ಭಾನುವಾರ, ಏಪ್ರಿಲ್ 27, 2025
HomeCorona Updates100% Covid vaccination coverage : ಎರಡನೆ ಡೋಸ್​ ಲಸಿಕೆ ವಿಚಾರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ...

100% Covid vaccination coverage : ಎರಡನೆ ಡೋಸ್​ ಲಸಿಕೆ ವಿಚಾರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ ರಾಜ್ಯದ ಈ ಜಿಲ್ಲೆ

- Advertisement -

ಬೆಂಗಳೂರು : 100% Covid vaccination coverage : ಕೊರೊನಾ ಸೋಂಕಿನ ವಿರುದ್ಧ ಹೋರಾಡುವಲ್ಲಿ ಕೋವಿಡ್ ಲಸಿಕೆಗಳು ಪ್ರಮುಖ ಪಾತ್ರವನ್ನು ವಹಿಸಿವೆ. ಹೀಗಾಗಿ ದೇಶಾದ್ಯಂತ ಕೊರೊನಾ ಲಸಿಕಾ ಅಭಿಯಾನವು ಅತ್ಯಂತ ಚುರುಕುಗತಿಯಲ್ಲಿ ಸಾಗುತ್ತಿದೆ. ಕೊರೊನಾ ಲಸಿಕೆ ಅಭಿಯಾನದ ವಿಚಾರದಲ್ಲಿ ಈ ಬಾರಿ ನಮ್ಮ ರಾಜ್ಯವು ಹೊಸದೊಂದು ಮೈಲಿಗಲ್ಲನ್ನು ಸಾಧಿಸಿದೆ.


ಹೌದು..! ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಕೊರೊನಾ ಲಸಿಕೆ ವಿಚಾರದಲ್ಲಿ ಹೊಸದೊಂದು ಸಾಧನೆಯನ್ನು ಮಾಡಿದೆ. ಎರಡನೇ ಡೋಸ್​ ಲಸಿಕೆ ನೀಡುವಿಕೆಯಲ್ಲಿ ನೂರು ಪ್ರತಿಶತ ಗುರಿ ತಲುಪಿದ ಕರ್ನಾಟಕದ ಮೊದಲ ಜಿಲ್ಲೆ ಎಂಬ ಕೀರ್ತಿಗೆ ಪಾತ್ರವಾಗಿದೆ.


ಟ್ವೀಟ್​ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿದರು. ಎರಡನೇ ಡೋಸ್​ ಲಸಿಕೆ ನೀಡುವಿಕೆಯಲ್ಲಿ ರಾಜ್ಯದಲ್ಲಿ 11 ಜಿಲ್ಲೆಗಳು ಶೇಕಡಾ 90ರಷ್ಟು ಸಾಧನೆ ಮಾಡಿದೆ. ಈ ಸಾಧನೆಯಲ್ಲಿ ತೊಡಗಿಸಿಕೊಂಡ ಎಲ್ಲಾ ಆರೋಗ್ಯ ಕಾರ್ಯಕರ್ತರು ಹಾಗೂ ಜಿಲ್ಲಾಡಳಿತಕ್ಕೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.


ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಕೊರೊನಾ ಎರಡನೇ ಲಸಿಕೆಯಲ್ಲಿ 100 ಪ್ರತಿಶತ ಸಾಧನೆಯನ್ನು ಮಾಡಿದ್ದರೆ. ವಿಜಯಪುರ ಜಿಲ್ಲೆಯು 99 ಪ್ರತಿಶತ ಸಾಧನೆಯನ್ನು ಮಾಡಿದೆ. ಕೊಡಗು ಶೇಕಡಾ 97, ಗದಗ ಶೇಕಡಾ 95, ಮಂಡ್ಯ ಶೇಕಡಾ 93 ಸಾಧನೆಯನ್ನು ಮಾಡಿ ಟಾಪ್​ 5 ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್​ ಮಾಹಿತಿ ನೀಡಿದರು.


ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 8,18,654 ಮಂದಿ ಕೊರೊನಾ ಎರಡನೇ ಡೋಸ್​ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಭಾನುವಾರದಂದು ಬೆಂಗಳೂರು ಗ್ರಾಮಾಂತರದಲ್ಲಿ 11,938 ಕೊರೊನಾ ಪ್ರಕರಣಗಳು ಹಾಗೂ 14 ಕೊರೊನಾ ಸಾವುಗಳು ವರದಿಯಾಗಿವೆ.

Bengaluru Rural becomes first district in Karnataka to achieve 100% Covid vaccination coverage

ಇದನ್ನು ಓದಿ : Gungun Upadhyay : ಹೋಟೆಲ್‌ನ 6ನೇ ಮಹಡಿಯಿಂದ ಜಿಗಿದು ಖ್ಯಾತ ಮಾಡೆಲ್‌ ಗುಂಗುನ್‌ ಉಪಾಧ್ಯಾಯ ಆತ್ಮಹತ್ಯೆ ಯತ್ನ

ಇದನ್ನೂ ಓದಿ : Badava Rascal : ಕನ್ನಡದ ಬಳಿಕ ತೆಲುಗಿಗೆ ಬಡವ ರಾಸ್ಕಲ್ : ಡಾಲಿ ಧನಂಜಯ್ ಸಿನಿಮಾ ಪೋಸ್ಟರ್ ರಿಲೀಸ್

RELATED ARTICLES

Most Popular