ಬೆಂಗಳೂರು : ಹೋದೆಯಾ ಪಿಶಾಚಿ ಅಂದ್ರೇ ಬಂದೇ ಗವಾಕ್ಷಿಲೀ ಅನ್ನೋ ಹಾಗೇ, ಇನ್ನೇನು ಎಲ್ಲ ಮುಗಿತಪ್ಪಾ ಅಂತ ಜನ ನೆಮ್ಮದಿಯ ನಿಟ್ಟುಸಿರು ಬಿಡುವ ವೇಳೆಗೆ ಮತ್ತೆ ಕರೋನಾ ನಾಲ್ಕನೇ ಅಲೆ (Covid-19 4th Wave) ರಾಜ್ಯಕ್ಕೆ ಕಾಲಿಟ್ಟಿದೆ. ದೇಶದ ವಿವಿಧ ನಗರಗಳಲ್ಲಿ ಕೊರೋನಾ (Covid-19 ) ನಾಲ್ಕನೇ ಅಲೆಯ ಪ್ರಭಾವ ಜೋರಾಗಿರೋ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಘೋಷಿಸಿದೆ. ಈ ಮಧ್ಯೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನಾ ಪಾಸಿಟಿವಿಟಿ ದರ ಏರಿಕೆಯಾಗಿರೋದರಿಂದ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗ್ತಿದ್ದು ನಿಯಮ ಪಾಲನೆ ಮಾಡದೇ ಇದ್ದರೇ ದಂಡ ವಿಧಿಸೋ ಎಚ್ಚರಿಕೆ ನಗರಾಡಳಿತದಿಂದ ಹೊರಬಿದ್ದಿದೆ.
ಈ ಬಗ್ಗೆ ಮಾಹಿತಿ ನೀಡಿರೋ ಬಿಬಿಎಂಪಿ ಆರೋಗ್ಯ ಇಲಾಖೆ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ, ಕೊರೊನಾ ನಾಲ್ಕನೇ ಅಲೆ ಹಿನ್ನೆಲೆಯಲ್ಲಿ ಮತ್ತೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ.
ಬೆಂಗಳೂರಿನಲ್ಲಿ ಕೊರೊನಾ ನಿಯಮಗಳ ಪಾಲನೆಯಾಗುತ್ತಿಲ್ಲ. ಜನರು ಸಾರ್ವಜನಿಕ ಸ್ಥಳದಲ್ಲೂ ಮಾಸ್ಕ್ ಹಾಕಿಕೊಳ್ಳುತ್ತಿಲ್ಲ. ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ಹೀಗಾಗಿ ಕರೋನಾ ನಿರ್ವಹಣೆ ದೃಷ್ಟಿಯಿಂದ ಮತ್ತೊಮ್ಮೆ ಜನರು ಎಲ್ಲ ನಿಯಮ ಪಾಲಿಸುವಂತೆ ನೋಡಿಕೊಳ್ಳುವ ಅನಿವಾರ್ಯತೆ ಇದೆ.
ಹರಿಯಾಣ, ಡೆಲ್ಲಿ, ನೋಯ್ಡಾ ಭಾಗಗಳಲ್ಲಿ ಅತೀ ಹೆಚ್ಚು ಕೇಸ್ ಗಳು ಬರ್ತಾ ಇದೆ.ಹಾಗಾಗಿ ಕೊರೊನಾ ನಿಯಮಗಳನ್ನು ಮತ್ತೆ ಪಾಲನೆ ಮಾಡುವಂತೆ ಆಗಬೇಕು ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆಯಬೇಕು ಬೂಸ್ಟರ್ ಡೋಸ್ ಗೆ ಎಲಿಜಿಬಲ್ ಇರೋರು ಸಹ ತಕ್ಷಣವೇ ಡೋಸ್ ಪಡೆಯಬೇಕು.ಕೊರೊನಾ ಟೆಸ್ಟಿಂಗ್ ಹೆಚ್ಚಳ ಮಾಡುವ ಅಗತ್ಯವಿದೆ ಸದ್ಯ ಪ್ರತಿದಿನ ಮೂರರಿಂದ ನಾಲ್ಕು ಸಾವಿರ ಟೆಸ್ಟಿಂಗ್ ಮಾಡಲಾಗುತ್ತಿದೆ. 10 ಸಾವಿರ ಟೆಸ್ಟಿಂಗ್ ಮಾಡಲು ಸೂಚನೆ ನೀಡಲಾಗಿದೆ. 12 -14 ವಯೋಮಾನದವರು ಶೇಕಡ 50 ರಷ್ಟು ಲಸಿಕೆ ಹಾಕಲಾಗಿದೆ ಎಂದು ವಿವರಣೆ ನೀಡಿದ್ದಾರೆ.
ಇನ್ನೊಂದೆಡೆ ಬಿಬಿಎಂಪಿ ಕೊರೊನಾ (Covid-19 ) 4ನೇ ಅಲೆ ಹಿನ್ನಲೆಯಲ್ಲಿ ಮತ್ತೆ ಆರೋಗ್ಯ ಸಿಬ್ಬಂದಿ ಮರುನಿಯೋಜನೆ ಮಾಡಲು ಮುಂದಾಗಿದೆ. ಮಾರ್ಚ್ ಅಂತ್ಯದಲ್ಲಿ ಕೋವಿಡ್ ಸಿಬ್ಬಂದಿಗಳ ಸೇವೆಯನ್ನು ವಾಪಸ್ ಪಡೆಯಲಾಗಿತ್ತು. ಈಗ ಮತ್ತೊಮ್ಮೆ ಸಿಬ್ಬಂದಿಗಳು , ಡಾಕ್ಟರ್ ಹಾಗೂ ವಾಹನಗಳ ಅವಶ್ಯಕತೆ ಎದುರಾಗಿರೋದರಿಂದ ಬಿಬಿಎಂಪಿ ಹಂತ ಹಂತವಾಗಿ ಸಿಬ್ಬಂದಿ ಮರು ನಿಯೋಜನೆ ಮಾಡಲು ಸಿದ್ಧವಾಗಿದೆ. ಕೊರೋನಾ ನಾಲ್ಕನೇ ಅಲೆಯ ನಿರ್ವಹಣೆಗಾಗಿ ಮೊದಲ ಹಂತದಲ್ಲಿ ಬಿಬಿಎಂಪಿ 60 ಡಾಕ್ಟರ್ , 150 ಸ್ವಾಬ್ ಕಲೆಕ್ಟರ್ ನೇಮಿಸಿಕೊಳ್ಳಲಿದ್ದು, ಟೆಸ್ಟಿಂಗ್, ಚಿಕಿತ್ಸೆ ಹೆಚ್ಚಿಸಲು ಬಿಬಿಎಂಪಿಗೆ ಸಿಬ್ಬಂದಿ ಅಗತ್ಯ ಎದುರಾಗಿದೆ.
ಇದನ್ನೂ ಓದಿ : ಕೊರೊನಾ ನಾಲ್ಕನೇ ಅಲೆ : ಕರ್ನಾಟಕ ಸರಕಾರದಿಂದ ಜಾರಿಯಾಯ್ತು ಮಾರ್ಗಸೂಚಿ
ಇದನ್ನೂ ಓದಿ : ಕೊರೊನಾ 4ನೇ ಅಲೆ ಬಗ್ಗೆ ಆತಂಕ ಬೇಡ, ಎಚ್ಚರಿಕೆಯಿರಲಿ – ಡಾ.ಕೆ ಸುಧಾಕರ್
Covid-19 4th Wave BBMP hiring doctors, swab test staff