Bulli Bai App Row: ಹಿಂದೂ ಮಹಿಳೆಯರೇ ಇವರ ಟಾರ್ಗೆಟ್; ಅಶ್ಲೀಲ ಚಿತ್ರಗಳನ್ನು ರವಾನಿಸುತ್ತಿದ್ದ ಟೆಲಿಗ್ರಾಮ್ ಚಾನಲ್ ಬಂದ್

ನವದೆಹಲಿ: ಹಿಂದೂ ಮಹಿಳೆಯರನ್ನು (Hindu Women) ಗುರಿಯಾಗಿಸಿಕೊಂಡು ಅವರಿಗೆ ಆನ್‌ಲೈನ್‌ ಮೂಲಕ ಅಶ್ಲೀಲ ಚಿತ್ರಗಳನ್ನು ರವಾನಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಆರೋಪ ಹೊತ್ತಿದ್ದ ಟೆಲಿಗ್ರಾಮ್ ವಾಹಿನಿಯೊಂದನ್ನು (Telegram Channel) ಕೇಂದ್ರ ಸರಕಾರವು ನಿಷ್ಕ್ರಿಯಗೊಳಿಸಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnav) ಟ್ವೀಟ್ ಮಾಡಿ ತಿಳಿಸಿದ್ದಾರೆ. ಇದೇ ರೀತಿಯ ಇನ್ನೊಂದು ಕೃತ್ಯದಲ್ಲಿ ಮುಸ್ಲಿಂ ಮಹಿಳೆಯರಿಗೆ ತೊಂದರೆ ಕೊಡುತ್ತಿದ್ದ ಬುಲ್ಲಿ ಬಾಯ್‌ ಆಪ್‌ನ (Bulli Bai App Row) ರಾದ್ಧಾಂತದ ತನಿಖೆಯೂ ಇದೇ ಸಮಯದಲ್ಲಿ ನಡೆಯುತ್ತಿದ್ದು ಮುಂಬೈ ಸೈಬರ್‌ ಕ್ರೈಮ್‌ ಪೋಲೀಸರು (Mumbai Cyber Crime) ಇಬ್ಬರು ಶಂಕಿತರನ್ನು ಈಗಾಗಲೇ ಬಂಧಿಸಿದ್ದಾರೆ.

ಬುಲ್ಲಿ ಬಾಯ್‌ ಆಪ್‌ನ ರಾದ್ಧಾಂತ ಬೆಳಕಿಗೆ ಬಂದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಖಂಡನೆ ಮಾಡಲು ಪ್ರಾರಂಭಿಸಿದ ಬಳಕೆದಾರರು ದೇಶದ ಬಲಪಂಥೀಯ ಗುಂಪುಗುಳು ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿ ಈ ರೀತಿಯ ದುಷ್ಕೃತ್ಯದಲ್ಲಿ ತೊಡಗಿವೆಯೆಂಬ ಆರೋಪ ಮಾಡಿದರು. ಇದಕ್ಕೆ ಪ್ರತಿಯಾಗಿ ಕೆಲ ಬಳಕೆದಾರರು ಹಿಂದೂ ಮಹಿಳೆಯರನ್ನು ಗುರಿಯಾಗಿಸಿ ಇಂಥದೇ ಕೃತ್ಯಗಳನ್ನೆಸಗುತ್ತಿರುವ ಟೆಲಿಗ್ರಾಮ್‌ ಚಾನಲ್‌ಗಳ ವಿವರಗಳನ್ನು ಹಂಚಿಕೊಳ್ಳತೊಡಗಿದರು.

“ಹಿಂದೂ ರಂಡಿಯಾ” ಎನ್ನುವ ಹೆಸರಿನ ಟೆಲಿಗ್ರಾಮ್‌ ಚಾನಲ್‌ ಒಂದು ಮಹಿಳೆಯರ ಅಶ್ಲೀಲ ಚಿತ್ರಗಳು ಹಾಗೂ ದ್ವೇಷಪೂರಿತ ಸಂದೇಶಗಳನ್ನು ಹಂಚಿಕೊಳ್ಳುತ್ತಿರುವುದು ಗಮನಕ್ಕೆ ಬಂದು ಇದೇ  ಚಾನಲ್‌ ಅನ್ನು ಸದ್ಯ ಭಾರತ ಸರಕಾರ ನಿಷ್ಕ್ರಿಯಗೊಳಿಸಿದೆ ಹಾಗೂ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ರವರೂ ಸಹ ಇದೇ ಮಾಹಿತಿಯನ್ನು ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಇವೆರಡೂ ಪ್ರಕರಣಗಳು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ಎರಡೂ ಕಡೆಗಳಲ್ಲಿ ಮಾನಸಿಕ ಚಿತ್ರಹಿಂಸೆಗೆ ಗುರಿಯಾಗುತ್ತಿರುವವರು ಮಾತ್ರ ಮಹಿಳೆಯರೇ. ಈ ಎರಡೂ ನಿದರ್ಶನಗಳಲ್ಲು ತಮ್ಮ ವೈಯಕ್ತಿಕ ಛಾಯಾಚಿತ್ರಗಳು ದುಷ್ಕರ್ಮಿಗಳಿಗೆ ಹೇಗೆ ಸಿಕ್ಕವೆಂದು ಸ್ವತ: ಬಲಿಪಶುಗಳಾದ ಮಹಿಳೆಯರಿಗೇ ತಿಳಿದಿಲ್ಲ ವಿವಿಧ ಸಾಮಾಜಿಕ ಜಾಲತಾಣಗಳಿಂದ ಮಹಿಳೆಯರ ಛಾಯಾಚಿತ್ರಗಳನ್ನು ಕದ್ದು ಅಶ್ಲೀಲ ರೀತಿಯಲ್ಲಿ ಮಾರ್ಫ್ ಮಾಡಿ ಮಹಿಳೆಯರ ನಕಲಿ ಪ್ರೊಫೈಲ್‌ಗಳನ್ನು ತಯಾರಿಸಿ ಈ ರೀತಿಯ ದುಷ್ಕೃತ್ಯ ಎಸಗಿರಬಹುದೆಂದೂ, ನಂತರ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ ಎಂದು ಶಂಕಿಸಲಾಗಿದೆ.

ಇಲ್ಲಿ ಧರ್ಮಗಳು ಬೇರೆ-ಬೇರೆಯಾಗಿರಬಹುದು ಹಾಗೂ ಬಳಸಿದ ಸಾಮಾಜಿಕ ಜಾಲತಾಣಗಳು ಬೇರೆ-ಬೇರೆ ಇರಬಹುದು, ಆದರೆ ಅದರ ಹಿಂದಿನ ದುರುದ್ದೇಶ ಮಾತ್ರ ಒಂದೇ ಆಗಿದೆ.

ಬುಲ್ಲಿ ಬಾಯ್‌ ಆಪ್‌ನ ವಿಷಯದಲ್ಲಿ ಕೆಲ ವಿಕೃತ ಮನಸ್ಸಿನ ದುಷ್ಕರ್ಮಿಗಳು ಲಿಂಕ್ಡ್‌-ಇನ್‌ ಹಾಗೂ ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳಿಂದ ಯಶಸ್ವೀ ಹಾಗೂ ಪ್ರಭಾವಿ ಮುಸ್ಲಿಂ ಮಹಿಳೆಯರ ಫೋಟಗಳನ್ನು ಸಂಗ್ರಹಿಸಿ ಜಿಟ್‌-ಹಬ್‌ನಲ್ಲಿ ಬುಲ್ಲಿ ಬಾಯ್ ಎಂಬ ಆಪ್‌ ರಚಿಸಿಕೊಂಡು “ನಿಮ್ಮ ಈ ದಿನದ ಬುಲ್ಲಿ ಬಾಯ್‌” ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಿದ್ದಾರೆ. ಈ ಆಪ್‌ ಮೊದಲು ಕೆಲವೇ ಕೆಲವು ಆನ್‌ಲೈನ್‌ ಬಳಕೆದಾರರಿಗೆ ಗೊತ್ತಿತ್ತು. ಅಂತಹ ಕೆಲ ಟ್ಟಿಟರ್ ಬಳಕೆದಾರರು ಪ್ರಭಾವಿ ಮಹಿಳೆಯರನ್ನು ಟ್ಯಾಗ್‌ ಮಾಡಲು ಪ್ರಾರಂಭಿಸಿದಾಗ ಆಪ್‌ ವೈರಲ್‌ ಆಗಲು ಪ್ರಾರಂಭಿಸಿ ದುಷ್ಕರ್ಮಿಗಳು  ಮಹಿಳೆಯರಿಗೆ ಟ್ರೋಲ್‌ ಮಾಡಿ ಕಿರುಕುಳ ನೀಡಿದ ಅನೇಕ ಘಟನೆಗಳು ನಡೆದವು. ಸಂಬಂಧಪಟ್ಟವರು ಸಂಯಮದಿಂದ ಹಾಗೂ ಜಾಣ್ಮೆಯಿಂದ ಕಾರ್ಯಾಚರಿಸಿ ಇಂತಹ ದುಷ್ಕೃತ್ಯಗಳಿಗೆ ಅಂತ್ಯ ಹಾಡಬೇಕಿದೆ.

ಇದನ್ನೂ ಓದಿ: Sachin Tendulkar : ಉಡುಪಿ ಮೂಲದವರಂತೆ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​​

ಇದನ್ನೂ ಓದಿ: Darshan: ಸಿನಿಮಾ ಬಳಿಕ ರಾಜಕೀಯಕ್ಕೆ ಚಾಲೆಂಜಿಂಗ್ ಸ್ಟಾರ್….! ದಚ್ಚು ಭವಿಷ್ಯ ನುಡಿದ ಜ್ಯೋತಿಷಿ….!!

(Government blocks a telegram channel alleged to share obscene photos of women)

Comments are closed.