ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಆರ್ಭಟ ಮತ್ತೆ ಮುಂದುವರಿದಿದೆ. ಇಂದು ಕೂಡ ರಾಜ್ಯದಲ್ಲಿ ಬರೋಬ್ಬರಿ 1.105 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸಿಲಿಕಾನ್ ಸಿಟಿ ಬೆಂಗಳೂರಲ್ಲಿ 738 ಮಂದಿಗೆ ಸೋಂಕು ದೃಢಪಟ್ಟಿದ್ರೆ, ಒಂದೇ ದಿನ 19 ಮಂದಿಯನ್ನು ಮಹಾಮಾರಿ ಬಲಿ ಪಡೆದಿದೆ.

ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿಯ ಮತ್ತೆ ಆತಂಕವನ್ನು ತಂದೊಡ್ಡಿದೆ, ಇಂದು 738 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 4,052ಕ್ಕೆ ಏರಿಕೆಯನ್ನು ಕಂಡಿದೆ. ಅಲ್ಲದೇ ಕೊರೊನಾ ಮಹಾಮಾರಿ 91 ಮಂದಿಯನ್ನು ಬಲಿ ಪಡೆದಿದೆ. ಇನ್ನು ಬಳ್ಳಾರಿಯಲ್ಲಿ ಇಂದೂ ಕೂಡ ಕೊರೊನಾ ಸೋಂಕಿತರ ಸಂಖ್ಯೆಯನ್ನು ಏರಿಕೆಯನ್ನು ಕಂಡಿದೆ. ಇಂದು 76 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕೊರೊನಾ ಅಬ್ಬರ ಮುಂದುವರಿದಿದ್ದು, ಇಂದು 32 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ಬೀದರ್ 28, ಉತ್ತರ ಕನ್ನಡ 24, ಕಲಬುರಗಿ 23, ಹಾಸನ 22, ವಿಜಯಪುರ 22, ತುಮಕೂರು 18, ಉಡುಪಿ 18 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.

ಧಾರವಾಡ 17, ಚಿಕ್ಕಬಳ್ಳಾಪುರ 15, ಯಾದಗಿರಿ 9, ಮಂಡ್ಯ 8, ಮೈಸೂರು 6, ಶಿವಮೊಗ್ಗ 5, ರಾಯಚೂರು 4, ಬಾಗಲಕೋಟೆ 4, ಗದಗ 4, ಕೋಲಾರ 4, ಬೆಂಗಳೂರು ಗ್ರಾಮಾಂತರ 3, ದಾವಣಗೆರೆ 2, ರಾಮನಗರ 2, ಚಿತ್ರದುರ್ಗ 2, ಹಾವೇರಿ ಹಾಗೂ ಕೊಡಗು ಜಿಲ್ಲೆಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 14,295ಕ್ಕೆ ಏರಿಕೆಯಾಗಿದೆ.