BYS PA IT RAID : ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಆಪ್ತ ಉಮೇಶ್ ಮನೆ ಮೇಲೆ ಐಟಿ ರೇಡ್‌

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ಸಹಾಯಕನಾಗಿರುವ ಉಮೇಶ್‌ ಅವರ ಬೆಂಗಳೂರಿನ ಬಾಷ್ಯಂ ಸರ್ಕಲ್‌ನಲ್ಲಿ ಇರುವ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿಯನ್ನು ನಡೆಸಲಾಗಿದೆ

ಬಾಷ್ಯಂ ಸರ್ಕಲ್‌ನಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಉಮೇಶ್‌ ವಾಸವಾಗಿದ್ದರು. ಐಟಿ ದಾಳಿಯ ವೇಳೆಯಲ್ಲಿ ಉಮೇಶ್‌ ಮನೆಯಲ್ಲಿಯೇ ಇದ್ದರು ಅನ್ನೋ ಮಾಹಿತಿ ಲಭ್ಯವಾಗಿದ್ದು, ಅಧಿಕಾರಿಗಳು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಉಮೇಶ್‌ ಅವರು ಮನೆ ಮಾತ್ರವಲ್ಲ ಕಚೇರಿ ಹಾಗೂ ಆರು ಮಂದಿ ಸಂಬಂಧಿಕರ ಮನೆಗಳ ಮೇಲೆಯೂ ದಾಳಿಯನ್ನು ನಡೆಸಲಾಗಿದೆ ಎನ್ನಲಾಗುತ್ತಿದೆ.

ಬಿಎಂಟಿಸಿಯಲ್ಲಿ ಡ್ರೈವರ್‌ ಕಂ ಕಂಡಕ್ಟರ್‌ ಆಗಿ ಕೆಲಸ ಮಾಡುತ್ತಿದ್ದ ಉಮೇಶ್‌ ಡೆಪ್ಯುಟೇಷನ್‌ ಆಧಾರದ ಮೇಲೆ ಯಡಿಯೂರಪ್ಪ ಅವರ ಆಪ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿದ್ದಾಗ, ಮುಖ್ಯಮಂತ್ರಿಯಾಗಿದ್ದಾಗಲೂ ಸೇವೆಯನ್ನು ಸಲ್ಲಿಸಿದ್ದಾರೆ. ಅಲ್ಲದೇ ಸಂಸದ ರಾಘವೇಂದ್ರ ಅವರು ಬೆಂಗಳೂರಿಗೆ ಬಂದಾಗ ಅವರ ಎಲ್ಲಾ ವ್ಯವಹಾರಗಳನ್ನೂ ನೋಡಿಕೊಳ್ಳುತ್ತಿದ್ದರು. ಅಲ್ಲದೇ ಬಿ.ವೈ.ವಿಜಯೇಂದ್ರ ಅವರಿಗೂ ಆಪ್ತರಾಗಿ ಉಮೇಶ್‌ ಸೇವೆ ಸಲ್ಲಿಸಿದ್ದಾರೆ.

ನೀರಾವರಿ ಇಲಾಖೆಯಲ್ಲಿ ಸುಮಾರು ಎರಡು ಸಾವಿರ ಕೋಟಿ ರೂಪಾಯಿಯಷ್ಟು ಅವ್ಯವಹಾರ ನಡೆದಿತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ನೀರಾವರಿ ಇಲಾಖೆಯ ಟೆಂಡರ್‌, ಬಿಲ್‌ ಪಾಸ್‌ ಮಾಡಿರುವುದಕ್ಕೆ ಸಂಬಂಧಿಸಿದಂತೆ ಎಲ್ಲಾ ವ್ಯವಹಾರಗಳನ್ನೂ ಉಮೇಶ್‌ ಅವರೇ ನೋಡಿಕೊಳ್ಳುತ್ತಿದ್ದರು. ಉಮೇಶ್‌ ಅವರು ಗುತ್ತಿಗೆದಾರರು ಸಿಮೆಂಟ್‌ ಡೀಲರ್‌ ಗಳ ಸಂಪರ್ಕ ಹೊಂದಿದ್ದರು. ಚಾರ್ಟೆಡ್‌ ಅಕೌಂಟೆಂಟ್‌ಗಳು ಜೊತೆಗೆ ಸಂಪರ್ಕ ಟ್ಯಾಕ್ಸ್‌ ವಂಚನೆ ನಡೆಸಿರುವ ಆರೋಪ ಕೇಳಿಬಂದಿದೆ.‌

ಇದನ್ನೂ ಓದಿ :  ನೀರಾವರಿ ಇಲಾಖೆಯಲ್ಲಿ ಗೋಲ್ಮಾಲ್‌ : ಬೆಂಗಳೂರಲ್ಲಿ 50 ಕಡೆ ಐಟಿ ದಾಳಿ

ಇದನ್ನೂ ಓದಿ : 411ನೇ ಮೈಸೂರು ದಸರಾ ಉತ್ಸವಕ್ಕೆ ಚಾಲನೆ : ಯಾವ ಜನ್ಮದ ಪುಣ್ಯವೋ ಎಂದ ಎಸ್‌ಎಂಕೆ

( IT raid on the house of former CM BS Yeddyurappa PA Umesh House in Bangalore )

Comments are closed.