ಮಂಗಳವಾರ, ಏಪ್ರಿಲ್ 29, 2025
HomeCorona UpdatesCoronavirus pandemic: ದೇಶದಲ್ಲಿ 2.51 ಲಕ್ಷ ದೈನಂದಿನ ಕೋವಿಡ್​ ಪ್ರಕರಣಗಳು ವರದಿ

Coronavirus pandemic: ದೇಶದಲ್ಲಿ 2.51 ಲಕ್ಷ ದೈನಂದಿನ ಕೋವಿಡ್​ ಪ್ರಕರಣಗಳು ವರದಿ

- Advertisement -

Coronavirus pandemic:ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,51,209 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 627 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ಕಳೆದೊಂದು ದಿನದಲ್ಲಿ ದೇಶದಲ್ಲಿ 3,47,443 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ರಿಕವರಿ ಪ್ರಮಾಣ 93.60 ಪ್ರತಿಶತವಾಗಿದೆ . ದೇಶದಲ್ಲಿ ಈವರೆಗೆ 3,80,24,771ಮಂದಿ ಕರೊನಾದಿಂದ ಗುಣಮುಖರಾದಂತಾಗಿದೆ.


ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿದ್ದು ಸಕ್ರಿಯ ಪ್ರಕರಣಗಳ ಪ್ರಮಾಣ 5.18 ಪ್ರತಿಶತವಾಗಿದೆ. ದೇಶದಲ್ಲಿ ಒಟ್ಟು 21,05,611 ಸಕ್ರಿಯ ಪ್ರಕರಣಗಳು ಇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.


ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಒಟ್ಟೂ ಸಂಖ್ಯೆ 4,92,327 ಆಗಿದೆ. ದೇಶದಲ್ಲಿ 2020ರ ಮಾರ್ಚ್​ ತಿಂಗಳಲ್ಲಿ ಕೊರೊನಾದಿಂದ ಮೊದಲ ಸಾವು ಸಂಭವಿಸಿತ್ತು. ದೈನಂದಿನ ಪಾಸಿಟಿವಿಟಿ ದರ ಇಂದು 15.88 ಪ್ರತಿಶತವಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.


ಇಂಡಿಯನ್ ಕೌನ್ಸಿಲ್​ ಆಫ್​ ಮೆಡಿಕಲ್​ ರಿಸರ್ಚ್​ (ಐಸಿಎಂಆರ್​) ನೀಡಿರುವ ಮಾಹಿತಿಯ ಪ್ರಕಾರ ಜನವರಿ 27ರವರೆಗೆ ದೇಶದಲ್ಲಿ ಒಟ್ಟು 72,37,48,555 ಸ್ಯಾಂಪಲ್​​ಗಳನ್ನು​ ಪರೀಕ್ಷೆಗಳನ್ನು ಮಾಡಲಾಗಿದೆ. ಇದರಲ್ಲಿ 15,82,307 ಕೋವಿಡ್​ ಸ್ಯಾಂಪಲ್​​ಗಳನ್ನು ನಿನ್ನೆ ಪರೀಕ್ಷೆ ಮಾಡಲಾಗಿದೆ.

Coronavirus pandemic: India reports over 2.51 lakh new cases with positivity rate at 15.88%; 627 deaths

ಇದನ್ನು ಓದಿ : CM Ibrahim persuasion : ಆಪ್ತನ ಬಂಡಾಯಕ್ಕೆ‌ ಬೆದರಿದ ಸಿದ್ದು: ಇಬ್ರಾಹಿಂ ಮನವೊಲಿಕೆಗೆ ರಿಜ್ವಾನ್ ಮೊರೆ ಹೋದ ಸಿದ್ಧರಾಮಯ್ಯ

RELATED ARTICLES

Most Popular