Karnataka Lockdown : ಮತ್ತೆ ಲಾಕ್‌ ಆಗುತ್ತಾ ಕರ್ನಾಟಕ : ಸರಕಾರದ ಮುಂದಿರೋ ಪ್ಲ್ಯಾನ್‌ ಏನು ಗೊತ್ತಾ ?

ಬೆಂಗಳೂರು : ಕೊರೊನಾ ಅನ್ನೋ ಹೆಮ್ಮಾರಿಯ ಆರ್ಭಟಕ್ಕೆ ಕರುನಾಡು ತತ್ತರಿಸಿ ಹೋಗಿದೆ. ಕರ್ನಾಟಕಕ್ಕೂ ಮೂರನೇ ಅಲೆಯ ಭೀತಿ ಎದುರಾಗಿದೆ. ಅದ್ರಲ್ಲೂ ರಾಜ್ಯದಲ್ಲಿ ಮತ್ತೊಮ್ಮೆ ಸಂಪೂರ್ಣ ಲಾಕ್‌ಡೌನ್‌ ಜಾರಿ ಮಾಡಲಾಗುತ್ತೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಹಾಗಾದ್ರೆ ಕರ್ನಾಟಕ ಅಗಸ್ಟ್‌ 15ರ ನಂತರ ಲಾಕ್‌ ಆಗುತ್ತಾ. ಸರಕಾರ ಮುಂದಿರೋ ಫ್ಲ್ಯಾನ್‌ ಏನು ಗೊತ್ತಾ.

ಕೇರಳ, ಮಹಾರಾಷ್ಟ್ರದಲ್ಲೀ ಈಗಾಗಲೇ ಕೊರೊನಾ ಮೂರನೇ ಅಲೆ ಆರ್ಭಟಿಸುತ್ತಿದೆ. ಕೊರೊನಾ ವೈರಸ್‌ ಸೋಂಕಿನ ಜೊತೆ ಜೊತೆಗೆ ಡೆಲ್ಟಾ, ಇಟಾ, ಜಿಕಾ ವೈರಸ್‌ ಆತಂಕವೂ ಎದುರಾಗಿದೆ. ನೆರೆಯ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಲೇ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ನಿಧಾನವಾಗಿ ಕೊರೊನಾ ಸೋಂಕು ಹೆಚ್ಚುತ್ತಿದೆ. ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಬೆಳಗಾವಿ, ಬೀದರ್‌ ಜಿಲ್ಲೆಗಳಲ್ಲಿಯೂ ಆತಂಕ ಶುರುವಾಗಿದೆ. ಇದೇ ಕಾರಣಕ್ಕೆ ರಾಜ್ಯ ಸರಕಾರ ಈಗಾಗಲೇ ಗಡಿಯನ್ನು ಬಂದ್‌ ಮಾಡಿದೆ. ಆದರೆ ರಾಜ್ಯದಲ್ಲಿ ಕಾಲೇಜುಗಳು ಆರಂಭವಾಗಿದ್ದು, ಈಗಾಗಲೇ ಕೇರಳದ ವಿದ್ಯಾರ್ಥಿಗಳು ರಾಜ್ಯಕ್ಕೆ ಆಗಮಿಸಿದ್ದಾರೆ. ಇದನ್ನೂ ಓದಿ : ಆಗಸ್ಟ್‌ 23ರಿಂದ ಶಾಲಾರಂಭ : ಪೋಷಕರಿಗೂ ಕೊರೊನಾ ವ್ಯಾಕ್ಸಿನ್‌

ಹಾಸನ ಜಿಲ್ಲೆಯ ನರ್ಸಿಂಗ್‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರೋ ಮೂವತ್ತಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ಅಲ್ಲದೇ ಇತರ ಜಿಲ್ಲೆಗಳಲ್ಲಿಯೂ ಆತಂಕ ಶುರುವಾಗಿದೆ. ರಾಜ್ಯದಲ್ಲಿ ನೈಟ್‌ ಕರ್ಪ್ಯೂ, ಗಡಿ ಜಿಲ್ಲೆಗಳಲ್ಲಿ ವೀಕೆಂಡ್‌ ಕರ್ಪ್ಯೂ ಜಾರಿ ಮಾಡಲಾಗಿದೆ. ಅಲ್ಲದೇ ಸಿಲಿಕಾನ್‌ ಸಿಟಿಯಲ್ಲಿಯೂ ವೀಕೆಂಡ್‌ ಕರ್ಪ್ಯೂ ಬಗ್ಗೆ ಬಿಬಿಎಂಪಿ ರಾಜ್ಯ ಸರಕಾರಕ್ಕೆ ಮನವಿಯನ್ನು ಮಾಡಿದೆ. ಕಂದಾಯ ಸಚಿವ ಆರ್.ಅಶೋಕ್‌ ರಾಜ್ಯದಲ್ಲಿ ಮತ್ತೊಮ್ಮೆ ಒಂದು ವಾರದ ಕಾಲವಾದ್ರೂ ಲಾಕ್‌ಡೌನ್‌ ಜಾರಿ ಮಾಡಬೇಕಾಗುತ್ತದೆ ಅಂತಾ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಲಾಕ್‌ಡೌನ್‌ ಮಾತು ಕೇಳಿಬರುತ್ತಲೇ ಸಣ್ಣ ಉದ್ಯಮಿಗಳು, ಕಾರ್ಮಿಕರು, ಬಡವರು, ಉದ್ಯೋಗಿಗಳಿಗೆ ನಡುಕ ಶುರುವಾಗಿದೆ. ಇದನ್ನೂ ಓದಿ : ಮಂಗಳೂರಿಗೆ ಕೇರಳ ವೈರಸ್‌ ಕಂಟಕ : ದ.ಕ. ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ಸೋಂಕು

ಒಂದೆಡೆ ರಾಜ್ಯದಲ್ಲಿ ಲಾಕ್‌ಡೌನ್‌ ಮಾತು ಕೇಳಿಬರುತ್ತಿದ್ರೆ, ಇನ್ನೊಂದೆಡೆ ಸರಕಾರ ಶಾಲಾರಂಭಕ್ಕೆ ಮುಂದಾಗಿದೆ. ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಅಗಸ್ಟ್‌ ಅಂತ್ಯದಲ್ಲಿ 9 ರಿಂದ 12ನೇ ತರಗತಿ ಹಾಗೂ ಸಪ್ಟೆಂಬರ್‌ ನಿಂದ ಪ್ರಾಥಮಿಕ ಶಾಲೆ ಆರಂಭಿಸೋದಾಗಿ ತಿಳಿಸಿದ್ದಾರೆ. ಬಿಬಿಎಂಪಿ ಸರಕಾರಕ್ಕೆ ಮನವಿ ಮಾಡಿದ್ದರೂ ಕೂಡ ರಾಜ್ಯ ಸರಕಾರ ಹಾಗೂ ಆರೋಗ್ಯ ಸಚಿವರು ಸದ್ಯಕ್ಕೆ ಲಾಕ್‌ಡೌನ್‌ ಹೇರಿಕೆ ಮಾಡುವ ಯೋಚನೆಯಲ್ಲಿಲ್ಲ. ರಾಜ್ಯದಲ್ಲಿ ಮೂರನೇ ಅಲೆಯ ಆತಂಕದ ಬಗ್ಗೆಯೂ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಕೊರೊನಾ ಸೋಂಕು ಹರಡುವಿಕೆ ಖಾತರಿಯಾದ್ರೆ ಮಾತ್ರ ಕಠಿಣ ರೂಲ್ಸ್‌ ಜಾರಿ ಮಾಡೋ ಸಾಧ್ಯತೆಯಿದೆ.

https://kannada.newsnext.live/gujrat-petrolpump-owner-ayubpathan-neeraj-olympicgold/

Comments are closed.