ಚಿಕನ್ ತಿಂದ್ರೆ ಬರುತ್ತಾ ಬ್ಲ್ಯಾಕ್ ಫಂಗಸ್ ..!!! ಇದು ನಿಜನಾ..? ತಜ್ಞರು ಹೇಳುವುದೇನು ಗೊತ್ತಾ..?

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಬೆನ್ನಲ್ಲೇ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಅಬ್ಬರ ಹೆಚ್ಚಿದೆ. ಈ ನಡುವಲ್ಲೇ ಚಿಕನ್ ತಿಂದ್ರೆ ಬ್ಲ್ಯಾಕ್ ಫಂಗಸ್ ಹರಡುತ್ತೆ ಅನ್ನೋ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದಾಡುತ್ತಿದೆ. ನಿಜಕ್ಕೂ ಚಿಕನ್ ತಿಂದ್ರೆ ಬ್ಲ್ಯಾಕ್ ಫಂಗಸ್ ಬರುತ್ತಾ. ತಜ್ಞರು ಹೇಳುವುದೇನು ಗೊತ್ತಾ ..?

ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದ್ದಂತೆಯೇ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿತ್ತು. ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲೇ ಹೆಚ್ಚಾಗಿ ಕಪ್ಪು ಶಿಲೀಂದ್ರ ಹಾವಳಿಯನ್ನುಂಟು ಮಾಡುತ್ತಿದೆ. ಬ್ಲ್ಯಾಕ್ ಫಂಗಸ್ ಸಾಮಾನ್ಯವಾಗಿ ಕಣ್ಣಿನ ಮೇಲೆ ಹೆಚ್ಚು ದಾಳಿಯನ್ನು ಮಾಡುತ್ತದೆ. ಸಲಕರಣೆಗಳನ್ನು ಸ್ವಚ್ಚ ಮಾಡದೆ ಬಳಸಿದಲ್ಲಿ. ಅಥವಾ ಮಾಸ್ಕ್ ಗಳನ್ನು ತುಂಬಾ ಸಮಯದ ವರೆಗೆ ಉಪಯೋಗಿಸಿದಲ್ಲಿ ಈ ಸಮಸ್ಯೆ ಕಂಡು ಬರುತ್ತಿದೆ. ತಮ್ಮ ದೇಹದಲ್ಲಿ ಸೋಂಕು ಕಾಣಿಸಿಕೊಂಡ ನಂತರ ಚಿಕಿತ್ಸೆಯನ್ನು ಪಡೆಯದಿದ್ರೆ ಅದು ಸೋಂಕು ಮೆದುಳಿನ ಮೇಲೆ ದಾಳಿಯನ್ನು ಮಾಡುತ್ತದೆ. ಸೋಂಕು ಕಾಣಿಸಿಕೊಂಡ ಕೂಡಲೇ ವೈದ್ಯರ ಸಲಹೆ ಪಡೆಯುವುದು ಹೆಚ್ಚು ಸೂಕ್ತ. ಮಧುಮೇಹ ಇರುವವರನ್ನು ಬ್ಲ್ಯಾಕ್ ಫಂಗಸ್ ಹೆಚ್ಚು ಅಪಾಯವನ್ನು ತರುತ್ತದೆ. ಅಪಾಯಕಾರಿ ಯಾಗಿರುವ ಬ್ಲ್ಯಾಕ್ ಫಂಗಸ್ ವೈದ್ಯರ ಚಿಕಿತ್ಸೆಯಿಂದ ಗುಣಮುಖವಾಗಲಿದೆ.

https://kannada.newsnext.live/karnataka-black-fungus-case-hike-39-death-minister-sudhakar/

ಲಾಕ್ ಡೌನ್ ಹಿನ್ನೆಲೆಯಲ್ಲೀಗ ಜನರು ಮನೆಯಲ್ಲಿಯೇ ಇದ್ದಾರೆ. ಚಿಕನ್ ಖಾದ್ಯಗಳನ್ನು ತಯಾರಿಸಿ ಸವಿಯುತ್ತಿದ್ದಾರೆ. ಕೊರೊನಾ ವೈರಸ್ ಆರಂಭದ ಕಾಲದಲ್ಲಿಯೂ ಚಿಕನ್ ನಿಂದ ಕೊರೊನಾ ಸೋಂಕು ಹರಡುತ್ತೇ ಅನ್ನೋ ಸುದ್ದಿ ಎಲ್ಲೆಡೆ ಹಬ್ಬಿತ್ತು. ಆದ್ರೀಗ ಬ್ಲ್ಯಾಕ್ ಫಂಗಸ್ ಹೆಚ್ಚುತ್ತಿದ್ದಂತೆಯೇ ಇಂತಹ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.

https://kannada.newsnext.live/good-news-bpl-apl-card-holder/

ಆದ್ರೆ ತಜ್ಞರು ಹೇಳುವ ಪ್ರಕಾರ ಬ್ಲ್ಯಾಕ್ ಫಂಗಸ್ ಯಾವುದೇ ಕಾರಣಕ್ಕೂ ಚಿಕನ್ ಸೇವನೆಯಿಂದ ಬರೋದಿಲ್ಲ. ಅಲ್ಲದೇ ಸೋಂಕು ಯಾವುದೇ ಕಾರಣಕ್ಕೂ ಪ್ರಾಣಿ, ಪಕ್ಷಗಳಿಂದ ಮನುಷ್ಯರಿಗೆ ಹರಡುವ ಸಾಧ್ಯತೆಯೇ ಇಲ್ಲ. ಇದೊಂದು ಸುಳ್ಳು ಸುದ್ದಿ ಅನ್ನೋದನ್ನು ತಜ್ಞರು ಖಚಿತ ಪಡಿಸಿದ್ದಾರೆ.

Comments are closed.