ಬೆಂಗಳೂರು : ಭಾರತದಲ್ಲಿ ಮೂರನೇ ಅಲೆಯ ಅಂತಹ ವಿಪರೀತ ಪರಿಣಾಮವನ್ನು ಉಂಟು ಮಾಡಲಿಲ್ಲ. ಅದರಲ್ಲೂ ಕರ್ನಾಟಕ ಮೂರನೇ ಅಲೆಯಿಂದ ಬಚಾವ್ ಆಯಿತು ಅಂತಾನೇ ಹೇಳಬಹುದು. ಆದರೆ ಹೀಗೆ ಸಮಾಧಾನದಲ್ಲಿದ್ದ ಕರ್ನಾಟಕದ ಜನರಿಗೆ ಈಗ ಶಾಕಿಂಗ್ ಸುದ್ದಿಯೊಂದು ಆತಂಕ ತಂದಿದೆ. ಕೊರೋನಾ, ಒಮೈಕ್ರಾನ್ ಹಾಗೂ ಡೆಲ್ಟಾ (Omicron + Delta ) ಬಳಿಕದ ಹೊಸ ತಳಿ ಡೆಲ್ಟಾಕ್ರಾನ್ (Deltacron ) ಎಲ್ಲೆಡೆ ಕಾಣಿಸಿಕೊಳ್ಳಲಾರಂಭಿಸಿದ್ದು ಇದಕ್ಕೆ ದೇಶದಲ್ಲಿ ಕರ್ನಾಟಕವೇ ಹಾಟ್ ಸ್ಪಾಟ್ ಎನ್ನಲಾಗುತ್ತಿದೆ.

ಡೆಲ್ಟಾ ಮತ್ತು ಓಮೈಕ್ರಾನ್ ಸಂಯೋಜನೆಯಿಂದ ಮಾಡಲ್ಪಟ್ಟಿರುವ ಈ ವೈರಸ್ (Deltacron ) ದೇಶದ ಅನೇಕ ರಾಜ್ಯಗಳಲ್ಲಿ ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು 568 ಹೊಸ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 221 ಡೆಲ್ಟಾ ಸೋಂಕಿನ ಪ್ರಕರಣಗಳು ಕರ್ನಾಟಕದಲ್ಲೇ ಕಾಣಿಸಿಕೊಂಡಿರೋದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ನಡೆದಿರುವ ಸೋಂಕಿತರ ಪರೀಕ್ಷೆಯಲ್ಲಿ ಕರ್ನಾಟಕದಲ್ಲಿ 221 ಸೋಂಕಿತರಲ್ಲಿ ಡೆಲ್ಟಾಕ್ರಾನ್ ಲಕ್ಷಣ ಕಂಡುಬಂದಿದೆ. ಇದು ದೇಶದಲ್ಲೇ ಅತಿ ಹೆಚ್ಚು ಪ್ರಕರಣವಾಗಿದ್ದು, ಹೀಗಾಗಿ ಕರ್ನಾಟಕವೇ ಹಾಟ್ ಸ್ಪಾಟ್ ಎಂದು ಪರಿಗಣಿಸಲಾಗಿದೆ. ತಮಿಳುನಾಡಿನಲ್ಲಿ 90, ಮಹಾರಾಷ್ಟ್ರದಲ್ಲಿ 66, ಗುಜರಾತ್ 33, ಪಶ್ಚಿಮ ಬಂಗಾಳದಲ್ಲಿ 32, ತೆಲಂಗಾಣದಲ್ಲಿ 25 ನವದೆಹಲಿಯಲ್ಲಿ 20 ಪ್ರಕರಣಗಳು ತನಿಖೆ ಹಂತದಲ್ಲಿವೆ.

ತಜ್ಞರ ಅಧ್ಯಯನ ವರದಿ ಪ್ರಕಾರ ಡೆಲ್ಟಾಕ್ರಾನ್ ಸೂಪರ್ ಮ್ಯೂಟಂಟ್ ವೈರಸ್. ಇದರ ವೈಜ್ಞಾನಿಕ ಹೆಸರು BA.1+B.1.617.2 ಡೆಲ್ಟಾ ಮತ್ತು ಓಮೈಕ್ರಾನ್ ನಿಂದ ಮಾಡಲ್ಪಟ್ಟ ಹೈಬ್ರೀಡ್ ಸ್ಟ್ರೈನ್ ಇದಾಗಿದೆ. ಕಳೆದ ತಿಂಗಳು ಸೈಪ್ರಸ್ ಸಂಶೋಧಕರು ಈ ಬಗ್ಗೆ ಸಂಶೋಧನೆ ನಡೆಸಿದ್ದು, ಪ್ರಾರಂಭದಲ್ಲಿ ಇಂತಹದೊಂದು ವೈರಸ್ ಇರುವಿಕೆಯ ಕುರಿತು ಅನುಮಾನ ವ್ಯಕ್ತಪಡಿಸಲಾಗಿತ್ತು.

ಆದರೆ ಬಳಿಕ ಬ್ರಿಟನ್ ನಲ್ಲಿ ಮೊದಲ ಡೆಲ್ಟಾಕ್ರಾನ್ ವೈರಸ್ ಪ್ರಕರಣಗಳು ವರದಿಯಾಗಿದ್ದು,ಬಳಿಕ ಇದು ಹಲವು ದೇಶಗಳಿಗೆ ಹಬ್ಬಿತ್ತು. ಈ ವೈರಸ್ ಫ್ರಾನ್ಸ್ ನಲ್ಲಿ ಜನವರಿಯಲ್ಲಿ ಕಾಣಿಸಿಕೊಂಡಿದೆ. ಅತ್ಯಂತ ವೇಗವಾಗಿ ಹರಡುವ ಸೋಂಕು ಮಾರ್ಚ ವೇಳೆಗೆ ವಿಶ್ವದ ಇತರ ರಾಷ್ಟ್ರಗಳನ್ನು ವ್ಯಾಪಿಸಿಕೊಂಡಿದೆ. ಈಗ ಕರ್ನಾಟಕ ಈ ಕೇಸ್ ಗಳ ಹಾಟ್ ಸ್ಪಾಟ್ ಆಗಿ ಬದಲಾಗಿದ್ದು, ಡೆಲ್ಟಾ ಕ್ರಾನ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಇದುವರೆಗೂ ಯಾವುದೇ ಕಠಿಣ ನಿಯಮ ರೂಪಿಸಿಲ್ಲ. ಇನ್ನೊಂದೆಡೆ ವೈದ್ಯಕೀಯವಾಗಿ ಕೊರೋನಾ ಹಾಗೂ ಡೆಲ್ಟಾ,ಒಮೈಕ್ರಾನ್ ಗಿಂತ ಡೆಲ್ಟಾಕ್ರಾನ್ ಹೇಗೆ ಭಿನ್ನ ಎಂಬುದರ ಬಗ್ಗೆ ಈಗಾಗಲೇ ಸಂಶೋಧನೆಗಳು ಆರಂಭಗೊಂಡಿದ್ದು ಸದ್ಯದಲ್ಲೇ ಡೆಲ್ಟಾಕ್ರಾನ್ ಮತ್ತೆ ಜನಜೀವನ ಅಸ್ತವ್ಯಸ್ಥಗೊಳಿಸುವ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ : 12-18 ವಯಸ್ಸಿನವರಿಗೆ Novavax ತುರ್ತು ಬಳಕೆಗೆ ಅನುಮತಿ
ಇದನ್ನೂ ಓದಿ : TN Lockdown : ತಮಿಳುನಾಡಿನಲ್ಲಿ ಮತ್ತೆ ಕರ್ಫ್ಯೂ ?
Deltacron variant Cases Hike in Karnataka