ಶಾಲಾರಂಭದ ಕುರಿತು ಸರಕಾರ ತೀರ್ಮಾನಿಸಿಲ್ಲ : ಸಚಿವ ಸುರೇಶ್ ಕುಮಾರ್

0

ಕುಕ್ಕೆ ಸುಬ್ರಹ್ಮಣ್ಯ : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದ್ದು, ರಾಜ್ಯದಲ್ಲಿ ಶಾಲೆಗಳು ಪುನರಾರಂಭವಾಗುತ್ತವೆ ಅನ್ನುವ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸ್ಪಷ್ಟನೆಯನ್ನು ನೀಡಿದ್ದು, ರಾಜ್ಯದಲ್ಲಿ ಶಾಲೆಗಳನ್ನು ಪುನರಾಂಭಿಸುವ ಕುರಿತು ರಾಜ್ಯ ಸರಕಾರ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

Alvas1
ಶಾಲಾರಂಭದ ಕುರಿತು ಸರಕಾರ ತೀರ್ಮಾನಿಸಿಲ್ಲ : ಸಚಿವ ಸುರೇಶ್ ಕುಮಾರ್ 4

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಸುಬ್ರಹ್ಮಣ್ಯನ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಆನ್​ಲೈನ್ ಶಿಕ್ಷಣಕ್ಕಾಗಿ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಪೋಷಕರಿಗೆ ಲ್ಯಾಪ್ ಟಾಪ್ ಖರೀದಿಸುವಂತೆ ಒತ್ತಡ ಹೇರುತ್ತಿರುವ ದೂರುಗಳು ಕೇಳಿಬಂದಿದೆ, ಈ ಹಿನ್ನೆಲೆಯಲ್ಲಿ 14 ಬೆಂಗಳೂರಿನಲ್ಲಿ ಸಭೆ ಕೆರೆಯಲಾಗಿದ್ದು, ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.

School exams 1
ಶಾಲಾರಂಭದ ಕುರಿತು ಸರಕಾರ ತೀರ್ಮಾನಿಸಿಲ್ಲ : ಸಚಿವ ಸುರೇಶ್ ಕುಮಾರ್ 5

ಅಲ್ಲದೇರಾಜ್ಯದಲ್ಲಿ ಆನ್ ಲೈನ್ ಶಿಕ್ಷಣ ಗ್ರಾಮೀಣ ಭಾಗದಲ್ಲಿ ಕಷ್ಟಸಾಧ್ಯವಾಗಿದ್ದು, ದೂರದರ್ಶನ ಶಿಕ್ಷಣದ ಮೂಲಕ ಶಿಕ್ಷಣ ನೀಡುವ ಯೋಜನೆಯೂ ಸರಕಾರದ ಮುಂದಿದೆ. ಆದರೆ ರಾಜ್ಯದಲ್ಲಿ ಕೊರೊನಾ ಮಹಾಮಾರಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದ ನಂತರವೇ ಶಾಲೆಗಳನ್ನು ಪುನರಾರಂಭದ ಬಗ್ಗೆ ಸೂಕ್ತ ತೀರ್ಮಾನಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

Maks infotech web1
ಶಾಲಾರಂಭದ ಕುರಿತು ಸರಕಾರ ತೀರ್ಮಾನಿಸಿಲ್ಲ : ಸಚಿವ ಸುರೇಶ್ ಕುಮಾರ್ 6

ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಜುಲೈ 13 ರಿಂದ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಆರಂಭಗೊಳ್ಳಲಿದ್ದು, 30 ತಾರೀಖಿನ ಒಳಗೆ ಈ ಪ್ರಕ್ರಿಯೆಯನ್ನು ಮುಗಿಸುವ ನಿರೀಕ್ಷೆಯಿದೆ. ಯಾವ ರೀತಿ ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೋ ಅದೇ ರೀತಿಯ ಸುರಕ್ಷತೆಯನ್ನು ಮೌಲ್ಯಮಾಪನಾ ಕೇಂದ್ರಗಳಲ್ಲೂ ಕೈಗೊಳ್ಳಲಾಗುವುದು. ದ್ವಿತೀಯ ಪಿಯುಸಿ ಫಲಿತಾಂಶ ಜುಲೈ 18 ಒಳಗೆ ಬರುವ ಸಾಧ್ಯತೆಯಿದ್ದು, ಈ ಕುರಿತೂ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.