ಬೆಂಗಳೂರು : ಕೊರೊನಾ ಪರೀಕ್ಷೆ ವರದಿ ಮಾಡಿ ದಿನಗಟ್ಟಲೆ, ಗಂಟೆಗಟ್ಟಲೆ ಕಾಯುವ ಅಗತ್ಯವಿಲ್ಲ. ಅದ್ರಲ್ಲೂ ರಿಪೋರ್ಟ್ ಬಂತಾ ಅಂತಾ ಲ್ಯಾಬ್ ಗೆ ಅಲೆದಾಟ ಮಾಡೋ ಅಗತ್ಯವಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ಕೊರೊನಾ ಟೆಸ್ಟ್ ವರದಿಯನ್ನು ಚೆಕ್ ಮಾಡಬಹುದಾಗಿದೆ.

ಹಿಂದೆಲ್ಲಾ ಕೊರೊನಾ ಟೆಸ್ಟ್ ಮಾಡಿಸಿ ಎರಡು ಮೂರು ದಿನಗಳ ಕಾಲ ಕಾಯಬೇಕಿತ್ತು. ಅದ್ರಲ್ಲೂ ವರದಿ ಬಂತಾ ಅಂತಾ ಪದೇ ಪದೇ ಅಧಿಕಾರಿಗಳಿಗೆ ಕರೆ ಮಾಡಿ ಕೇಳಬೇಕಿತ್ತು. ಆದ್ರೆ ಈ ಕಿರಿಕಿರಿ ಇನ್ಮುಂದೆ ಇರೋದಿಲ್ಲ ಆರೋಗ್ಯ ಇಲಾಖೆ ಎಸ್.ಆರ್.ಎಫ್ ಐಡಿಯಿಂದ ತಮ್ಮ ಮೊಬೈಲ್‍ನಲ್ಲೇ ಕೊರೊನಾ ವರದಿ ಪಡೆಯುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಕೊರೊನಾ ತಪಾಸಣೆಯ ವೇಳೆಯಲ್ಲಿ ಮೊಬೈಲ್ ನಂಬರ್ ನೀಡಲಾಗುತ್ತದೆ. ಈ ನಂಬರ್ ಗೆ ಎಸ್.ಆರ್.ಎಫ್ ಐಡಿಯನ್ನು ಆರೋಗ್ಯ ಇಲಾಖೆ ನೀಡುತ್ತದೆ.. ಕೊರೊನಾ ಟೆಸ್ಟ್ ರಿಪೋರ್ಟ್ ಚೆಕ್ ಮಾಡುವ ಪೋರ್ಟಲ್‍ಗೆ ಹೋಗಿ ಎಸ್.ಆರ್.ಎಫ್ ಐಡಿಯನ್ನು ನಮೂದಿಸಿದರೆ ಕ್ಷಣಾರ್ಧದಲ್ಲಿ ರಿಸಲ್ಟ್ ಗೊತ್ತಾಗುತ್ತೆ.

ಇನ್ನು ಮನೆಯಲ್ಲಿಯೇ ಕುಳಿತು ಈ https://www.covidwar.karnataka.gov.in/service1 ವೆಬ್‍ಸೈಟಿಗೆ ಹೋಗಿ ಅಲ್ಲಿ ನಿಮ್ಮ ಮೊಬೈಲ್‍ಗೆ ಬಂದಿರುವ ಎಸ್.ಆರ್.ಎಫ್ ಐಡಿ ಕೊಟ್ಟರೆ ನಿಮ್ಮ ಕೊರೊನಾ ವರದಿಯನ್ನು ನೀವು ನಿಮ್ಮ ಮೊಬೈಲ್‍ನಲ್ಲೇ ನೋಡಬಹುದು. ರಿಸಲ್ಟ್ ಪಾಸಿಟಿವ್ ಬಂದರೂ ಆತಂಕ ಪಡದೇ ಮನೆಯಲ್ಲೇ ಐಸೊಲೇಶನ್ ಆಗಬೇಕು. ನಂತರ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕೊರೊನಾ ವರದಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.