಜೀವಗಾಂಧಿ ಎದೆರೋಗ ಆಸ್ಪತ್ರೆಯನ್ನು ಓಮೈಕ್ರಾನ್ ಚಿಕಿತ್ಸೆಗೆ ಸಿದ್ಧಗೊಳಿಸಿ ಆದೇಶ ಹೊರಡಿಸಿತ್ತು. ಅಲ್ಲಿ ನೂರಕ್ಕೂ ಹೆಚ್ಚು ಆಕ್ಸಿಜನ್ ಬೆಡ್ ವ್ಯವಸ್ಥೆ ಯನ್ನು ಕಲ್ಪಿಸಲಾಗಿತ್ತು.

ಆದರೆ ಈಗ ಪ್ರತಿನಿತ್ಯ ಕೊರೋನಾ ಹಾಗೂ ಓಮೈಕ್ರಾನ್ ಸೋಂಕಿನ ಪ್ರಮಾಣ ಹೆಚ್ಚಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಸಾವಿರಕ್ಕೆ ಸಮೀಪಿಸಿದೆ. ಈ ಹಿನ್ನೆಲೆಯಲ್ಲಿ ನಗರದ ಸಿ.ವಿ.ರಾಮನ್ ಆಸ್ಪತ್ರೆಯನ್ನು ಓಮೈಕ್ರಾನ್ ಚಿಕಿತ್ಸೆಗೆ ಮೀಸಲಿರಿಸಿ ಆದೇಶ ಹೊರಡಿಸಲಾಗಿದೆ. ನಗರದಲ್ಲಿ ಹೊಸ ವರ್ಷಾಚರಣೆ ಸಂಭ್ರಮ ಇರೋದರಿಂದ ಈ ವಾರದಲ್ಲಿ ಮತ್ತಷ್ಟು ಓಮೈಕ್ರಾನ್ ಹಾಗೂ ಕೊರೋನಾ ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸಿ.ವಿ.ರಾಮನ್ ಜನರಲ್ ಆಸ್ಪತ್ರೆಯನ್ನು ಮೀಸಲಿರಿಸಲಾಗಿದೆ.

ಇದನ್ನು ಓದಿ : ಇ-ಸಿಮ್ ಇದ್ರೆ ಈಗ ಬಳಸುವ ಭೌತಿಕ ಸಿಮ್ ಬೇಕಿಲ್ಲ; ಹಾಗಿದ್ರೆ ಏನಿದು ಇ-ಸಿಮ್? ಹೇಗೆ ಖರೀದಿಸುವುದು?

ಸಿವಿ ರಾಮನ್ ಜನರಲ್ ಆಸ್ಪತ್ರೆಯಲ್ಲಿ ಒಟ್ಟು 166 ಬೆಡ್ ಗಳಿದ್ದು, ಇದರಲ್ಲಿ ಐಸಿಯು ವಿತ್ ವೆಂಟಿಲೇಟರ್ 16 ಬೆಡ್ ಗಳಿದ್ದು, 30 ಹೆಚ್ ಡಿಯು ಬೆಡ್ (high dependency unit)75 ಬೆಡ್ ಗಳು ಆಕ್ಸಿಜನ್ ವ್ಯವಸ್ಥೆ ಹೊಂದಿವೆ. ಇನ್ನು 45 ಜನರಲ್ ಬೆಡ್ ಗಳು ಸಿವಿರಾಮನ್ ಆಸ್ಪತ್ರೆಯಲ್ಲಿ ಲಭ್ಯವಿದೆ. ಒಟ್ಟಿನಲ್ಲಿ ನಗರದಲ್ಲಿ ಮತ್ತಷ್ಟು ಓಮೈಕ್ರಾನ್ ಹಾಗೂ ಕೊರೋನಾ ಪ್ರಕರಣಗಳು ವರದಿಯಾಗೋ ಮುನ್ಸೂಚನೆ‌ಇದ್ದು ಇದಕ್ಕಾಗಿ ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೇವಲ ಸರ್ಕಾರಿ ಮಾತ್ರವಲ್ಲ ಖಾಸಗಿ ಆಸ್ಪತ್ರೆಯಲ್ಲೂ ಓಮೈಕ್ರಾನ್ ಹಾಗೂ ಕೊರೋನಾ ರೋಗಿಗಳಿಗೆ ಚಿಕಿತ್ಸೆ ಲಭ್ಯವಿದ್ದು ರೋಗಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ನಗರದಲ್ಲಿ ನಿನ್ನೇ ಒಂದೇ ದಿನ 500 ಕ್ಕೂ ಅಧಿಕ ಕೊರೋನಾ ಪ್ರಕರಣಗಳು ವರದಿಯಾಗಿವೆ.

ಓಮಿಕ್ರಾನ್ ಪ್ರಕರಣ ವರದಿ, ಚಿಕಿತ್ಸೆ ನಡುವೆಯೇ ಇದೀಗ ದೇಶದಲ್ಲಿ ಓಮಿಕ್ರಾನ್ ಸೋಂಕನ್ನು ಹೊಂದಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇಡೀ ದೇಶದಲ್ಲಿ ಪ್ರಸ್ತುತ ಮಹಾರಾಷ್ಟ್ರವು ಅತೀ ಹೆಚ್ಚು ಕೊರೊನಾ ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡುತ್ತಿದೆ. ಇದೇ ರಾಜ್ಯದ ಪಿಂಪ್ರಿ ಜಿಲ್ಲೆಯಲ್ಲಿ ಓಮಿಕ್ರಾನ್ ರೂಪಾಂತರಿ ಸೋಂಕು ಹೊಂದಿದ್ದ ವ್ಯಕ್ತಿಯು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಓಮಿಕ್ರಾನ್ ರೂಪಾಂತರಿ ಸೋಂಕು ಹೊಂದಿದ್ದ 52 ವರ್ಷದ ವ್ಯಕ್ತಿಯೊಬ್ಬರು ಕಾರ್ಡಿಯಾಕ್ ಅರೆಸ್ಟ್ನಿಂದ ಸಾವನ್ನಪ್ಪಿದ್ದಾರೆ. ಈ ವ್ಯಕ್ತಿಗೆ ಓಮಿಕ್ರಾನ್ ಹೊರತುಪಡಿಸಿ ಬೇರೆಯ ಅನಾರೋಗ್ಯವೂ ಇದ್ದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಇದನ್ನು ಕೋವಿಡ್ ಒಮಿಕ್ರಾನ್ ಸಾವು ಎಂದು ಘೋಷಣೆ ಮಾಡಿಲ್ಲ ಎನ್ನಲಾಗಿದೆ.

ಕೆಲ ದಿನಗಳ ಹಿಂದಷ್ಟೇ ನೈಜಿರಿಯಾದಿಂದ ಮಹಾರಾಷ್ಟ್ರದ ಪಿಂಪ್ರಿಗೆ ಆಗಮಿಸಿದ್ದ ಸೋಂಕಿತ ವ್ಯಕ್ತಿಯು ದೀರ್ಘಕಾಲದಿಂದ ಮಧುಮೇಹದಿಂದ ಬಳಲುತ್ತಿದ್ದರು. ಕೊರೊನಾ ಸೋಂಕಿಗೆ ಒಳಗಾಗಿದ್ದ ಇವರನ್ನು ಚಿಂಚ್ವಾಡದಲ್ಲಿರುವ ವೈ.ಬಿ ಚವನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಲ್ಲಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಆದರೆ ಪ್ರಯೋಗಾಲಯದ ವರದಿಗಳು ಇವರಿಗೆ ಓಮಿಕ್ರಾನ್ ರೂಪಾಂತರಿಯ ಸೋಂಕು ತಗುಲಿತ್ತು ಎಂದು ಹೇಳಿವೆ.

Comments are closed.