Yuvraj Singh : ಯುವರಾಜ್​ ಸಿಂಗ್​ ಹೇಜಲ್​ ದಂಪತಿಗೆ ಗಂಡು ಮಗು ಜನನ

Yuvraj Singh : ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್​ ಸಿಂಗ್​ ಹಾಗೂ ಅವರ ಪತ್ನಿ ಹೇಜಲ್​ ಕೀಚ್​ ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ತಮಗೆ ಗಂಡು ಮಗು ಜನಿಸಿರುವ ಬಗ್ಗೆ ಯುವರಾಜ್​ ಸಿಂಗ್​ ದಂಪತಿ ಸೋಶೀಯಲ್​ ಮೀಡಿಯಾ ಮೂಲಕ ಮಾಹಿತಿಯನ್ನು ಹಂಚಿಕೊಂಡಿವೆ.


ನಮ್ಮೆಲ್ಲ ಅಭಿಮಾನಿಗಳು,ಕುಟುಂಬ ಹಾಗೂ ಸ್ನೇಹಿತರೇ ದೇವರು ನಮಗೆ ಗಂಡು ಮಗುವನ್ನು ಕರುಣಿಸಿದ್ದಾನೆ ಎಂಬ ವಿಚಾರವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾವು ಅತ್ಯಂತ ಸಂತೋಷಪಡುತ್ತಿದ್ದೇವೆ. ಇಂತಹದ್ದೊಂದು ಆಶೀರ್ವಾದ ನೀಡಿದ್ದಕ್ಕಾಗಿ ದೇವರಿಗೂ ಧನ್ಯವಾದ ತಿಳಿಸುತ್ತಿದ್ದೇವೆ. ನಾವು ಪುಟ್ಟ ಜೀವವನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ. ಈ ಸಂದರ್ಭದಲ್ಲಿ ನೀವೆಲ್ಲ ನಮ್ಮ ಖಾಸಗಿತನಕ್ಕೆ ಗೌರವ ಕೊಡಬೇಕೆಂದು ನಾವು ಬಯಸುತ್ತಿದ್ದೇವೆ ಎಂದು ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ.


ಯುವರಾಜ್​ ಸಿಂಗ್​ ಹಾಗೂ ಹೇಜಲ್​​ ಕೀಚ್​ 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.


ಯುವರಾಜ್​ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್​ ಜೀವನದ ಏಕದಿನ ಪಂದ್ಯಕ್ಕೆ ಅಕ್ಟೋಬರ್​ 2000ನೇ ಇಸ್ವಿಯಲ್ಲಿ ಪಾದಾರ್ಪಣೆ ಮಾಡಿದ್ದರು. ಮೊದಲ ಬಾರಿಗೆ ಕೀನ್ಯಾ ವಿರುದ್ಧ ಸೆಣೆಸಿದ್ದ ಯುವರಾಜ್​ ಸಿಂಗ್​ ಬಳಿಕ 304 ಏಕದಿನ ಪಂದ್ಯ, 40 ಟೆಸ್ಟ್​ ಪಂದ್ಯ ಹಾಗೂ 58 ಅಂತಾರಾಷ್ಟ್ರೀಯ ಟಿ 20 ಪಂದ್ಯಗಳಲ್ಲಿ ಮಿಂಚಿದ್ದಾರೆ. 2007ರಲ್ಲಿ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಟಿ 20 ಟ್ರೋಫಿ ಗೆಲ್ಲುವಾಗಲೂ ಇವರು ತಂಡದ ಸದಸ್ಯರಾಗಿದ್ದರು. ಹಾಗೂ 2011ರಲ್ಲಿ ದೇಶವು ವಿಶ್ವಕಪ್​ ಗೆಲ್ಲುವಲ್ಲಿಯೂ ಯುವರಾಜ್​ ಪ್ರಮುಖ ಪಾತ್ರ ವಹಿಸಿದ್ದಾರೆ.


ಬರೋಬ್ಬರಿ 19 ವರ್ಷಗಳ ಕಾಲ ಟೀಂ ಇಂಡಿಯಾ ಪರ ಆಡಿದ್ದ ಯುವರಾಜ್​​ ಸಿಂಗ್​ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ​ 2019ರ ಜೂನ್​ 10ರಂದು ನಿವೃತ್ತಿ ಘೋಷಿಸಿದ್ದಾರೆ.

‘We are elated’: Yuvraj Singh, Hazel Keech welcome their first child

ಇದನ್ನು ಓದಿ : Swami Vivekananda Jayanti controversy : ಬಾರಕೂರಲ್ಲಿ ವಿವೇಕಾನಂದ ಜಯಂತಿ ಆಚರಣೆಗೆ ಉಪನ್ಯಾಸಕಿ ವಿರೋಧ : ಪೊಲೀಸರಿಗೆ ದೂರು

ಇದನ್ನೂ ಓದಿ : relaxation in Karnataka : ಮೂರನೇ ಅಲೆಯಲ್ಲಿ ಜನರಿಗೆ ಕೊಂಚ ರಿಲ್ಯಾಕ್ಸ್: ಮುಂದಿನ ವಾರದಿಂದ ರದ್ದಾಗಲಿದ್ಯಾ ಟಫ್ ರೂಲ್ಸ್ ?

Comments are closed.