ಬೆಂಗಳೂರು : ಆಸ್ಪತ್ರೆಗೆ ದಾಖಲಾಗುತ್ತಿರುವ ಕೊರೊನಾ ಸೋಂಕಿತರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಅಲ್ಲದೇ ಆಸ್ಪತ್ರೆಯ ಅಧಿಕಾರಿಗಳು ವಾರ್ಡಿಗೆ ಬಂದ ನಂತರವೇ ದೂರು ನೀಡಬಹುದಾಗಿತ್ತು. ಮಾದ್ಯಮಗಳಲ್ಲಿ ಸುದ್ದಿ ಪ್ರಕಟವಾದ ನಂತರವೇ ಸರಕಾರದ ಗಮನಕ್ಕೆ ಬರುತ್ತಿದೆ.ಇದನ್ನು ತಪ್ಪಿಸಿ ಕೊರೊನಾ ಸೋಂಕಿತರ ಸಮಸ್ಯೆ ನಿವಾರಿಸೋದಕ್ಕೆ ವಾಟ್ಸಾಪ್ ಮೂಲಕ ದೂರು ಸ್ವೀಕರಿಸುವ ವ್ಯವಸ್ಥೆಗೆ ರಾಜ್ಯ ಸರಕಾರ ಮುಂದಾಗಿದೆ.

ಬೆಂಗಳೂರು ನಗರದಲ್ಲಿರುವ ವಿಕ್ಟೋರಿಯಾ, ಬೌರಿಂಗ್ ಹಾಗೂ ರಾಜೀವ ಗಾಂಧಿ ಆಸ್ಪತ್ರೆಗಳು ವಾಟ್ಸಾಪ್ ಸಂಖ್ಯೆಯೊಂದನ್ನು ಮೀಸರಿಸಲಿದ್ದು, ಕೊರೊನಾ ಸೋಂಕಿತರು ತಮ್ಮ ದೂರುಗಳನ್ನು ನೀಡಬಹುದಾಗಿದೆ. ಕೊರೊನಾ ವಾರ್ಡುಗಳಿಗೆ ಸ್ವಚ್ಚತಾ ಸಿಬ್ಬಂದಿಗಳೇ ಹೋಗಲು ಭಯಪಡುತ್ತಿದ್ದಾರೆ. ಅದ್ರಲ್ಲೂ ಅಧಿಕಾರಿಗಳು ಪ್ರತೀ ವಾರ್ಡಿಗೆ ತೆರಳಿ ಸೋಂಕಿಯ ಸಮಸ್ಯೆ ಆಲಿಸೋದು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ವಾಟ್ಸಾಪ್ ಗ್ರೂಪ್ ರಚಿಸಿ ಸೋಂಕಿತರ ಸಮಸ್ಯೆ ಆಗಲಿಸಲು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಪ್ಲ್ಯಾನ್ ರೂಪಿಸಿದ್ದಾರೆ.

ಕೊರೊನಾ ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಸೋಂಕಿತ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡು ವಾಟ್ಸ್’ಅಪ್ ಗ್ರೂಪ್’ಗೆ ಸೇರ್ಪಡೆಗೊಳಿಸಲಾಗುತ್ತದೆ. ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆಯೇ ತೆಗೆದುಹಾಕಲಾಗುತ್ತದೆ. ಸೋಂಕಿತ ವ್ಯಕ್ತಿಗಳ ಕುಟುಂಬ ಸದಸ್ಯರೂ ಕೂಡ ಈ ಮೂಲಕ ದೂರು ನೀಡಬಹುದು. ದೂರುಗಳು ಬರುತ್ತಿದ್ದಂತೆಯೇ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

ಇನ್ಮುಂದೆ ಕೊರೊನಾ ಸೋಂಕಿತರು ಆಸ್ಪತ್ರೆಯಲ್ಲಿ ತಮಗೆ ಸಮಸ್ಯೆಯಾದ್ರೆ ನೇರವಾಗಿ ವಾಟ್ಸಾಪ್ ಗ್ರೂಪ್ ಗಳ ಮೂಲಕ ಅಧಿಕಾರಿಗಳು ಹಾಗೂ ಸಚಿವರ ಗಮನಕ್ಕೆ ತರಲಾಗುತ್ತದೆ. ವಾಟ್ಸಾಪ್ ನಲ್ಲಿ ದೂರುಗಳು ಬಂದ ಕೂಡಲೇ ಸಮಸ್ಯೆಯನ್ನು ಬಗೆಹರಿಸುವ ಕಾರ್ಯವನ್ನು ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಸಚಿವ ಸುಧಾಕರ್ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.

ಸೋಂಕಿತ ವ್ಯಕ್ತಿಗಳಿಗೆ ಯಾವ ರೀತಿ ಚಿಕಿತ್ಸೆ ನೀಡುತ್ತಿದ್ದಾರೋ ಎಂಬ ಸಂಶಯಗಳು ಜನರಲ್ಲಿ ಮೂಡುತ್ತಿವೆ. ಸಿಸಿಟಿವಿ ಗಳ ಮೂಲಕ ಪ್ರತೀ ವಾರ್ಡ್’ಗಳ ಚಲನವಲನಗಳನ್ನು ಗಮನಿಸಲಾಗುತ್ತಿದೆ. ವಾಟ್ಸ್ ಆಪ್ ಮೂಲಕ ಸೋಂಕಿತ ವ್ಯಕ್ತಿಗಳ ಅಭಿಪ್ರಾಯ ಹಾಗೂ ದೂರುಗಳನ್ನು ಸಂಗ್ರಹಿಸಲು ವೇದಿಕೆ ನಿರ್ಮಾಣ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.