ಭಾನುವಾರ, ಜೂನ್ 15, 2025
HomeCorona UpdatesCoronavirus pandemic: ದೇಶದಲ್ಲಿ ಒಂದೇ ದಿನ 2.85 ಲಕ್ಷ ಹೊಸ ಕೋವಿಡ್​ ಪ್ರಕರಣ ವರದಿ

Coronavirus pandemic: ದೇಶದಲ್ಲಿ ಒಂದೇ ದಿನ 2.85 ಲಕ್ಷ ಹೊಸ ಕೋವಿಡ್​ ಪ್ರಕರಣ ವರದಿ

- Advertisement -

Coronavirus pandemic: ದೇಶದಲ್ಲಿ ಇಂದು ಕೂಡ ದೈನಂದಿನ ಕೋವಿಡ್​ ಪ್ರಕರಣಗಳ ಸಂಖ್ಯೆಯು ಮೂರು ಲಕ್ಷದ ಗಡಿಯನ್ನು ದಾಟಿಲ್ಲ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,85,914 ಹೊಸ ಕೋವಿಡ್​ ಪ್ರಕರಣಗಳು ಧೃಡಪಟ್ಟಿವೆ. ಅಲ್ಲದೇ ಕಳೆದೊಂದು ದಿನದಲ್ಲಿ ಕೋವಿಡ್​ನಿಂದಾಗಿ ದೇಶದಲ್ಲಿ 665 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.


ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,99,073 ಮಂದಿ ಕೊರೊನಾದಿಂ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆಗಿದ್ದಾರೆ. ಈ ಮೂಲಕ ದೇಶದಲ್ಲಿ ರಿಕವರಿ ದರವು 93.31 ಪ್ರತಿಶತವಾಗಿದೆ. ಇಲ್ಲಿಯವರೆಗೆ ದೇಶದಲ್ಲಿ 3,73,70,971 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆಗಿದ್ದಾರೆ


ದೇಶದಲ್ಲಿ ಪ್ರಸ್ತುತ 22,23,018 ಆ್ಯಕ್ಟಿವ್​ ಕೇಸುಗಳು ಇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ದತ್ತಾಂಶ ಹೆಳಿದೆ. ದೇಶದಲ್ಲಿ ಈವರೆಗೆ 4,91,127 ಮಂದಿ ಕೋವಿಡ್​ ಸೋಂಕಿನಿಂದ ಮೃತರಾಗಿದ್ದಾರೆ. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ 2020ರ ಮಾರ್ಚ್​ ತಿಂಗಳಲ್ಲಿ ಕೋವಿಡ್​ ಸಾವು ಸಂಭವಿಸಿತ್ತು. ದೇಶದಲ್ಲಿ ದೈನಂದಿನ ಪಾಸಿಟಿವಿಟಿ ದರವು 16. 16 ಪ್ರತಿಶತವಾಗಿದೆ.


ಇಂಡಿಯನ್​ ಕೌನ್ಸಿಲ್​ ಆಫ್​ ಮೆಡಿಕಲ್​ ರಿಸರ್ಚ್​ ನೀಡಿರುವ ಮಾಹಿತಿಯ ಪ್ರಕಾರ ಇಲ್ಲಿಯವರೆಗೆ 72,05,72,178 ಸ್ಯಾಂಪಲ್​ಗಳನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 17,69,745 ಸ್ಯಾಂಪಲ್​ಗಳನ್ನು ಮಂಗಳವಾರ ಪರೀಕ್ಷಿಸಲಾಗಿದೆ.

Coronavirus pandemic: India reports over 2.85 lakh new cases with positivity rate at 16.16%; 665 deaths

ಇದನ್ನು ಓದಿ : Swami Vivekananda Jayanti controversy : ಬಾರಕೂರಲ್ಲಿ ವಿವೇಕಾನಂದ ಜಯಂತಿ ಆಚರಣೆಗೆ ಉಪನ್ಯಾಸಕಿ ವಿರೋಧ : ಪೊಲೀಸರಿಗೆ ದೂರು

ಇದನ್ನೂ ಓದಿ : relaxation in Karnataka : ಮೂರನೇ ಅಲೆಯಲ್ಲಿ ಜನರಿಗೆ ಕೊಂಚ ರಿಲ್ಯಾಕ್ಸ್: ಮುಂದಿನ ವಾರದಿಂದ ರದ್ದಾಗಲಿದ್ಯಾ ಟಫ್ ರೂಲ್ಸ್ ?

RELATED ARTICLES

Most Popular