Amit Shah : ರಾಜ್ಯದ ಮೇಲೆ ಚಾಣಾಕ್ಯನ ಕಣ್ಣು: ಮೇ ತಿಂಗಳೊಂದರಲ್ಲೇ ಎರಡೆರಡು ಭಾರಿ ರಾಜ್ಯಕ್ಕೆ ಬರ್ತಿದ್ದಾರೆ ಅಮಿತ್ ಶಾ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಬಿಜೆಪಿ ಹೈಕಮಾಂಡ್ ಗಳು ಕರ್ನಾಟಕದ ಮೇಲೆ ತಮ್ಮ ನೀರಿಕ್ಷೆಯ ನೋಟ ಬೀರಿವೆ. ಹೀಗಾಗಿ ಮತ್ತೆ ಮತ್ತೆ ಎರಡೂ ರಾಷ್ಟ್ರಿಯ ಪಕ್ಷದ ನಾಯಕರು ರಾಜ್ಯಕ್ಕೆ ಎಡತಾಕಲಾರಂಭಿಸಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ರಾಜ್ಯಕ್ಕೆ ಬಂದಿದ್ದ ಸಚಿವ ಅಮಿತ್ ಶಾ ( Amit Shah )ಇದೀಗ ಮೇ ತಿಂಗಳೊಂದರಲ್ಲೇ ಎರಡೆರಡು ಭಾರಿ ರಾಜ್ಯ ಪ್ರವಾಸಕ್ಕೆ ಸಜ್ಜಾಗಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯನ್ನು ಗೆಲ್ಲುವ ನಿಟ್ಟಿನಲ್ಲಿ ಕರ್ನಾಟಕದ ಮೇಲೆ ಬಿಜೆಪಿ ವರಿಷ್ಠರ ಫೋಕಸ್ ಮಾಡಿದ್ದಾರೆ. ರಾಜ್ಯದಲ್ಲಿ ಚುನಾವಣೆ ಗೆಲ್ಲಲು ವರಿಷ್ಠರಿಂದ ರಾಜ್ಯ ಪ್ರವಾಸ ಮುಂದುವರಿದಿದ್ದು, ಬಿಜೆಪಿಯ ಚಾಣಕ್ಯ ಅಮಿತ್ ಶಾ ಮೇ 3 ರಂದು ರಾಜ್ಯಕ್ಕೆ ಬರ್ತಿದ್ದಾರೆ. ಖೇಲೋ‌ ಇಂಡಿಯಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ನೆಪದಲ್ಲಿ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದು, ಇದಲ್ಲದೇ ಮೇ ತಿಂಗಳ ಅಂತ್ಯದಲ್ಲೇ ಮತ್ತೊಮ್ಮೆ ರಾಜ್ಯಕ್ಕೆ ಅಮಿತ್ ಶಾ ಆಗಮನದ ಕಾರ್ಯಕ್ರಮವಿದೆ.

ಬಿಜೆಪಿ ಈಗಾಗಲೇ ಮಂಡ್ಯ ಭಾಗದಲ್ಲಿ ಬೃಹತ ಸಮಾವೇಶವೊಂದನ್ನು ಆಯೋಜಿಸಲು ಸಿದ್ಧತೆ ನಡೆಸಿದೆ. ಈ ಮಹತ್ವದ ಸಮಾವೇಶದಲ್ಲಿ ಭಾಗವಹಿಸುತ್ತಿರುವ ಅಮಿತ್ ಶಾ ಆಗ ಮತ್ತೊಮ್ಮೆ ರಾಜ್ಯ ಪ್ರವಾಸ ಮಾಡಲಿದ್ದಾರೆ. ಮೇ 27 ರಂದು ಮಂಡ್ಯದಲ್ಲಿ ಬಿಜೆಪಿಯ ಸಮಾವೇಶ ಆಯೋಜನೆ ಮಾಡಿದೆ. ಈ ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಟ್ರೆಂಡ್ ಹೆಚ್ಚಿಸಲು ಅಮಿತ್ ಶಾ ಪ್ಲಾನ್ ಮಾಡಿದ್ದು, ಇದೇ ಸಮಾರಂಭದಲ್ಲಿ ಮೈಸೂರು ಭಾಗದ ಹಲವು ಶಾಸಕರು, ಮಾಜಿ ನಾಯಕರುಗಳು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ.

ಇದೇ ಸಮಾವೇಶದಲ್ಲಿ ಹಾಲಿ ಪಕ್ಷೇತರ ಸಂಸದೆ ಸುಮಲತಾ ಕೂಡ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಮೇ 3 ರಂದು ಖೇಲೋ ಇಂಡಿಯಾ ಸಮಾರೋಪಕ್ಕಾಗಿ ಬರ್ತಿರೋ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರ ಜೊತೆ ಮಹತ್ವದ ಸಭೆ ನಡೆಸಲಿದ್ದಾರಂತೆ.‌ಮಾತ್ರವಲ್ಲ ರಾಜ್ಯದಲ್ಲಿ ಚರ್ಚೆಗೆ ಗುರಿಯಾಗಿರುವ ಹಲವು ವಿಚಾರಗಳ ಬಗ್ಗೆಯೂ ನಾಯಕರುಗಳ ಜೊತೆ ಚರ್ಚೆ ನಡೆಸಲಿದ್ದಾರಂತೆ‌.

ಇನ್ನೊಂದೆಡೆ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸಚಿವ ಸಂಪುಟ ವಿಸ್ತರಣೆಗೂ ಅಮಿತ್ ಶಾ ಗ್ರೀನ್ ಸಿಗ್ನಲ್ ನೀಡಲಿದ್ದಾರೆ ಎನ್ನಲಾಗಿದೆ. ಇನ್ನೇನು ಚುನಾವಣೆ ಸಮೀಪಿಸುತ್ತಿರೋದರಿಂದ ಅತೃಪ್ತರಿಗೆ ಸಚಿವ ಸ್ಥಾನ ನೀಡಿ ಮುಂದಿನ ಚುನಾವಣೆಗೆ ಪಕ್ಷ ಸಂಘಟನಾ ಕಾರ್ಯಕ್ಕೆ ಮನವೊಲಿಸುವ ಪ್ರಯತ್ನವೂ ನಡೆಯಲಿದೆ ಎನ್ನಲಾಗ್ತಿದೆ.

ಇದನ್ನೂ ಓದಿ : ದೇವೇಗೌಡರ ಮೊಮ್ಮಕ್ಕಳ ಬಳಿಕ ಸೊಸೆ ಸರದಿ : ವಿಧಾನಸಭಾ ಎಲೆಕ್ಷನ್ ಗೆ ಭವಾನಿ ರೇವಣ್ಣ

ಇದನ್ನೂ ಓದಿ : 40% ಕಮೀಷನ್ ಪ್ರಕರಣ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೊರೆ ಹೋದ ಗುತ್ತಿಗೆದಾರರ ಸಂಘ

Election Strategy Amit Shah visit Karnataka 2 times in May

Comments are closed.