ನವದೆಹಲಿ : ಕೊರೊನಾ ವೈರಸ್ ಸೋಂಕು ಕಳೆದ 9 ತಿಂಗಳಿನಿಂದಲೂ ವಿಶ್ವದಾದ್ಯಂತ ಇನ್ನಿಲ್ಲದ ಅವಾಂತರವನ್ನು ಸೃಷ್ಟಿಸಿದೆ. ಆದರೆ ಕೊರೊನಾ ಸೃಷ್ಟಿಯ ರಹಸ್ಯ ಮಾತ್ರ ಇನ್ನೂ ಬಹಿರಂಗಗೊಂಡಿರಲಿಲ್ಲ. ಆದರೀಗ ಚೀನಾದ ವೈರಲಾಜಿಸ್ಟ್ ಕೊರೊನಾ ಮೂಲವನ್ನು ಬಯಲು ಮಾಡಿದ್ದಾರೆ.

ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ಅನ್ನೋ ಹೆಮ್ಮಾರಿ ಇದೀಗ ಇಡೀ ವಿಶ್ವವನ್ನೇ ನಡುಗಿಸಿದೆ. ಅದ್ರಲ್ಲೂ ವೈದ್ಯಕೀಯವಾಗಿ ಮುಂದುವರಿದಿದ್ದ ರಾಷ್ಟ್ರಗಳೇ ಇಂದು ಕೊರೊನಾ ಸೋಂಕಿನ ಮುಂದೆ ಮಂಡಿಯೂರುವ ಸ್ಥಿತಿ ನಿರ್ಮಾಣವಾಗಿದೆ. ಆರಂಭದಲ್ಲಿಯೇ ಕೊರೊನಾ ವೈರಸ್ ಸೋಂಕಿ ಸೃಷ್ಟಿಯ ಬಗ್ಗೆಯೇ ಹಲವು ಅನುಮಾನಗಳು ಮೂಡಿದ್ದವು. ಕೊರೊನಾ ಸೋಂಕು ಚೀನಾದ ಸೃಷ್ಟಿ, ವುಹಾನ್ ನಗರದಲ್ಲಿರುವ ಲ್ಯಾಬ್ ನಲ್ಲಿಯೇ ವೈರಸ್ ಸೃಷ್ಟಿಸಲಾಗಿದೆ ಅನ್ನೋ ಮಾತುಗಳು ಕೇಳಿಬಂದಿದ್ದವು.

ವಿಶ್ವ ಆರೋಗ್ಯ ಸಂಸ್ಥೆಗಳು ಕೂಡ ಚೀನಾ ಜೊತೆಗೆ ಕೈ ಜೋಡಿಸಿ ವಿಶ್ವದ ಮುಂದೆ ಸುಳ್ಳು ಹೇಳಿದೆಯೆನ್ನುವ ಆರೋಪ ಕೇಳಿಬಂದಿತ್ತು. ಇದೆಲ್ಲದರ ನಡುವೆ ಕೊರೋನಾ ವೈರಾಣುವನ್ನು ಚೀನಾದ ವುಹಾನ್ ಪ್ರಯೋಗಾಲಯದಲ್ಲೇ ಮನುಷ್ಯರು ಸೃಷ್ಟಿಸಿದ್ದು ಎಂಬ ಗುಮಾನಿ ಬಂದಿದ್ದವು. ಇದಕ್ಕೆ ಪೂರಕವೆಂಬಂತೆ ಚೀನಾದ ವೈರಾಲಜಿಸ್ಟ್ ಒಬ್ಬರು ಕೊರೋನಾ ವೈರಾಣು ವುಹಾನ್ ನ ಸರ್ಕಾರಿ ಪ್ರಯೋಗಾಲಯ ದಲ್ಲಿ ಮನುಷ್ಯರೇ ನಿರ್ಮಿಸಿದ್ದು ಎಂಬ ಅಘಾತಕಾರಿ ಅಂಶವನ್ನು ಬಹಿರಂಗಗೊಳಿಸಿದ್ದು, ಇದನ್ನು ಸಾಬೀತುಪಡಿಸುವುದಕ್ಕೆ ತಮ್ಮ ಬಳಿ ಪುರಾವೆ ಇದೆ ಹೇಳಿದ್ದಾರೆ.

ಬ್ರಿಟೀಷ್ ಟಾಕ್ ಶೋ ವೊಂದರಲ್ಲಿ ನಲ್ಲಿ ಮಾತನಾಡಿರುವ ಚೀನಾ ವೈರಾಲಜಿಸ್ಟ್ ಡಾ. ಲೀ ಮೆಂಗ್ ಯಾನ್ ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಹಾಂಕ್ ಕಾಂಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಲ್ಲಿ ವೈರಾಲಜಿ ಹಾಗೂ ಇಮ್ಯುನಾಲಜಿಯಲ್ಲಿ ಪರಿಣಿತರಾಗಿರುವ ಡಾ. ಲೀ ಮೆಂಗ್ ಯಾನ್ ಅವರಿಗೆ ವುಹಾನ್ ನಲ್ಲಿ ಕಂಡುಬಂದಿರುವ ಹೊಸ ನ್ಯುಮೋನಿಯಾವನ್ನು ಇನ್ವೆಸ್ಟಿಗಟ್ ಮಾಡುವ ಕೆಲಸಕ್ಕೆ ನಿಯೋಜಿಸಿದ್ದರು. ಈ ವೇಳೆ ಹಲವು ಮುಚ್ಚಿಹಾಕಿರುವ ಸಂಗತಿಗಳು ತಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ. ಡಿಸೆಂಬರ್ ಹಾಗೂ ಜನವರಿ ಮಧ್ಯದಲ್ಲಿ ಒಟ್ಟು ಎರಡು ಬಾರಿ ಅಧ್ಯಯನ ನಡೆಸಿರುವ ಡಾ. ಲೀ ಮೆಂಗ್ ಈಗ ಅಮೆರಿಕಾದಲ್ಲಿದ್ದಾರೆ.

ಕೊರೊನಾ ವೈರಸ್ ಸೋಂಕಿನ ವಿಚಾರವಾಗಿ ತಮ್ಮ ಗಮನಕ್ಕೆ ಬಂದ ಅಂಶವನ್ನು ತಮ್ಮ ಹಿರಿಯ ಅಧಿಕಾರಿಗಳಿಗೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಗೆ ತಿಳಿಸಲು ಯತ್ನಿಸಿದ್ದೇನೆ. ಆದರೆ ನನಗೆ ಮೌನವಾಗಿರುವಂತೆ ಎಚ್ಚರಿಕೆಯನ್ನು ನೀಡಲಾಗಿತ್ತು. ಚೀನಾದಲ್ಲಿರುವ ಕಮ್ಯೂನಿಸ್ಟ್ ಪಕ್ಷ ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ನಿಸ್ಸಂಶಯವಾಗಿ ಮಾಹಿತಿಯನ್ನು ಮುಚ್ಚಿಡುತ್ತಿದೆ.

ಕೊರೊನಾ ವೈರಸ್ ಹೈ ಮ್ಯುಟೆಂಟ್ ವೈರಸ್ ಆಗಿದ್ದು, ಅತ್ಯಂತ ಅಪಾಯಕಾರಿಯೂ ಆಗಿದೆ ಎಂದು ಹೇಳಿದ್ದಾರೆ. ಇನ್ನು ಕೊರೋನಾ ವೈರಾಣು ನೈಸರ್ಗಿಕ ಸೃಷ್ಟಿಯಲ್ಲ, ಅದು ವುಹಾನ್ ನ ಸರ್ಕಾರಿ ನಿಯಂತ್ರಣದ ಪ್ರಯೋಗಾಲಯದಲ್ಲಿ ಸೃಷ್ಟಿಯಾಗಿರುವುದು, ಇದಕ್ಕೆ ಸಂಬಂಧಿಸಿದ ಅಧ್ಯಯನ ವರದಿಯನ್ನು ಶೀಘ್ರವೇ ಪ್ರಕಟಿಸುವುದಾಗಿ ಡಾ. ಲೀ ಮೆಂಗ್ ಯಾನ್ ಹೇಳಿದ್ದಾರೆ.

ಚೀನಾದ ವೈರಾಲಜಿಸ್ಟ್ ನೀಡಿರುವ ಹೇಳಿಕೆ ಇದೀಗ ವಿಶ್ವದ ಜನರ ಆತಂಕಕ್ಕೆ ಕಾರಣವಾಗಿದೆ.ಈಗಾಗಲೇ ಕೊರೊನಾ ವಿಚಾರವಾಗಿ ಅಮೇರಿಕಾ, ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಚೀನಾ ವಿರುದ್ದ ದ್ವೇಶ ಕಟ್ಟಿಕೊಂಡಿವೆ. ಇದೀಗ ಕೊರೊನಾ ಸೃಷ್ಟಿಯ ಕುರಿತು ಲಭ್ಯವಾಗಿರುವ ಮಾಹಿತಿ ಚೀನಾದ ನಿಜ ಬಣ್ಣವನ್ನು ಬಯಲು ಮಾಡಿದೆ.