ಕೊರೊನಾ ಸೋಂಕಿತರಿಗೆ ಇನ್ಮುಂದೆ ಸ್ಟಿರಾಯ್ಡ್ ನೀಡುವಂತಿಲ್ಲ : ಸಚಿವ ಸುಧಾಕರ್

ಬೆಂಗಳೂರು : ರಾಜ್ಯದಲ್ಲಿ ಒಟ್ಟು 97 ಜನರಿಗೆ ಬ್ಲ್ಯಾಕ್ ಫಂಗಸ್ ದೃಢಪಟ್ಟಿದ್ದು, ಇದುವರೆಗೆ 4 ಮಂದಿ  ಮೃತಪಟ್ಟಿ ದ್ದಾರೆ. ಇನ್ಮುಂದೆ ಕೊರೊನಾ ಸೋಂಕಿತರಿಗೆ ಸ್ಟಿರಾಯ್ಡ್ ನೀಡುವಂತಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.

ಮಧುಮೇಹ, ಕ್ಯಾನ್ಸರ್, ಎಚ್ಐವಿ ಸೋಂಕಿತರು, ಅಂಗಾಂಗ ಕಸಿ ಮಾಡಿಸಿಕೊಂಡವರಲ್ಲಿ ಬ್ಲ್ಯಾಕ್ ಫಂಗಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ರೋಗ ಪತ್ತೆಯಾದ ಕೂಡಲೇ ಸರಕಾರದ ಗಮನಕ್ಕೆ ತರಬೇಕೆಂದು ಸೂಚಿಸಿದ್ದಾರೆ.

ಬೆಂಗಳೂರು ಮಾತ್ರವಲ್ಲದೆ ಶಿವಮೊಗ್ಗ ಮತ್ತು ಮೈಸೂರು ವೈದ್ಯಕೀಯ ಕಾಲೇಜು ಆಸ್ಪತ್ರೆ, ವೆನ್ ಲಾಕ್, ಕೆಎಂಸಿ, ಬಿಮ್ಸ್ ಹಾಗೂ ಕಿಮ್ಸ್ ಆಸ್ಪತ್ರೆ ಗಳಲ್ಲಿ ಕಪ್ಪು ಶೀಲೀಂದ್ರ ರೋಗಕ್ಕೆ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ ಎಂದು ಸುಧಾಕರ್ ತಿಳಿಸಿದ್ದಾರೆ.

Comments are closed.