Covid-19:ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಡ್ ಸೋಂಕಿನಿಂದ ಜನರನ್ನು ರಕ್ಷಿಸುವ ಸಲುವಾಗಿ ಕೊರೊನಾ ಎರಡನೇ ಡೋಸ್ ಹಾಗೂ ಬೂಸ್ಟರ್ ಡೋಸ್ ನಡುವಿನ ಅಂತರವನ್ನು 9 ತಿಂಗಳಿನಿಂದ ಆರು ತಿಂಗಳಿಗೆ ಇಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ಸೀರಂ ಇನ್ಸ್ಟಿಟ್ಯೂಟ್ ಸಿಇಓ ಆದರ್ ಪೂನವಲ್ಲಾ ಹೇಳಿದ್ದಾರೆ.
ಸಾರ್ವಜನಿಕರು ಹಾಗೂ ವಿಪಕ್ಷಗಳ ಸಾಕಷ್ಟು ಗಲಾಟೆಗಳ ನಡುವೆಯೂ ತಾವು 2021ರ ಮೊದಲ ವಾರ್ಷಿಕದಲ್ಲಿ ಕೊರೊನಾ ಲಸಿಕೆಯನ್ನು ನಿರೀಕ್ಷೆಗೆ ತಕ್ಕಷ್ಟು ಪೂರೈಸಲು ಸಾಧ್ಯವಾಗಲಿಲ್ಲ ಎಂಬುದನ್ನು ಇದೇ ವೇಳೆ ಆದರ್ ಪೂನವಲ್ಲಾ ನೆನಪಿಸಿಕೊಂಡರು.
ಕೊರೊನಾ 2ನೇ ಅಲೆಯ ಸಂದರ್ಭದಲ್ಲಿ ಸುಮಾರು 2 ತಿಂಗಳುಗಳ ಕಾಲ ಕೋವಿಡ್ ಲಸಿಕೆಯ ರಫ್ತನ್ನು ನಿಷೇಧಿಸಿದಾಗ ಕೇಂದ್ರ ಸರ್ಕಾರ ಹಾಗೂ ಸೀರಂ ಇನ್ಸ್ಟಿಟ್ಯೂಟ್ ತೀವ್ರ ಹಿನ್ನಡೆಯನ್ನು ಅನುಭವಿಸಬೇಕಾಗಿ ಬಂದಿತ್ತು ಎಂದು ಹೇಳಿದರು.
ಕೊರೊನಾ ಲಸಿಕೆಯ ಎರಡನೇ ಡೋಸ್ ಹಾಗೂ ಮೂರನೇ ಡೋಸ್ಗಳ ನಡುವೆ 9 ತಿಂಗಳುಗಳ ಅಂತರ ಇರಬೇಕು ಎಂಬ ನಿಯಮವನ್ನು ಕೇಂದ್ರ ಸರ್ಕಾರ ರೂಪಿಸಿರುವುದರಿಂದ ಬೂಸ್ಟರ್ ಡೋಸ್ ನೀಡುವಿಕೆ ಕೊಂಚ ನಿಧಾನ ಗತಿಯಲ್ಲಿ ಸಾಗುತ್ತಿದೆ. ಈ ಅಂತರವನ್ನು ಆರು ತಿಂಗಳಿಗೆ ಇಳಿಕೆ ಮಾಡುವಂತೆ ನಾವು ಸರ್ಕಾರ ಹಾಗೂ ತಜ್ಞರ ಜೊತೆಯಲ್ಲಿ ಮನವಿ ಮಾಡಿದ್ದೇವೆ ಎಂದು ಆದರ್ ಪೂನವಲ್ಲಾ ಹೇಳಿದ್ದಾರೆ.
ಈ 9 ತಿಂಗಳ ಅಂತರವನ್ನು ಆರು ತಿಂಗಳಿಗೆ ಇಳಿಕೆ ಮಾಡಿದರೆ ವಿದೇಶಿ ಪ್ರಯಾಣ ಮಾಡುವ ಜನರಿಗೆ ನಿಜಕ್ಕೂ ಅನುಕೂಲವಾಗಲಿದೆ. ನೀವು ಆಗಸ್ಟ್ ತಿಂಗಳಲ್ಲಿ ಡೋಸ್ ತೆಗೆದುಕೊಂಡಿದ್ದರೆ ಮಾತ್ರ ಈಗ ಲಸಿಕೆ ಪಡೆಯಲು ಅರ್ಹರಿರುತ್ತೀರಿ. ಆದ್ದರಿಂದ ನಾವು ಈ ಅಂತರವನ್ನು ಆರು ತಿಂಗಳಿಗೆ ಇಳಿಕೆ ಮಾಡುವಂತೆ ಮನವಿ ಮಾಡಿದ್ದೇವೆ. ಇದರಿಂದ ಅನೇಕರು ಕೊರೊನಾ ಬೂಸ್ಟರ್ ಡೋಸ್ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇದನ್ನು ಓದಿ : Chemical factory : ರಾಸಾಯನಿಕ ಕಾರ್ಖಾನೆಯಲ್ಲಿ ಸ್ಪೋಟ : 6 ಮಂದಿ ಕಾರ್ಮಿಕರು ಸಾವು
ಇದನ್ನೂ ಓದಿ : Covid 4th wave scare : ಅಗಸ್ಟ್‌ನಲ್ಲಿ ಭಾರತದಲ್ಲಿ ಕೊರೊನಾ 4ನೇ ಅಲೆ ಸ್ಟೋಟ : ಐಐಟಿ ತಜ್ಞರ ಎಚ್ಚರಿಕೆ
Covid-19: Serum Institute’s Adar Poonawalla appeals to govt to reduce time gap for booster dose to six months