ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಭಾರತದಲ್ಲಿಂದು ಒಂದೇ ದಿನ 22,431 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದ್ದು, 318 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಃಇತಿ ನೀಡಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,38,94,312 ಕ್ಕೆ ಏರಿಕೆಯಾಗಿದೆ.
ಭಾರತವು ಇದುವರೆಗೂ 92.63 ಕೋಟಿ ಜನರಿಗೆ ಕೋವಿಡ್-19 (covid 19) ಲಸಿಕೆಯನ್ನು ನೀಡಲಾಗಿದೆ. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿಒಟ್ಟು 6.93 ಕೋಟಿ ಡೋಸ್ ಗಳು ಲಭ್ಯವಿದ್ದು, ಲಸಿಕೆಯ ವೇಗವನ್ನು ಹೆಚ್ಚಿಸಲು ಕೇಂದ್ರ ಸರಕಾರ ಚಿಂತನೆ ಮಾಡಿದೆ.
ಇದನ್ನೂ ಓದಿ: India Corona Updates : ಭಾರತದಲ್ಲಿ ಭಾರೀ ಇಳಿಕೆ ಕಂಡ ಕೊರೊನಾ
ಭಾರತದಲ್ಲಿ ಕೊರೊನಾ ಲಸಿಕೆಯ ಅಭಿಯಾನ ನಡೆಯುತ್ತಿದ್ದು, ಸದ್ಯದಲ್ಲಿಯೇ 100 ಕೋಟಿ ಜನರಿಗೆ ಲಸಿಕೆ ನೀಡಿದ ಮೈಲಿಗಲ್ಲನ್ನು ದಾಟಲು ಸಜ್ಜಾಗಿದೆ. ಈ ನಡುವಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರಾಖಂಡಕ್ಕೆ ಭೇಟಿ ನೀಡಿ 35 ಪಿಎಸ್‌ಎ ಆಮ್ಲಜನಕ ಘಟಕಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಇದನ್ನೂ ಓದಿ: Kerala Covid Updates : ಕೇರಳದಲ್ಲಿ ನಿಲ್ಲದ ಕೊರೊನಾ ಅಬ್ಬರ : 9735 ಮಂದಿಗೆ ಸೋಂಕು,151 ಮಂದಿ ಸಾವು
(22,431 new coronavirus infections detected in India)