Bangalore : ಸಿಲಿಕಾನ್‌ ಸಿಟಿಗೆ ಮಾಲಿನ್ಯದಿಂದ ಆತಂಕ : ಸ್ತ್ರೀಯರ ಆರೋಗ್ಯದ ಬಗ್ಗೆ ಹೊರಬಿತ್ತು ಆತಂಕಕಾರಿ ಮಾಹಿತಿ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು (Bangalore) ಐಟಿ ಸಿಟಿ ಎಂಬ ಖ್ಯಾತಿಯ ಜೊತೆಗೆ ಈಗ ಮಾಲಿನ್ಯದಲ್ಲೂ ಹೊಸ ದಾಖಲೆ ಬರೆಯಲು ಮುಂದಾಗುತ್ತಿದೆ. ಏರುತ್ತಿರುವ ಮಾಲಿನ್ಯದಿಂದ ಉಸಿರಾಟದ ತೊಂದರೆ ಸೇರಿದಂತೆ ಹಲವು ಸಮಸ್ಯೆ ಕಾಣಿಸಿಕೊಳ್ತಿದೆ. ಈಗ ಆತಂಕಕಾರಿ ವಿಚಾರವೊಂದು ಬಯಲಾಗುತ್ತಿದ್ದು, ಈ ಮೀತಿ ಮೀರಿದ ಮಾಲಿನ್ಯದಿಂದ ಹೆಣ್ಣುಮಕ್ಕಳು (women’s health) ತಾಯ್ತನದ ಭಾಗ್ಯದಿಂದಲೇ ವಂಚಿತರಾಗುತ್ತಿದ್ದರಂತೆ.

ಹೌದು, ಬೆಂಗಳೂರಿನ ಮಹಿಳೆಯರಲ್ಲಿ ಈ ಫಲವಂತಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಈಗ ಹಿಂದೆಂದಿಗಿಂತಲೂ ಹೆಚ್ಚು ಮಹಿಳೆಯರು ತಾಯ್ತನದ ಸಮಸ್ಯೆ ಎದುರಿಸುತ್ತಿದ್ದಾರೆ. ದಿನ ನಿತ್ಯ ವಾಹನಗಳಿಂದ ಬರುವ ಹೊಗೆ ಸೇವಿಸೋದ್ರಿಂದ ಮಹಿಳೆಯರ ಆರೋಗ್ಯದ ಮೇಲೆ ಬಹಳ ಎಫೆಕ್ಟ್ ಆಗ್ತಿದೆ ಎನ್ನಲಾಗಿದ್ದು, ಬೆಂಗಳೂರಿನಲ್ಲಿ ಶೇ. 20 ರಿಂದ 25% ರಷ್ಟು ಬಂಜೆತನ ಪ್ರಮಾಣ ಏರಿಕೆಯಾಗಿದ್ದು,ಒತ್ತಡದಿಂದಲೂ ಫರ್ಟಿಲಿಟಿ ರೇಟ್ ಇಳಿಕೆಯಾಗ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 1992ರಿಂದ  TFR ಪ್ರಮಾಣದಲ್ಲಿ ಕುಸಿತ ಕಂಡಿದೆ. 1992-93ರಲ್ಲಿ 2.65 ಇದ್ದ TFR ಪ್ರಮಾಣ ಇಳಿಕೆಯಾಗಿದ್ದು, 13 ವರ್ಷಗಳಲ್ಲಿ 2.1 ಕ್ಕೆ ಇಳಿಕೆ ಕಂಡಿದೆ ಈ ಫಲವಂತಿಕೆ.ಇನ್ನು 2030ರಲ್ಲಿ 1.5 ರಷ್ಟು ಫಲವಂತಿಕೆ ಇಳಿಯುವ ಬಗ್ಗೆ ಕಳವಳ ವ್ಯಕ್ತಪಡಿಸ್ತಿದ್ದಾರೆ. ಪ್ರತಿ 5 ಹೆಣ್ಣುಮಕ್ಕಳಲ್ಲಿ ಒಬ್ಬ ಯುವತಿಯಲ್ಲಿ ಫಲವಂತಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಈ ಫಲವಂತಿಕೆಯಿಂದ ಗರ್ಭಕೋಶಕ್ಕೂ ಕೂಡ ತೊಂದರೆಯಾಗ್ತಿದ್ದು, ತಾಯ್ತನದ‌ ಕನಸು ಈಡೇರಿಸಿಕೊಳ್ಳಲು ಹೆಣ್ಣುಮಕ್ಕಳು ದುಬಾರಿ ಚಿಕಿತ್ಸೆ ಹಾಗೂ ಸೆರೋಗಸಿ ಮೊರೆ ಹೋಗುವ ಪರಿಸ್ಥಿತಿ ಎದುರಾಗುತ್ತಿದೆ‌. ಇನ್ನು ಮಹಿಳೆಯರು ಫಲವಂತಿಕೆ ಸಮಸ್ಯೆ ಎದುರಿಸುತ್ತಿರೋದ್ಯಾಕೆ? ಫಲವಂತಿಕೆ ಕಡಿಮೆ ಆಗಿರೋದು ಹೇಗೆ ಎಂಬುದನ್ನು ಗಮನಿಸೋದಾದರೇ

  1. ಜೀವನ ಶೈಲಿಯಿಂದ ಫಲವಂತಿಕೆ ಮೇಲೆ ಪರಿಣಾಮ
  2. ಬದಲಾಗುತ್ತಿರುವ ಆಹಾರ ಪದ್ಧತಿ
  3. ಹಾರ್ಮೋನ್ಸ್‌ಗಳಲ್ಲಿ ಏರುಪೇರುಗಳಿಂದ ಬಂಜೆತನ ಕಾಡುತ್ತಿದೆ.
    ಇದೆಲ್ಲದಕ್ಕಿಂತ ಮುಖ್ಯವಾಗಿ ಪರಿಸರ ಮಾಲಿನ್ಯ ಮಕ್ಕಳ ತಾಯ್ತನದ ಕನಸಿಗೆ ಕೊಳ್ಳಿ ಇಡುತ್ತಿದೆ.ಹೀಗಾಗಿ ಪರಿಸರ ಮಾಲಿನ್ಯ ತಡೆಯಬೇಕು. ನಗರದಲ್ಲಿ ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕೆಂಬ ಒತ್ತಡ ವ್ಯಕ್ತವಾಗುತ್ತಿದೆ.

ಅಲ್ಲದೇ ಮಹಿಳೆಯರು ಕೂಡ ಹೆಚ್ಚು ಹಣ್ಣು ತರಕಾರಿ ಸೇವನೆ ಮಾಡಬೇಕು. ಜಂಕ್ ಫುಡ್‌ಗಳನ್ನು ಕಡಿಮೆ ಮಾಡಬೇಕು.ಮುಟ್ಟಿನ ಸಮಸ್ಯೆ ಬಂದಾಗ ಚಿಕಿತ್ಸೆ ಪಡೆಯಬೇಕು.ಬೊಜ್ಜು ಬಾರದಂತೆ ನೋಡಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡ್ತಿದ್ದಾರೆ‌.

ಇದನ್ನೂ ಓದಿ : ಮಾರ್ಗಸೂಚಿ ಪ್ರಕಟಿಸದ ಕರ್ನಾಟಕ ಸರ್ಕಾರ : ಟೋಯಿಂಗ್ ನವರ ಕಷ್ಟ ಕೇಳೋರಿಲ್ಲ

ಇದನ್ನೂ ಓದಿ : ಕರಗಕ್ಕೂ ಧರ್ಮ ಸಂಘರ್ಷದ ಕರಿನೆರಳು : ಕರಗ ಸಮಿತಿ ಭೇಟಿ ಮಾಡಿದ ಮೌಲ್ವಿಗಳು

Pollution for Bangalore, concerns Anxiety Information about women’s health

Comments are closed.