ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ರೂ ಮಾಸ್ಕ್ ಹಾಕಬೇಕಾ ? ಏನು ಹೇಳುತ್ತೆ ಕೇಂದ್ರ ಆರೋಗ್ಯ ಇಲಾಖೆ

0

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಎಲ್ಲಾ ಕಡೆಗಳಲ್ಲಿಯೂ ಮಾಸ್ಕ್ ಕಡ್ಡಾಯಗೊಳಿಸಲಾಗುತ್ತಿದೆ. ಅದ್ರಲ್ಲೂ ಪ್ರಯಾಣದ ವೇಳೆಯಲ್ಲಿಯೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.

ಆದ್ರೀಗ ಕಾರಿನಲ್ಲಿ ಓರ್ವರು ಪ್ರಯಾಣಿಸುತ್ತಿದ್ದರೂ ಕೂಡ ಮಾಸ್ಕ್ ಹಾಕಿಕೊಂಡಿರಬೇಕೆ ? ಬೇಡವೇ ? ಅನ್ನುವ ಕುರಿತು ಸಾಕಷ್ಟು ಗೊಂದಲ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆಯನ್ನು ಕೊಟ್ಟಿದೆ.

ದೆಹಲಿ ಸೇರಿದಂತೆ ದೇಶದ ಹಲವು ಪ್ರಮುಖ ನಗರಗಳಲ್ಲಿ ಟ್ರಾಫಿಕ್ ಪೊಲೀಸರು ಕಾರಿನಲ್ಲಿ ಒಬ್ಬರೇ ಓಡಾಡುತ್ತಿದ್ದರೂ ಕೂಡ ಮಾಸ್ಕ್ ಬಳಸದಿದ್ರೆ ದಂಡ ವಿಧಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಮಾಸ್ಕ್ ಬಳಕೆ ಕಡ್ಡಾಯವಲ್ಲವೆಂದಿದೆ.

ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದಾಗ ಮಾಸ್ಕ್ ಧರಿಸಬೇಕು, ಇಲ್ಲದಿದ್ದರೆ ದಂಡವಿಧಿಸಲಾಗುವುದು ಎಂಬ ನಿಯಮ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಅಲ್ಲದೇ ಕಾರಿನಲ್ಲಿ ಒಬ್ಬರೆ ಇದ್ದಾಗ ಮಾಸ್ಕ್ ಬಳಕೆ ಮಾಡದಿದ್ರೆ ಅದನ್ನು ಕೊವಿಡ್-19 ನಿಯಮ ಉಲ್ಲಂಘನೆ ಎಂದು ಪರಿಗಣಿಸಲು ಸಾಧ್ಯವಿಲ್ಲ.

ಅಲ್ಲದೇ ಮಾರ್ಗಸೂಚಿಯಲ್ಲಿಯೂ ಇಂತಹ ಯಾವುದೇ ಸೂಚನೆಯನ್ನು ಉಲ್ಲೇಖಿಸಿಲ್ಲ. ಆದರೆ ಕಾರಿನಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ರೆ ಕಡ್ಡಾಯವಾಗಿ ಮಾಸ್ಕ್ ಬಳಸಲೇ ಬೇಕು ಎಂದು ಆರೋಗ್ಯ ಇಲಾಖೆ ಹೇಳಿದೆ.

Leave A Reply

Your email address will not be published.