BSY ಆಪ್ತ ಉಮೇಶ್ ಆಸ್ತಿ ನೋಡಿ ಬೆಚ್ಚಿಬಿದ್ದ ಐಟಿ‌ ಅಧಿಕಾರಿಗಳು ! ಪತ್ತೆಯಾಯ್ತು 100 ಕೋಟಿ ಆಸ್ತಿ

ಬೆಂಗಳೂರು : ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬೆಳ್ಳಂಬೆಳಗ್ಗೆಯೇ ಮಾಜಿ ಸಿಎಂ ಯಡಿಯೂರಪ್ಪ ಆಪ್ತನಿಗೆ ಶಾಕ್‌ ಕೊಟ್ಟಿದ್ದಾರೆ. ಆದ್ರೆ ದಾಳಿ ಮಾಡಿದ ಅಧಿಕಾರಿಗಳು ಉಮೇಶ್‌ ಹೊಂದಿದ್ದ ಆಸ್ತಿಯ ವಿವರಗಳನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

ಕಳೆದ ಹತ್ತು ವರ್ಷಗಳಿಂದಲೂ ಉಮೇಶ್‌ ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತನಾಗಿ ಕೆಲಸ ಮಾಡಿಕೊಂಡಿದ್ದ. ಯಡಿಯೂರಪ್ಪ ಸರಕಾರದ ಅವಧಿಯಲ್ಲಿ ನೀರಾವರಿ ಇಲಾಖೆಯಲ್ಲಿನ ಕೆಲಸ ಕಾರ್ಯಗಳನ್ನು ಮಾಡುವ ಕಾರ್ಯವನ್ನು ಮಾಡುತ್ತಿದ್ದ. ನೀರಾವರಿ ನಿಗಮದಲ್ಲಿ ನಡೆಯುತ್ತಿದ್ದ ಟೆಂಡರ್‌ ಮೇಲೆ ಕಣ್ಣಿಟ್ಟಿದ್ದ ಉಮೇಶ್‌ ಕರ್ನಾಟಕದ ಗುತ್ತಿಗೆದಾರರ ಎನ್‌ಓಸಿಯನ್ನು ತಡೆ ಹಿಡಿಯುತ್ತಿದ್ದ. ನಂತರದ ಎ ಗ್ರೇಡ್‌ ಟೆಂಡರ್‌ಗಳನ್ನು ಆಂಧ್ರ ಮೂಲದ ಗುತ್ತಿಗೆದಾರರಿಗೆ ಕೊಡಿಸುವ ಕಾರ್ಯವನ್ನು ಮಾಡುತ್ತಿದ್ದ. ಹಲವು ಬಾರಿ ಯಡಿಯೂರಪ್ಪ ಹೇಳಿದ್ರೂ ಕೂಡ ಈತ ತಡೆ ಹಿಡಿಯುವ ಕಾರ್ಯವನ್ನು ಮಾಡಿದ್ದಾನೆ ಅನ್ನೋ ಆರೋಪ ಕೇಳಿಬಂದಿದೆ.

ಉಮೇಶ್‌ ರಾಜಾಜಿನಗರದ ಬಾಷ್ಯಂ ಸರ್ಕಲ್‌ ಬಳಿಯಲ್ಲಿರುವ ಫ್ಲ್ಯಾಟ್ ನಲ್ಲಿ ವಾಸವಾಗಿದ್ದ ಉಮೇಶ್‌ ಸಹಕಾರ ನಗರದಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಮನೆಯನ್ನು ನಿರ್ಮಾಣ ಮಾಡಿದ್ದ. ತನ್ನ ಮನೆಗೆ ದವಳಗಿರಿ ಎಂದು ಹೆಸರನ್ನು ಇಟ್ಟಿದ್ದ. ಭವ್ಯ ಬಂಗಲೆಯ ಜೊತೆಗೆ ಬಾಗಲಗುಂಟೆಯಲ್ಲಿ ಸೈಟ್‌, ನೆಲಮಂಗಲದಲ್ಲಿ ಜಮೀನು, ಬಿಡಿಎದಲ್ಲಿ ಅನೇಕ ಸೈಟ್‌ಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲಾ ತನ್ನ ಕುಟುಂಬಸ್ಥರ ಹೆಸರಿನಲ್ಲಿಯೂ ಕೋಟ್ಯಾಂತರ ಮೌಲ್ಯದ ಆಸ್ತಿಯನ್ನು ಮಾಡಿಸಿಕೊಂಡಿದ್ದ. ಅಲ್ಲದೇ ಬೇನಾಮಿ ಹೆಸರಿನಲ್ಲಿಯೂ ಆಸ್ತಿ ಸಂಪಾದನೆಯನ್ನು ಮಾಡಿದ್ದಾನೆ. ದಾಳಿಯ ವೇಳೆಯಲ್ಲಿ ಬರೋಬ್ಬರಿ ನೂರು ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎನ್ನಲಾಗುತ್ತಿದೆ.

IT raid on the house of former CM BS Yeddyurappa PA Umesh House in Bangalore
ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಉಮೇಶ್‌ ಹಾಗೂ ಬಾಷ್ಯಂ ಸರ್ಕಲ್‌ನಲ್ಲಿ ಇರುವ ಮನೆ

ಎರಡು ವರ್ಷದ ಅವಧಿಯಲ್ಲಿಯೇ ಬರೋಬ್ಬರಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿರೋದು ಪತ್ತೆಯಾಗಿತ್ತು. ಕಾವೇರಿ ನೀರಾವರಿ ನಿಗಮ ಹಾಗೂ ಕೃಷ್ಣಭಾಗ್ಯ ಜಲನಿಗಮದ ಟೆಂಡರ್‌ನಲ್ಲಿ ಉಮೇಶ್‌ ಗೋಲ್ಮಾಲ್‌ ಮಾಡಿರುವ ಆರೋಪ ಕೇಳಿಬಂದಿದೆ. ಅದ್ರಲ್ಲೂ ಕಾಮಗಾರಿಗೆ ರಿಲೀಸ್‌ ಆಗಿರುವ ಹಣ ಹಾಗೂ ಕೆಲಸದಲ್ಲಿ ವ್ಯತ್ಯಾಸ ಕಂಡುಬಂದಿದೆ. ಇನ್ನೊಂದೆಡೆಯಲ್ಲಿ ಗುತ್ತಿಗೆದಾರರ ಆದಾಯದಲ್ಲಿಯೂ ವ್ಯತ್ಯಾಸ ಕಂಡುಬಂದಿದೆ. ಉಮೇಶ್‌ ಆದಾಯದಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬಂದಿದ್ದು, ಎರಡು ನಿಗಮದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇಂದು ಉಮೇಶ್‌ ಮನೆಯ ಮೇಲೆ ದಾಳಿಯನ್ನು ನಡೆಸಲಾಗಿದೆ ಎನ್ನಲಾಗುತ್ತಿದೆ.

ಬೆಂಗಳೂರಿನ ಯಲಹಂಕದ ಡಿಪೋದಲ್ಲಿ ಬಿಎಂಟಿಸಿ ಕಂಡಕ್ಟರ್‌ ಕಂ ಡ್ರೈವರ್‌ ಆಗಿ ಕೆಲಸ ಮಾಡಿಕೊಂಡಿದ್ದ ಉಮೇಶ್‌ 2008 ರಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆದ ಮೇಲೆ ಬಿಎಂಟಿಸಿ ಕೆಲಸ ಬಿಟ್ಟ ಬಿಎಸ್‌ವೈ ಕುಟುಂಬದ ಆಪ್ತನಾಗಿ ಗುರುತಿಸಿಕೊಂಡಿದ್ದ. ಯಡಿಯೂರಪ್ಪ ಪುತ್ರ ವಿಜಯೇಂದ್ರ ಭೇಟಿಯಾಗಲು ಉಮೇಶ್‌ ಅಪ್ಪಣೆ ಮುಖ್ಯವಾಗಿತ್ತು. ಇನ್ನು ಈತನ ಸಹೋದರ ಮಾಲ್ತೇಶ್‌ ಪಿಡಿಓ ಆಗಿ ಕೆಲಸ ಮಾಡುತ್ತಿದ್ದಾನೆ. ಉಮೇಶ್‌ ಸಹೋದರನಾಗಿರುವ ಪಿಡಿಓ ಮಾಲ್ತೇಶ್‌ ಹಾಗೂ ಆತನ ಸ್ನೇಹಿತ ಅರವಿಂದ, ಮತ್ತೋರ್ವ ಪಿಎ ಪ್ರಸನ್ನ ಹಾಗೂ ಕುಟುಂಬದವರಿಹೆ ಇದೀಗ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ : ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಆಪ್ತ ಉಮೇಶ್ ಮನೆ ಮೇಲೆ ಐಟಿ ರೇಡ್‌

ಇದನ್ನೂ ಓದಿ : ನೀರಾವರಿ ಇಲಾಖೆಯಲ್ಲಿ ಗೋಲ್ಮಾಲ್‌ : ಬೆಂಗಳೂರಲ್ಲಿ 50 ಕಡೆ ಐಟಿ ದಾಳಿ

( BSY PA Umesh Seeks IT Officers 100 crores worth of property discovered )

Comments are closed.