omicron and corona : ಕೊರೊನಾ ಹಾಗೂ ಓಮೈಕ್ರಾನ್ ಹೆಚ್ಚಳದ ನಡುವೆ ಹೊರಬಿತ್ತು ಸಮಾಧಾನದ ಸಂಗತಿ

ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ( omicron and corona ) ಪ್ರಕರಣಗಳು ಹೆಚ್ಚುತ್ತಲೇ ಸಾಗುತ್ತಿದ್ದು, ಪ್ರತಿನಿತ್ಯ ಸಾವಿರಾರು ಪ್ರಕರಣಗಳು ದಾಖಲಾಗುತ್ತಿವೆ. ಈ ಮಧ್ಯೆ ಸರ್ಕಾರ ಪರಿಸ್ಥಿತಿ ನಿಯಂತ್ರಿಸಲು ವಿಕೇಂಡ್ ಕರ್ಪ್ಯೂ ಸೇರಿದಂತೆ ಹಲವು ನಿಯಮ ರೂಪಿಸಿದೆ. ಆದರೂ ಪ್ರಕರಣಗಳು ನಿಯಂತ್ರಣಕ್ಕೆ ಬಂದಿಲ್ಲ. ಆದರೆ ಪ್ರಕರಣಗಳ ಗಂಭೀರತೆ ದೃಷ್ಟಿಯಿಂದ ಸಮಾಧಾನಕ ಸಂಗತಿಯೊಂದು ( consolation matter ) ಹೊರಬಿದ್ದಿದ್ದು, ಚಿಕಿತ್ಸೆ ಹಾಗೂ ಸಾವಿನ ದೃಷ್ಟಿಯಲ್ಲಿ ಕರ್ನಾಟಕ ಸೇಫ್ ಝೋನ್ ನಲ್ಲಿದೆ.

ಹೌದು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣ ಸಂಖ್ಯೆ ಹೆಚ್ಚಿದೆ. ಆದರೆ ಈ ಆಂತಕದ ನಡುವೆಯೂ ಸಮಾಧಾನದ ಸಂಗತಿಯೊಂದು ಅಧ್ಯಯನದಿಂದ ಹೊರಬಿದ್ದಿದ್ದು, ಸಾವಿರಾರು ಕೇಸ್ ಪತ್ತೆಯಾದರೂ ಆಸ್ಪತ್ರೆಗೆ ದಾಖಲಾತಿ ವಿರಳವಾಗಿದೆ. ಕಳೆದ ಎರಡು ವಾರದ ಆಸ್ಪತ್ರೆ ದಾಖಲಾತಿ ನೋಡಿದ್ರೆ ಯಾವುದೇ ಆತಂಕವಿಲ್ಲ ಎನ್ನಲಾಗುತ್ತಿದೆ. ಇನ್ನೆರಡು ವಾರ ಕಾದು ನೋಡಿ ಬಳಿಕ ಕೊರೋನಾ ನಿಯಮಗಳನ್ನು ಸಡಿಲಿಸುವ ಚಿಂತನೆಯಲ್ಲಿದೆಯಂತೆ‌ ಸರ್ಕಾರ.

ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದರೂ ರೋಗಿಗಳಿಗೆ ಆಕ್ಸಿಜನ್ ಬೆಡ್, ಐಸಿಯು ಬೆಡ್ ನ ಅವಶಕ್ಯತೆ ಬಿದ್ದಿಲ್ಲ ಎನ್ನಲಾಗುತ್ತಿದೆ. ಇದರ ಆಧಾರದ ಮೇಲೆ ರಾಜ್ಯದಲ್ಲಿ ಮತ್ತಷ್ಟು ಟಫ್ ರೂಲ್ಸ್ ನ ಅನಿವಾರ್ಯತೆ ಕಾಣ್ತಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ ಯಂತೆ ಸರ್ಕಾರ. ಅಷ್ಟೇ ಅಲ್ಲ ವ್ಯಾಕ್ಸಿನ್ ತೆಗೆದುಕೊಳ್ಳಿ ಕೊರೋನಾ ಟೆನ್ಶನ್ ಬಿಡಿ ಎಚ್ಚರಿಕೆ ಇಂದ ಇರಿ ಎಂದು ಸಲಹೆ ನೀಡಿದ್ದು ಇದೇ ಮೂರನೇ ಅಲೆ ಗೆಲ್ಲುವ ಸುಲಭ ದಾರಿ ಎಂದಿದೆ. ಇನ್ನು ಎರಡು ವಾರದ ಆಸ್ಪತ್ರೆಯ ದಾಖಲಾತಿ..? ಅನ್ನೋದನ್ನು ಗಮನಿಸೋದಾದರೇ

  1. ರಾಜ್ಯದ ಒಟ್ಟಾರೆ ಸಕ್ರಿಯ ಪ್ರಕರಣ 1,41,337
  2. ಈ ಪೈಕಿ ಆಸ್ಪತ್ರೆಗೆ ದಾಖಲಾದವರು ಕೇವಲ 2,195
  3. ಆಕ್ಸಿಜನ್/HDU ಬೆಡ್ ಗೆ ದಾಖಲಾದವರು 538
  4. ICU ಗೆ ದಾಖಲಾದವರ ಸಂಖ್ಯೆ 105
  5. ICU-V ನಲ್ಲಿ ದಾಖಲಾದವರ ಸಂಖ್ಯೆ 35
  6. ಜನರಲ್ ಬೆಡ್ ಗೆ ದಾಖಲಾದವರ ಸಂಖ್ಯೆ 1157
  7. ಶೇ. 52.71 ರಷ್ಟು ಸೋಂಕಿತರು ಜನರಲ್ ಬೆಡ್ ನಲ್ಲೇ ದಾಖಲಾಗ್ತಿದ್ದಾರೆ
  8. 0.38% ಜನ ಮಾತ್ರ ಆಕ್ಸಿಜನ್/HDU ಬೆಡ್ ಗೆ ದಾಖಲಾಗ್ತಿದಾರೆ
  9. 0.07% ಜನ ಮಾತ್ರ ICU ಗೆ ದಾಖಲಾಗ್ತಿದ್ದಾರೆ
  10. 0.02% ಜನ ಮಾತ್ರ ವೆಂಟಿಲೇಟರ್ ಗೆ ಹೋಗ್ತಿದ್ದಾರೆ ಎಂಬುದನ್ನು ದಾಖಲೆಗಳು ಹೇಳ್ತಿವೆ.

ಹೀಗಾಗಿ ರಾಜ್ಯದಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಆತಂಕಕಾರಿ ಹಂತ ತಲುಪಿಲ್ಲ ಅನ್ನೋದು ಸಮಾಧಾನದ ಸಂಗತಿ.

ಇದನ್ನೂ ಓದಿ : ಕ್ಯಾಶ್‌ಬ್ಯಾಕ್ ನೀಡುವ ಅತ್ಯುತ್ತಮ 5 ಕ್ರೆಡಿಟ್ ಕಾರ್ಡ್‌ಗಳು ಯಾವುವು? ಅವುಗಳು ನೀಡುವ ಕೊಡುಗೆಗಳೇನು?

ಇದನ್ನೂ ಓದಿ : ಕರಾವಳಿಯಲ್ಲಿ ಕೊರೊನಾ ಹೆಚ್ಚಳಕ್ಕೆ ಶಾಲೆಗಳೇ ಕಾರಣ : ಖಾಸಗಿ ಒತ್ತಡ, ಶಾಲೆ ಬಂದ್‌ ಮಾಡಲು ಸಚಿವರೇ ಅಡ್ಡಿ

(consolation matter before hike omicron and corona virus in Karnataka)

Comments are closed.