ಕುಂದಾಪುರ ವಿಧಾನಸಭೆ ಕ್ಷೇತ್ರ : ಇಂದು ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಕಿರಣ್ ಕೊಡ್ಗಿ

ಕುಂದಾಪುರ : ರಾಜ್ಯದಾದ್ಯಂತ ಚುನಾವಣೆ ರಂಗೆರುತ್ತಿದ್ದು, ಟಿಕೆಟ್‌ ಹಂಚಿಕೆ ಕಾವು ಕೂಡ ಏರಿದೆ. ಕಾಂಗ್ರೆಸ್‌ ಎರಡು ಪಟ್ಟಿಯನ್ನು ರಿಲೀಸ್‌ ಮಾಡಿದರೆ, ಜೆಡಿಎಸ್‌ ಒಂದು ಹಂತದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಬಿಜೆಪಿ ಪಕ್ಷ ಲೇಟೆಸ್ಟ್‌ ಆಗಿ ಒಂದೇ ವಾರದಲ್ಲೇ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕುಂದಾಪುರ ವಿಧಾನಸಭಾ ಕ್ಷೇತ್ರದ (Kundapur assembly constituency) ವಾಜಪೇಯಿ ಎಂದೇ ಪ್ರಖ್ಯಾತಿ ಪಡೆದ ಹಾಲಾಡಿ ಶ್ರೀನಿವಾಸ ಶೆಟ್ಟಿ ಚುನಾವಣೆಯಿಂದ ಹಿಂದೆ ಸರಿದ ಬಳಿಕ ಈ ಕ್ಷೇತ್ರಕ್ಕೆ ಬಿಜೆಪಿಯಿಂದ ಅಭ್ಯರ್ಥಿ ಯಾರಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದ್ದು, ಈ ಬಾರಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಿರಣ್‌ ಕುಮಾರ್‌ ಕೊಡ್ಗಿ (Kiran Kodgi) ಅವರು ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು, ಬಿಜೆಪಿ ಮೊದಲ ಪಟ್ಟಿಯಲ್ಲೇ ಇವರ ಹೆಸರು ಬಿಡುಗಡೆಯಾಗಿದೆ. ಇಂದು ಏಪ್ರಿಲ್‌ 13ರಂದು ಬಿಜೆಪಿ ಅಭ್ಯರ್ಥಿಯಾಗಿ ಕಿರಣ್‌ ಕುಮಾರ್‌ ಕೊಡ್ಗಿ ಅವರು ಕುಂದಾಪುರ ತಹಶೀಲ್ದಾರ್‌ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

ಇದೇ ಬರುವ ಮೇ 10ಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲ್ಲಿದ್ದು, ದೇಶ, ರಾಜ್ಯದಾದ್ಯಂತ ಪ್ರತಿ ಪಕ್ಷದಲ್ಲೂ ಚುನಾವಣೆ ಬಿಸಿ ಏರಿದೆ. ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದ್ದು, ಈಗಾಗಲೇ ಹೆಚ್ಚಿನ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸದ್ಯ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಎರಡು ಹಂತದ ಪಟ್ಟಿ ಒಂದರ ಮೇಲೊಂದರಂತೆ ಬಿಡುಗಡೆಗೊಂಡಿದ್ದು, ಇನ್ನೊಂದು ಪಟ್ಟಿ ಬಾಕಿ ಇದೆ. ಈ ಮಧ್ಯೆ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಯಾರಾಗಬಹುದು ಎಂಬ ಕುತೂಹಲದ ನಡುವೆ ಕುಂದಾಪುರ ಕ್ಷೇತ್ರದಲ್ಲಿ ಕಿರಣ್‌ ಕೊಡ್ಗಿ ಅಭ್ಯರ್ಥಿ ಆಗುವ ಭರವಸೆ ಪಟ್ಟಿ ಬಿಡುಗಡೆ ಮೊದಲ ಹಂತದಲ್ಲೇ ನಿಜವಾಗಿದೆ.

ಏಕೆಂದರೆ ಕುಂದಾಪುರ ಕ್ಷೇತ್ರದ ವಾಜಪೇಯಿ ಅಂತಲೇ ಕರೆಸಿಕೊಳ್ಳುತ್ತಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಪ್ರತಿ ಬಾರಿ ಕುಂದಾಪುರದಲ್ಲಿ ಹಾಲಾಡಿಯವರೇ ನಿಂತು ಜಯಭೇರಿ ಬಾರಿಸಿದ್ದರು. ಸತತ ಐದು ಬಾರಿ ಕುಂದಾಪುರದಲ್ಲಿ ಶಾಸಕರಾಗಿ ಆಯ್ಕೆಯಾದ ಇವರು ಈ ಬಾರಿ ಚುನಾವಣೆಯಿಂದ ಹಿಂದೆ ಸರಿದಿದ್ದು, ಕಿರಣ್‌ ಕೊಡ್ಗಿ ಯವರಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದರು. ಬೆಂಬಲ ನೀಡುವುದಲ್ಲದೇ ಈ ಬಾರಿ ಅವರಿಗೆ ಅವಕಾಶ ನೀಡುವ ಸಲುವಾಗಿಯೇ ಚುನಾವಣೆಯಿಂದ ಹಿಂದೆ ಸರಿಯುತ್ತಿರುವುದಾಗಿಯೂ ತಿಳಿಸಿದ್ದರು.

ಇದನ್ನೂ ಓದಿ : Fire near helipad: ಬೈಂದೂರು : ಸಿಎಂ ಬಸವರಾಜ್ ಬೊಮ್ಮಾಯಿ ಅವರ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದ ಹೆಲಿಪ್ಯಾಡ್ ಬಳಿ ಬೆಂಕಿ

ಈ ನಿಟ್ಟಿನಲ್ಲಿ ಈ ಬಾರಿ ಕಿರಣ್‌ ಕೊಡ್ಗಿಯವರೇ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಮಧ್ಯೆ ಜಯಪ್ರಕಾಶ್‌ ಹೆಗ್ಡೆಯವರ ಹೆಸರು ಕೂಡ ಕೇಳಿಬಂದಿದ್ದು, ಹೆಗ್ಡೆಯವರಿಗೆ ಟಿಕೆಟ್‌ ಫೈನಲ್‌ ಆಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಅದು ಬಿಜೆಪಿ ಮೊದಲ ಪಟ್ಟಿ ಬಿಡುಗಡೆಯಲ್ಲೇ ಸುಳ್ಳಾಗಿದೆ. ಹೀಗಾಗಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕುಂದಾಪುರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಇದೀಗ ಕಿರಣ್‌ ಕೊಡ್ಗಿಯವರು ಸ್ಪರ್ಧಿಸಲಿದ್ದಾರೆ. ಇನ್ನು ಇಂದು ಕಿರಣ್‌ ಕೊಡ್ಗಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಕುಂದಾಪುರ ತಹಶೀಲ್ದಾರ್‌ ಕ್ಷೇತ್ರಕ್ಕೆ ತೆರಳಿ ನಾಮಪತ್ರ ಸಲ್ಲಿಸಿದ್ದು, ಜಯಭೇರಿ ಸಾಧಿಸುವುದು ನಿಜ ಎಂದು ಬೆಂಬಲಿಗರು ಒಮ್ಮತವನ್ನು ಸೂಚಿಸಿದ್ದಾರೆ.

Kundapur Assembly Constituency : BJP candidate Kiran Kodgi filed his nomination papers today

Comments are closed.