ಮಾನಸಿಕ ಖಿನ್ನತೆಯಿಂದ ಡ್ರಗ್ಸ್ ಸೇವಿಸಿದ್ದು ನಿಜವೆಂದ ದೂದ್ ಪೇಡಾ : ನಟ ದಿಗಂತ್ ಡಿಫ್ರೆಶನ್ ಗೆ ಕಾರಣವಾದ್ರೂ ಏನು ಗೊತ್ತಾ ?

0

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ದಿಗಂತ್ ಹಾಗೂ ಐಂದ್ರಿತಾ ರೇ ದಂಪತಿ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಯ ವೇಳೆಯಲ್ಲಿ ದಿಗಂತ್ ಡ್ರಗ್ಸ್ ಸೇವೆನೆ ಮಾಡಿರೋ ದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಯಾವ ಕಾರಣಕ್ಕೆ ಡ್ರಗ್ಸ್ ತೆಗೆದುಕೊಂಡೇ ಅನ್ನುವ ಕಾರಣಕ್ಕೂ ಕೊಟ್ಟಿದ್ದಾರೆ. ಆದರೆ ದಿಗಂತ್ ಪತ್ನಿ ಐಂದ್ರಿತಾ ರೇ ಮಾತ್ರ ನಖರಾ ಮಾಡಿದ್ದಾರೆ. ತನಗೂ ಡ್ರಗ್ಸ್ ದಂಧೆಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ದೂದ್ ಪೇಡಾ ದಿಗಂತ್ ಹಾಗೂ ಐಂದ್ರಿತಾ ರೇ ಹೆಸರು ಡ್ರಗ್ಸ್ ಮಾಫಿಯಾದಲ್ಲಿ ಕೇಳಿಬಂದ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ದಂಪತಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು. ಸಿಸಿಬಿ ಅಧಿಕಾರಿಗಳ ವಿಚಾರಣೆಯ ವೇಳೆಯಲ್ಲಿ ದಿಗಂತ್ ಸತ್ಯವನ್ನು ಬಾಯ್ಬಿಟ್ಟಿದ್ದಾರೆ. ಸುಮಾರು ಮೂರ್ನಾಲ್ಕು ವರ್ಷಗಳ ಕಾಲ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ. ಈ ವೇಳೆಯಲ್ಲಿ ಡಿಫ್ರೆಶನ್ ನಿಂದ ಹೊರಬರುವ ಸಲುವಾಗಿ ತಾನು ಡ್ರಗ್ಸ್ ಸೇವೆನೆಯನ್ನು ಮಾಡಿದ್ದೇನೆ ಎಂದು ದಿಗಂತ್ ಹೇಳಿದ್ದಾರೆ.

ಕನ್ಡದ ಚಿತ್ರರಂಗದಲ್ಲಿಯೇ ದೂದ್ ಪೇಡಾ ಅಂತಾನೇ ಕರೆಯಿಸಿಕೊಳ್ಳುತ್ತಿದ್ದ ದಿಗಂತ್ ಮಾನಸಿಕ ಖಿನ್ನತೆಗೆ ಒಳಗಾಗಲು ಕಾರಣವಾಗಿತ್ತು ಒಂದು ಸಿನಿಮಾ. 2015ರಲ್ಲಿ ಸೆಟ್ಟೇರಿದ ಸಿನಿಮಾದ ಶೂಟಿಂಗ್ ವೇಳೆಯಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿತ್ತು. ದಿಗಂತ್ ಪತ್ನಿಯ ಪಾತ್ರ ನಿರ್ವಹಿಸುತ್ತಿದ್ದ ಸಹ ನಟಿ ವಸ್ತುಗಳನ್ನು ದಿಗಂತ್ ಕಡೆಗೆ ಎಸೆಯುವ ಘಟನೆಯನ್ನು ಚಿತ್ರೀಕರಿಸಿಕೊಳ್ಳಲಾಗಿತ್ತು.

ಸುಮಾರು 15 ಬಾರಿ ರೀ ಟೇಕ್ ತೆಗೆದುಕೊಳ್ಳಲಾಗಿತ್ತು. ಆದರೆ 16ನೇ ಬಾರಿ ಶೂಟಿಂಗ್ ನಡೆಸುವ ವೇಳೆಯಲ್ಲಿ ಸಹ ನಟಿ ಎಸೆದ ವಸ್ತು ದಿಗಂತ್ ಬಲಗಣ್ಣಿಗೆ ಬಡಿದಿತ್ತು. ಇದರಿಂದಾಗಿ ದಿಗಂತ್ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. ಸಾಕಷ್ಟು ಮಂದಿ ವೈದ್ಯರಲ್ಲಿ ಚಿಕಿತ್ಸೆಯನ್ನು ಪಡೆದಿದ್ದರೂ ಕೂಡ ಕಣ್ಣಿನ ದೃಷ್ಟಿ ಬರಲೇ ಇಲ್ಲ.

ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರಿಂದಾಗಿ ಮುಂದಿನ ದಿನಗಳಲ್ಲಿ ಸಿನಿಮಾಗಳ ಅವಕಾಶ ಲಭಿಸೋದಿಲ್ಲ ಅನ್ನೋ ಕಾರಣಕ್ಕೆ ತಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಈ ವೇಳೆಯಲ್ಲಿ ಡ್ರಗ್ಸ್ ಮಾಫಿಯಾದ ಜೊತೆಗೆ ನಂಟು ಬೆಳೆದು ತಾನು ಡ್ರಗ್ಸ್ ಸೇವನೆ ಮಾಡುವುದನ್ನು ಶುರುವಿಟ್ಟಿಕೊಂಡಿದ್ದೆ. ಪಾರ್ಟಿಗಳಲ್ಲಿ ಕೊಕೆನ್ ಸೇವೆಯನ್ನು ಮಾಡಿದ್ದೇನೆ. ಆದ್ರೆ ನಾನು ಡ್ರಗ್ಸ್ ಗೆ ದಾಸನಾಗಿಲ್ಲ. ಡ್ರಗ್ಸ್ ಸೇವನೆ ಇಲ್ಲದೆಯೂ ಬದುಕುತ್ತಿದ್ದೇನೆ. ಡ್ರಗ್ಸ್ ಸೇವೆನೆ ಒಳಗಾಗಿರುವ ಕುರಿತು ಸಾಕಷ್ಟು ನೊಂದಿದ್ದೇನೆ ಅಂತಾ ಸಿಸಿಬಿ ಅಧಿಕಾರಿಗಳ ಮುಂದೆ ದಿಗಂತ್ ಬಾಯ್ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ದಿಗಂತ್ ನೀಡಿದ ಹೇಳಿಕೆಯನ್ನು ಅರೆಕ್ಷಣ ಸಿಸಿಬಿ ಅಧಿಕಾರಿಗಳು ನಂಬಲಿಲ್ಲ. ಕೂಡಲೇ ದಿಗಂತ್ ಕಣ್ಣನ್ನು ಪರೀಕ್ಷಿಸಿದ್ದಾರೆ. ಅಲ್ಲದೇ ದಿಗಂತ್ ಅವರಿಗೆ ಡ್ರಗ್ಸ್ ಸಪ್ಲೈ ಮಾಡಿದ್ದು ಯಾರು ? ಎಷ್ಟು ಹಣವನ್ನು ಪಾವತಿಸಿ ಡ್ರಗ್ಸ್ ಪಡೆಯಲಾಗಿದೆ ಅನ್ನೋ ಕುರಿತು ಪ್ರಶ್ನೆಯನ್ನು ಕೇಳಿದ್ದಾರೆ. ಈ ವೇಳೆಯಲ್ಲಿ ದಿಗಂತ್ ಉತ್ತರ ನೀಡಲು ಸಮಯಾವಕಾಶದ ಅಗತ್ಯವಿದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ದಿಗಂತ್ ಅವರನ್ನು ಸಿಸಿಬಿ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.

ಆದರೆ ವಿಚಾರಣೆಗೆ ಕರೆದಾಗ ಖುದ್ದಾಗಿ ಹಾಜರಾಗಲೇ ಬೇಕು ಅಂತಾನೂ ಸೂಚಿಸಿದ್ದಾರೆ. ಇನ್ನು ದಿಗಂತ್ ಪತ್ನಿ ಐಂದ್ರಿತಾ ವಿರುದ್ದ ಡ್ರಗ್ಸ್ ಮಾಫಿಯಾದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಡ್ರಗ್ಸ್ ಪೆಡ್ಲರ್ ಜೊತೆಗೆ ನಂಟು ಹೊಂದಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿಡಾಡಿತ್ತು. ಆದ್ರೂ ಐಂದ್ರಿತಾ ತನಗೂ ಡ್ರಗ್ಸ್ ಮಾಫಿಯಾಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ವಿಚಾರಣೆಯ ವೇಳೆಯಲ್ಲಿ ಯಾವುದೇ ವಿಚಾರವನ್ನೂ ಬಾಯ್ಬಿಡದ ನಖರಾ ಮಾಡಿದ್ದಾರೆನ್ನಲಾಗುತ್ತಿದೆ.

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ದಿಗಂತ್ ಹಾಗೂ ಐಂದ್ರಿತಾ ದಂಪತಿಗಳಿಗೆ ಮುಳುವಾಗುವ ಎಲ್ಲಾ ಸಾಧ್ಯತೆಗೂ ಇದೆ. ಪ್ರಮುಖ ವಾಗಿ ಬಂಧನಕ್ಕೆ ಒಳಗಾಗಿರುವವರ ಪೈಕಿ ದಿಗಂತ್ ಮಾತ್ರವೇ ಡ್ರಗ್ಸ್ ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಸಿಸಿಬಿ ಅಧಿಕಾರಿಗಳು ಮತ್ತೊಮ್ಮೆ ದಂಪತಿಗಳನ್ನು ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ.

Leave A Reply

Your email address will not be published.