KHATRA DANGEROUS : ಡೇಂಜರ್ ಸಿನಿಮಾದ ಮೂಲಕ ಲೆಸ್ಬಿಯನ್ಸ್ ಕತೆ ಹೇಳೋಕೆ ಬರ್ತಿದ್ದಾರೆ ವರ್ಮಾ

ಸದಾ ವಿವಾದಗಳಿಂದಲೇ ಸುದ್ದಿ ಮಾಡೋ ಬಾಲಿವುಡ್ ಹಿರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಸದ್ಯ ಓಟಿಟಿಗಾಗಿ ಹಾಟ್ ಹಾಟ್ ಸಿನಿಮಾ ನಿರ್ದೇಶಿಸೋದರಲ್ಲಿ ಬ್ಯುಸಿಯಾಗಿದ್ದಾರೆ.‌ ಹಾಟ್ ಹಾಟ್ ಟಾಫಿಕ್ ಗಳನ್ನು ಮತ್ತಷ್ಟು ಬೋಲ್ಡ್ ಆಗಿ ತೋರಿಸುವ ರಾಮ್ ಗೋಪಾಲ್ ವರ್ಮ ( RGV) ಈ ಭಾರಿ ಇಬ್ಬರೂ ಹುಡುಗಿಯರ ಸರಸ ಸಲ್ಲಾಪಕ್ಕೆ ಕ್ಯಾಮರಾ ಜೋಡಿಸಿದ್ದಾರೆ. ಹೌದು ಇದೇ ಮೊದಲ ಬಾರಿಗೆ ಲೆಸ್ಬಿಯನ್ ಸಂಗತಿಯನ್ನು (KHATRA DANGEROUS) ತೆರೆಗೆ ತರುತ್ತಿದ್ದಾರೆ ರಾಮ್ ಗೋಪಾಲ ವರ್ಮಾ.

ರಾಮ್ ಗೋಪಾಲ್ ವರ್ಮಾ ಓಟಿಟಿ ಗಾಗಿ ವಯಸ್ಕರು ನೋಡುವಂತ ಹಸಿಬಿಸಿ ದೃಶ್ಯಗಳ ಸಿನಿಮಾ ವನ್ನೇ ಆಯ್ಕೆಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಜಿ.ಎಸ್.ಟಿ, ನೆಕೆಡ್,‌ ಮೇರಿ ಬೇಟಿ ಸನ್ನಿ ಲಿಯೋನ್ ಬನನಾ ಚಾಹತಿ ಹೈ ಸೇರಿದಂತೆ ಹಲವು ವಯಸ್ಕರ ಸಿನಿಮಾದ ಮೂಲಕ ನೋಡುಗರ ಮೈ ಮನಕ್ಕೆ ಉತ್ತೇಜನ ತುಂಬಿದ ರಾಮ್ ಗೋಪಾಲ್ ವರ್ಮಾ ಈಗ ಹುಡುಗಿಯರ ಸರಸದ ಕತೆ ಹೇಳಲು ಮುಂದಾಗಿದ್ದಾರೆ.

ಡೇಂಜರ್ ಎಂದು ಹೆಸರಿಡಲಾದ ಈ ಸಿನಿಮಾದ ಎರಡು ಹಾಟ್ ಹಾಟ್ ಟ್ರೇಲರ್ ಗಳು ಈಗಾಗಲೇ ತೆರೆ ಕಂಡಿದ್ದು, ಸಿನಿಪ್ರಿಯರು ಈ ಹಸಿ ಬಿಸಿ ದೃಶ್ಯದ ಸಿನಿಮಾ ಟ್ರೇಲರ್ ನೋಡಿ ಸಿನಿಮಾ ಯಾವಾಗಪ್ಪ ರಿಲೀಸ್ ಆಗೋದು ಅಂತ ಕೇಳ್ತಿದ್ದಾರೆ. ರಾಮ್ ಗೋಪಾಲ್ ತಮ್ಮ ಸಿನಿಮಾಗಳ ಪ್ರದರ್ಶನಕ್ಕಾಗಿ ಸ್ವಂತ ಓಟಿಟಿ ನಿರ್ಮಿಸಿಕೊಂಡಿದ್ದಾರೆ. ಅದರಲ್ಲಿ ವಯಸ್ಕರ ಸಿನಿಮಾಗಳನ್ನೇ ಅಪ್ಲೋಡ್ ಮಾಡುತ್ತಾರೆ. ಇದಕ್ಕಾಗಿ ವರ್ಮಾ ಓಟಿಟಿ ಸಬ್ ಸ್ಕೈಬರ್ ಸಂಖ್ಯೆಯೂ ದೊಡ್ಡದಿದೆ. ಈಗ ಮಾಧ್ಯಮದಲ್ಲಿ ಡೇಂಜರ್ ಕೂಡ ತೆರೆ ಕಾಣಲಿದೆ.

ಇದನ್ನೂ ಓದಿ : Anita Bhat : ನಾನೇ ನೀನಗೀಗಾ ಎಂದ್ರು ನಟಿ ಅನಿತಾ ಭಟ್ : ಗಮನ ಸೆಳೆದಿದೆ ಇಂದಿರಾ ಹಾಡು

ಈ ಭಾರಿ ಸಲಿಂಗಿಗಳ ಕತೆ ಹೇಳಲು ಹೊರಟಿರೋ ವರ್ಮಾ ಇದಕ್ಕಾಗಿ ಇಬ್ಬರೂ ಯುವತಿಯರ ಕತೆ ಅಯ್ದು ಕೊಂಡಿದ್ದಾರೆ. ಇದೊಂದು ಕ್ರೈಂ ಹಾಗೂ ಆಕ್ಷ್ಯನ್ ಸಿನಿಮಾ ಕೂಡ ಆಗಿದ್ದು ಇದರೊಂದಿಗೆ ಸಲಿಂಗಿಗಳ ಪ್ರೇಮದ ಕತೆಯನ್ನು ಹೇಳಲಿದೆ. ಈ ಸಿನಿಮಾದಲ್ಲಿ ಅಪ್ಸರಾ ರಾಣಿ ಹಾಗೂ ನೈನಾ ಗಂಗೂಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇವರಿಬ್ಬರ ಹಸಿ ಬಿಸಿ ದೃಶ್ಯ ರೋಮ್ಯಾನ್ಸ್ ಪಡ್ಡೆಗಳನ್ನು ಬಡಿದೆಬ್ಬಿಸುವಂತಿದೆ.ಸದಾ ತಮ್ಮ ಸಿನಿಮಾದ ಹುಡುಗಿಯರ ಜೊತೆ ಪಾರ್ಟಿ ಮಾಡೋದು ಎಂಜಾಯ್ ಮಾಡೋದು ಸೇರಿದಂತೆ ಐಷಾರಾಮಿ ಹಾಗೂ ವಿವಾದಾತ್ಮಕ ವರ್ತನೆಗಳಿಂದಲೇ ಸುದ್ದಿಯಾಗಿ ಟ್ರೋಲ್‌ಹಾಗೂ ಟೀಕೆಗೆ ಗುರಿಯಾಗುತ್ತಿದ್ದ ರಾಮ್ ಗೋಪಾಲ್ ವರ್ಮಾ ಸದ್ಯ ಹಾಟ್ ಸಿನಿಮಾದ ಕಾರಣಕ್ಕೆ ಸದ್ದು ಮಾಡಿದ್ದಾರೆ.

ಇದನ್ನೂ ಓದಿ : Megha Gupta : ಮೈಮಾಟದಲ್ಲೇ ಮನಗೆದ್ದ ಮೇಘಾ ಗುಪ್ತಾ: ಇಲ್ಲಿದೆ ಹಾಟ್ ಪೋಟೋಶೂಟ್

(Ram Gopal Varma KHATRA DANGEROUS Trailer Release RGV Naina Apsara)

Comments are closed.