RRR ಸಿನಿಮಾ ಟಿಕೇಟ್ ಗೆ 500 ರೂಪಾಯಿ : ವಿತರಕರ ವಿರುದ್ಧ ಸಾರಾ ಗೋವಿಂದ್ ಗರಂ

ಚಿತ್ರಬ್ರಹ್ಮ ಅಂತನೇ ಕರೆಯಿಸಿಕೊಳ್ಳೋ ನಿರ್ದೇಶಕ ರಾಜಮೌಳಿ ಆರ್ ಆರ್ ಆರ್ ಮೂಲಕ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಇನ್ನೇನು ಸಿನಿಮಾ ರಿಲೀಸ್ ಗೆ ದಿನಗಣನೆ ನಡೆದಿದ್ದು, ಇತ್ತೀಚಿಗಷ್ಟೇ ಕರ್ನಾಟಕದಲ್ಲಿ ಫ್ರೀ ರಿಲೀಸ್ ಇವೆಂಟ್ ಕೂಡ ನಡೆಸಿ ಅಭಿಮಾನಿಗಳನ್ನು ಸೆಳೆದಿದ್ದಾರೆ. ಆದರೆ ಈಗ ಆರ್ ಆರ್ ಆರ್ (RRR ) ಸಿನಿಮಾ ವಿತರಕರ ನಿರ್ಧಾರದಿಂದ ಜನರ‌ ಕೆಂಗಣ್ಣಿಗೆ ಗುರಿಯಾಗಿದೆ.

ಹೌದು, ಕರ್ನಾಟಕದ ಚಿತ್ರಪ್ರೇಮಿಗಳ ಜೇಬಿಗೆ ಕತ್ತರಿ ಹಾಕಲು RRR ಸಿನಿಮಾ ಸಿದ್ಧವಾಗಿದೆ. ಮಾರ್ಚ್ 25 ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗ್ತಿರುವ RRR ಸಿನಿಮಾಗೆ ಕರ್ನಾಟಕದಲ್ಲಿ ಏಕಾಏಕಿ ಟಿಕೇಟ್ ರೇಟ್ ಈಗಾಗಲೇ ಮುಗಿಲು ಮುಟ್ಟಿದೆ. ಆಂಧ್ರ, ತೆಲಂಗಾಣದಲ್ಲಿ 100,120 ರೂಪಾಯಿ ಇರೋ ಟಿಕೇಟ್ ದರ ಕರ್ನಾಟಕದಲ್ಲಿ 400,500 ರೂಪಾಯಿಗೆ ಏರಿಕೆಯಾಗಿದೆ. ತೆಲುಗು ಸಿನಿಮಾವಾಗಿದ್ದರೂ ಕರ್ನಾಟಕದಲ್ಲಿ ಉತ್ತಮ ಪ್ರದರ್ಶನ ಕಾಣುತ್ತದೆ. ಇದೇ ಕಾರಣಕ್ಕೆ ತೆಲುಗು ಚಿತ್ರಕ್ಕೆ ಕರ್ನಾಟಕದಲ್ಲಿ ಟಿಕೆಟ್ ದರ ಹೆಚ್ಚಿಸಿದ್ದಾರೆ ವಿತರಕರು.

RRR ಚಿತ್ರವನ್ನು ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ ವಿತರಣೆ ಮಾಡ್ತಿದೆ. ಈಗ ಕೆವಿಎನ್ ಪ್ರೊಡಕ್ಷನ್ ಕರ್ನಾಟಕದಲ್ಲಿ ಟಿಕೆಟ್ ದರ ಹೆಚ್ಚಿಸಿರುವುದಕ್ಕೆ ಕನ್ನಡಪರ ಹೋರಾಟ ಗಾರರು ಹಾಗೂ ಫಿಲ್ಮ್ ಚೆಂಬರ್ ನ ಸಾರಾ ಗೋವಿಂದ್ ಹಾಗೂ ಎನ್ ಎಮ್ ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್ ಹಾಗೂ ಕಾರ್ಯದರ್ಶಿ ಎನ್ ಸುರೇಶ್ ಕರ್ನಾಟಕ  ಪರಭಾಷ ಚಿತ್ರಗಳಿಗೆ ಗೋಮಾಳವಾಗಿ ಬಿಟ್ಟಿದೆ. ನಮ್ಮ ವಿತರಕರು ಪರಭಾಷಾ ಚಿತ್ರಗಳಿಗೆ ಮನಸೋಇಚ್ಛೆ ಹಣ ಕೊಟ್ಟು ತರುತ್ತಾರೆ. ಎರಡೇ ದಿನಗಳಲ್ಲಿ ಅದನ್ನ ರಿಕವರಿ ಮಾಡೊ ಉದ್ದೇಶ ದಿಂದ ಹಗಲು ದರೋಡೆ ಮಾಡ್ತಾರೆ ಎಂದು ಆರೋಪಿಸಿದ್ದಾರೆ.

ಮಾತ್ರವಲ್ಲ ಪರಭಾಷ ಚಿತ್ರಗಳು ಕನ್ನಡ ಚಿತ್ರರಂಗದ ಮೇಲೆ ದಬ್ಬಾಳಿಕೆ ಮಾಡುತ್ತಿವೆ. ಸರ್ಕಾರ ಈ ಕೂಡಲೆ ಟಿಕೆಟ್ ದರಗಳ ಹೆಚ್ಚಳಕ್ಕೆ ಬ್ರೇಕ್ ಹಾಕಬೇಕು 150,200, ಟಿಕೆಟ್ ದರ ನಿಗದಿಮಾಡಿ ಅದೇಶ ಹೊರಡಿಸ ಬೇಕು ಎಂದು  ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಹಿಂದೆಯೂ ಪರಭಾಷಾ ಚಿತ್ರಗಳಿಗೆ ಹೀಗೆ ಟಿಕೇಟ್ ದರ ಏರಿಸಲಾಗಿತ್ತು. ಈಗ ಆರ್ ಆರ್ ಆರ್ ಸಿನಿಮಾವೂ ಇದೇ ಸಿಸ್ಟಮ್ ಅನುಸರಿಸಿ ಕನ್ನಡ‌ಚಿತ್ರರಂಗದ ಹಿರಿಯರ ಕೆಂಗಣ್ಣಿಗೆ ಗುರಿಯಾಗಿದೆ.

ಇದನ್ನೂ ಓದಿ : Radhika Pandit : ಎದೆ ಹಾಲನ್ನು ದಾನ ಮಾಡಿ : ನಟಿ ರಾಧಿಕಾ ಪಂಡಿತ್ ಮನವಿ

ಇದನ್ನೂ ಓದಿ : ಮಲ್ಟಿಪ್ಲೆಕ್ಸ್ ನಿಂದ ಜೇಮ್ಸ್ ಕಿಕ್ ಔಟ್ ಗೆ ಒತ್ತಡ : ಬಿಜೆಪಿ ಶಾಸಕರ ವಿರುದ್ಧ ನಿರ್ಮಾಪಕರ ಅಸಮಧಾನ

(500 Rs for RRR Cinema Ticket)

Comments are closed.