Intranasal COVID-19 Vaccine : ಭಾರತ್ ಬಯೋಟೆಕ್ನ ಇಂಟ್ರಾನಾಸಲ್ ಲಸಿಕೆಗಳ ಮೂರನೇ ಹಂತದ ಪ್ರಯೋಗಗಳನ್ನು ನಡೆಸಲು ಹಾಗೂ ಅದನ್ನು ಬೂಸ್ಟರ್ ಡೋಸ್ ಆಗಿ ಬಳಕೆ ಮಾಡಬಹುದೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಂಬಂಧ ಅಧ್ಯಯನ ನಡೆಸುವಂತೆ ಡಿಸಿಜಿಐ ಹಸಿರು ನಿಶಾನೆ ತೋರಿದೆ. ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳನ್ನು ಸಂಪೂರ್ಣವಾಗಿ ಪಡೆದ ವ್ಯಕ್ತಿಗಳ ಮೇಲೆ ಬೂಸ್ಟರ್ ಡೋಸ್ ಲಸಿಕೆಯಾಗಿ ಇಂಟ್ರಾನಾಸಲ್ ಲಸಿಕೆಗಳನ್ನು ಬಳಸಲು ಅನುಮತಿ ನೀಡುವಂತೆ ಕೋರಿ ಹೈದರಾಬಾದ್ ಮೂಲದ ಕಂಪನಿಯು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಡಿಸಿಜಿಐ ಮೂರನೇ ಹಂತದ ಅಧ್ಯಯನಕ್ಕೆ ಅನುಮೋದನೆ ನೀಡಿದೆ.
ಬೂಸ್ಟರ್ ಟ್ರಯಲ್ನಲ್ಲಿ ಕೋವಿಶೀಲ್ಡ್ನ್ನೂ ಸೇರಿಸಿಕೊಳ್ಳುವಂತೆ ಎಸ್ಇಸಿ ಒತ್ತಾಯಿಸಿದ್ದರಿಂದ ಈ ಬಗ್ಗೆಯೂ ಇಂದು ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಭಾರತದಲ್ಲಿ ಉತ್ಪಾದನೆಯಾಗಲಿರುವ ಈ ಲಸಿಕೆಗಳಿಗೆ BBV154 ಎಂದು ಹೆಸರಿಡಲಾಗಿದೆ. ಸ್ನಾಯುಗಳಿಗೆ ಪಡೆಯುವಂತಹ ಲಸಿಕೆಗಳನ್ನು ಇಂಟ್ರಾಮಸ್ಕುಲಾರ್ ಎಂದು ಕರೆಯಲಾಗುತ್ತದೆ. ಇದು ಮೂಗಿಗೆ ನೀಡುವ ಲಸಿಕೆಯಾಗಿರೋದ್ರಿಂದ ಇದಕ್ಕೆ ಇಂಟ್ರಾನಾಸಲ್ ಎಂದು ಕರೆಯಲಾಗುತ್ತದೆ. ಇದು ಕೊರೊನಾ ಸೋಂಕಿನ ಗಂಭೀರತೆ ಹಾಗೂ ಹರಡುವಿಕೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ಇದು ಸೂಜಿ ಮುಕ್ತವಾದ ಲಸಿಕೆಯಾಗಿದೆ. ಹೀಗಾಗಿ ಇದನ್ನು ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರೇ ನೀಡಬೇಕು ಎಂಬ ಅಗತ್ಯ ಇರೋದಿಲ್ಲ. ಕಳೆದ ವರ್ಷ ಈ ಲಸಿಕೆಯ ಹಂತ 1 ಹಾಗೂ ಹಂತ 2ರ ಪ್ರಯೋಗಗಳನ್ನು ಕ್ರಮವಾಗಿ 450 ಹಾಗೂ 650 ಮಂದಿಯ ಮೇಲೆ ನಡೆಸಲಾಗಿತ್ತು.
ಮೊದಲ ಹಂತದ ಪರೀಕ್ಷೆಯಲ್ಲಿ ಈ ಲಸಿಕೆಗಳು ಯಾರ ಮೇಲೆಯೂ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡಿಲ್ಲ. ದೇಶದ ನಾಲ್ಕು ನಗರಗಳಲ್ಲಿ ಮೊದಲನೇ ಹಂತದ ಪರೀಕ್ಷೆಯನ್ನು ನಡೆಸಲಾಗಿತ್ತು. 2ನೆ ಹಂತದ ಲಸಿಕೆಗಳ ಪ್ರಯೋಗ ಕೂಡ ಸಕರಾತ್ಮಕ ಫಲಿತಾಂಶವನ್ನೇ ನೀಡಿದೆ. ಹೀಗಾಗಿ ಶೀಘ್ರದಲ್ಲಿಯೇ ಇಂಟ್ರಾನಾಸಲ್ ಲಸಿಕೆಗಳು ದೇಶದಲ್ಲಿ ಬೂಸ್ಟರ್ ಡೋಸ್ಗಳಾಗಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.
Bharat Biotech Gets Nod To Conduct Phase 3 & Booster Trials Of Intranasal COVID-19 Vaccine
ಇದನ್ನು ಓದಿ : corona 3rd wave : ರಾಜ್ಯಕ್ಕೆ ಮೂರನೆ ಅಲೆಯ ಎಂಟ್ರಿಯಾಗಿದೆ: ಆತಂಕಕಾರಿ ಮಾಹಿತಿ ನೀಡಿದ ಸಚಿವ ಡಾ.ಸುಧಾಕರ್
ಇದನ್ನೂ ಓದಿ : fresh COVID cases : ದೇಶದಲ್ಲಿ ಒಂದೇ ದಿನ 58,097 ಹೊಸ ಕೋವಿಡ್ ಪ್ರಕರಣಗಳು ವರದಿ