ಅಮ್ಮ ಅಥವಾ ತಾಯಿ ಜಗತ್ತಿನ ಸಂಬಳ ಇಲ್ಲದಸೇವಕಿ. ಆಕೆಯ ತ್ಯಾಗಕ್ಕೆ, ಸ್ಥಾನಕ್ಕೆ ಬೇರೆ ಉಪಮೆಯೇ ಇಲ್ಲ. ಕೊರೋನಾ ಸಂಕಷ್ಟದಲ್ಲೂ ಈ ಸ್ಥಿತಿ ಬದಲಾಗಿಲ್ಲ. ತಾಯಿಯೊಬ್ಬಳು ಆಕ್ಸಿಜನ್ ಪೈಪ್ ಹಾಕಿಕೊಂಡು ಅಡುಗೆ ಮಾಡುತ್ತಿರುವ ಪೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಒಂದಿಷ್ಟು ಚರ್ಚೆ ಹುಟ್ಟುಹಾಕಿದೆ.

ಆಕ್ಸಿಜನ್ ಕಾನ್ಸಟ್ರೇಟರ್ ಮೆಶಿನ್ ನ್ನು ಕೆಳಗೆ ಇಟ್ಟುಕೊಂಡು ಮೂಗಿಗೆ ಆಕ್ಸಿಜನ್ ನಳಿಕೆ ಹಾಕಿಕೊಂಡ ಗೃಹಿಣಿಯೊಬ್ಬಳು ಅಡುಗೆ ಮಾಡುತ್ತಿರುವ ಈ ಪೋಟೋದ ಬಗ್ಗೆ ಯಾವುದೇ ವಿವರಣೆ ಲಭ್ಯವಾಗಿಲ್ಲ. ಆದರೆ ಪೋಟೋ ಮಾತ್ರ ಎಲ್ಲೆಡೆ ವೈರಲ್ ಆಗಿದ್ದು, ಜನರು ಭಾವುಕರಾಗಿ ಕಮೆಂಟ್ ಮಾಡ್ತಿದ್ದಾರೆ.
ಕೊರೋನಾದಂತಹ ಸಂಕಷ್ಟದ ಹೊತ್ತಿನಲ್ಲಿ ಬಹುಷಃ ಕೊರೋನಾದಿಂದ ಬಳಸಿ ಚೇತರಿಸಿಕೊಂಡ ತಾಯಿಯೊಬ್ಬಳು ತನ್ನ ಅನಾರೋಗ್ಯದಲ್ಲೂ ಹೀಗೆ ಕೆಲಸ ಮಾಡುತ್ತಿರಬಹುದು ಎಂದು ಅಂದಾಜಿಸಲಾಗಿದ್ದರೂ ಪೋಟೋದ ಬಗ್ಗೆ ಹೆಚ್ಚಿನ ವಿವರಣೆ ಲಭ್ಯವಾಗಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ಈ ಪೋಟೋಗೆ ಜನರು, ತಾಯಿ ಎಂದರೇ ಹೀಗೆ…., ಅಮ್ಮ ಎಂದರೆ ಅಪರಿಮಿತ ಪ್ರೀತಿ ತೋರುವವಳು,ತನ್ನ ಕೆಲಸದಿಂದ ಯಾವತ್ತೂ ಹಿಂದೆ ಸರಿಯುವವಳಲ್ಲ ಎಂದೆಲ್ಲ ಕಮೆಂಟ್ ಮಾಡಿದ್ದಾರೆ.
