ಎರಡು ಡೋಸ್ ಲಸಿಕೆ ಪಡೆದಿದ್ದ ಖ್ಯಾತ ವೈದ್ಯ ಕೊರೊನಾ ಮಹಾಮಾರಿಗೆ ಬಲಿ

ನವದೆಹಲಿ : ಕೊರೊನಾ ಆರ್ಭಟ ಹೆಚ್ಚುತ್ತಿದೆ. ಈ ನಡುವಲ್ಲೇ ಎರಡು ಡೋಸ್ ಕೊರೊನಾ ಲಸಿಕೆ ಪಡೆದಿದ್ದ ಖ್ಯಾತ ಸರ್ಜನ್ ಡಾ. ಅನಿಲ್ ಕುಮಾರ್ ರಾವತ್ ಕೊರೊನಾ ಸೋಂಕಿನಿಂದ ಮೃತಪಟ್ಟಿ ದ್ದಾರೆ.

ಕೊರೊನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸರ್ಜನ್ ಅನಿಲ್ ಕುಮಾರ್ ಅವರನ್ನು ದೆಹಲಿಯ ಸರೋಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿ ದ್ದಾರೆ. ನಾನು ಎರಡೂ ಡೋಸ್ ಲಸಿಕೆ ಪಡೆದಿದ್ದು, ಶೀಘ್ರ ಗುಣಮುಖನಾಗಿ ಬರುತ್ತೇನೆ ಎಂದು ವೈದ್ಯ ಅನಿಲ್ ಕುಮಾರ್ ಅವರು ಹೇಳಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

ಮಾರ್ಚ್‌ನಲ್ಲಿ ಅನಿಲ್ ಕುಮಾರ್ ಅವರು ಎರಡನೆಯ ಕೊರೊನಾ ಲಸಿಕೆ ಪಡೆದಿದ್ದರು. ಕೊರೊನಾ ಲಸಿಕೆಯ ಎರಡು ಡೋಸ್ ಹಾಕಿಸಿ ಕೊಂಡರೆ ಸೋಂಕು ತಗಲುವ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಲಾಗುತ್ತಿದೆ. ಈ ಹೊತ್ತಲೇ ವೈದ್ಯರ ಸಾವು ಇದೀಗ ಆತಂಕ ವನ್ನು ಮೂಡಿಸಿದೆ.

Comments are closed.