Covid RT-PCR test : ಹೆಚ್ಚಿದ ಕೊರೊನಾ ಆತಂಕ : ರಾಜ್ಯ ಆರೋಗ್ಯ ಇಲಾಖೆಯಿಂದ ಮಹತ್ವದ ಪ್ರಕಟಣೆ

ಬೆಂಗಳೂರು : (Covid RT-PCR test) ದೇಶದಲ್ಲಿ ದಿನೇ ದಿನೇ ಕೊರೊನಾ ಆತಂಕ ಹೆಚ್ಚಳವಾಗುತ್ತಿದೆ. ಸಕ್ರಿಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಇದಲ್ಲದೇ ಕಳೆದ ಎರಡು ಮೂರು ದಿನಗಳಲ್ಲಿ 20 ಕ್ಕೂ ಹೆಚ್ಚು ಸಾವುಗಳು ಕೂಡ ವರದಿಯಾಗಿವೆ. ಈ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಕೆಲವು ಕ್ರಮಗಳನ್ನು ಈಗಾಗಲೇ ತೆಗೆದುಕೊಂಡಿದ್ದು, ಇದೀಗ ರಾಜ್ಯ ಆರೋಗ್ಯ ಇಲಾಖೆ ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಮಾದರಿಗಳನ್ನು ಜಿಲ್ಲಾವಾರು ಪ್ರಯೋಗ ಶಾಲಾ ಮ್ಯಾಪಿಂಗ್‌ ಅನುಗುಣವಾಗಿ ಪ್ರಯೋಗಶಾಲೆಗೆ ಕಳುಹಿಸುವಂತೆ ಸುತ್ತೋಲೆ ಹೊರಡಿಸಿದೆ.

ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಮಾದರಿಗಳನ್ನು ಜಿಲ್ಲಾವಾರು ಪ್ರಯೋಗ ಶಾಲಾ ಮ್ಯಾಪಿಂಗ್‌ ಅನುಗುಣವಾಗಿ ಪ್ರಯೋಗಶಾಲೆಗೆ ಕಳುಹಿಸುವ ಕುರಿತು ಜನಸಂಖ್ಯಾಧಾರಿತ ಮಾನದಂಡ 141 ಮಿಲಿಯನ್‌ ಜನಸಂಖ್ಯೆಯನ್ನು ಹಾಗೂ ಪಾಸಿಟಿವಿಟಿ ದರದ ಆಧಾರದ ಮೇಲೆ 20 ಸಾವಿರ ಪರೀಕ್ಷೆಗೆ ನಿಗದಿ ಪಡಿಸಲಾಗಿದ್ದು, ನಿಗದಿತ ಕನಿಷ್ಠ ಮೂವತ್ತು ಶೇಕಡಾ ಆರ್‌ಎಟಿ ಹಾಗೂ 70 ಶೇಕಡಾ ಆರ್‌ಟಿ-ಪಿಸಿಆರ್ ಮೂಲಕ ಪರೀಕ್ಷೆಯನ್ನು ನಡೆಸುವಂತೆ ತಿಳಿಸಲಾಗಿದೆ.

ಹಾಗೂ ಎಲ್ಲಾ ಪರೀಕ್ಷೆಗಳನ್ನು ಕಡ್ಡಾಯವಾಗಿ ಸರ್ಕಾರಿ ಪ್ರಯೋಗಶಾಲೆಗಳಲ್ಲಿಯೇ ನಡೆಸುವಂತೆ ಹಾಗೂ ಅಭ್ಯವಿರುವ ಕೋವಿಡ್‌-19 ರ ಪರೀಕ್ಷಾ ಕಿಟ್‌ ಗಳನ್ನು ಫಿಫೋ ಮಾದರಿಯಲ್ಲಿ ಉಪಯೋಗಿಸಿ ಕೋವಿಡ್‌-19 ರ ಕಿಟ್‌/ಪರಿಕರಗಳನ್ನು ಅನುಪಯುಕ್ತವಾಗುವಂತೆ ಕೋವಿಡ್‌ ಪರೀಕ್ಷೆಗಳನ್ನು ನಡೆಸಲು ಸೂಚಿಸಲಾಗಿದೆ. ಎಲ್ಲಾ ಮನೆಯ ಸಂಪರ್ಕಗಳು ಮತ್ತು ಕೆಲಸದ ಸ್ಥಳದಲ್ಲಿ ಪ್ರಾಥಮಿಕ ಸಂಪರ್ಕಗಳನ್ನು ಹೊಂದಿರುವವರನ್ನು ಕಡ್ಡಾಯವಾಗಿ ಪರೀಕ್ಷಿಸಬೇಕು. ಎಲ್ಲಾ ಐಎಲ್‌ಐ ಹಾಗೂ ಎಸ್‌ಎಆರ್‌ಐ ಪ್ರಕರಣಗಳನ್ನು ಕಡ್ಡಾಯವಾಗಿ ಪರೀಕ್ಷಿಸಬೇಕು. ಇದರ ಜೊತೆಗೆ ರೋಗಲಕ್ಷಣವುಳ್ಳ ಅಂತರಾಜ್ಯ ಮತ್ತು ಅಂತರಾಷ್ಟ್ರೀಯ ಪ್ರಯಾಣಿಕರನ್ನು ಕಡ್ಡಾಯವಾಗಿ ಪರೀಕ್ಷಿಸಲು ಸೂಚಿಸಲಾಗಿದೆ.

ಇದನ್ನೂ ಓದಿ : Corona Surge : ಭಾರತಕ್ಕೆ ಕೊರೊನಾ ವೈರಸ್‌ ಶಾಕ್‌ : ಒಂದೇ ದಿನದಲ್ಲಿ ಪ್ರಕರಣ ಸಂಖ್ಯೆಯಲ್ಲಿ 30 ಶೇಕಡಾ ಹೆಚ್ಚಳ

ಇದನ್ನೂ ಓದಿ : Corona Hike : ಭಾರತಕ್ಕೆ ಕೊರೊನಾ ವೈರಸ್‌ ಶಾಕ್‌ : 7,830 ಹೊಸ ಕೋವಿಡ್ ಪ್ರಕರಣ ದಾಖಲು

ಪ್ರತಿದಿನ ಜಿಲ್ಲಾವಾರು ಪರೀಕ್ಷಾ ಗುರಿಯನ್ನು ಕಡ್ಡಾಯವಾಗಿ ನಡೆಸಿ, ಅನುಬಂಧ-1 ರಲ್ಲಿನ ಮ್ಯಾಪಿಂಗ್‌ ನಂತೆಯೇ ಸೂಚಿಸಿರುವ ಜಿಲ್ಲಾ ಪ್ರಯೋಗ ಶಾಲೆಗಳಿಗೆ ಕಳುಹಿಸಿ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : Decrease in corona case : ಭಾರತದಲ್ಲಿ ಕೊಂಚ ಇಳಿಕೆ ಕಂಡ ಕೊರೊನಾ : 5,676 ಹೊಸ ಕೋವಿಡ್ ಪ್ರಕರಣ ದಾಖಲು

Covid RT-PCR test: Increased concern about Corona: Important announcement from the state health department

Comments are closed.