Corona Death : ಕೊರೋನಾದಿಂದ ಕಂಗೆಟ್ಟವರಿಗೆ ಸಮಾಧಾನದ ಸುದ್ದಿ: ಏಪ್ರಿಲ್‌ನಲ್ಲಿ ದಾಖಲಾಯ್ತು ಅತಿ ಕಡಿಮೆ ಸಾವಿನ ಸಂಖ್ಯೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ನಾಲ್ಕನೇ ಅಲೆಯ ಆತಂಕ ಎದುರಾಗಿದೆ. ಹೀಗಾಗಿ ಈಗಾಗಲೇ ಕೊರೋ‌‌ನಾ ನಾಲ್ಕನೇ ಅಲೆಯ ಎದುರಿಸುವ ನಿಟ್ಟಿನಲ್ಲಿ ಸೂಕ್ತ‌ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ. ಈ ಮಧ್ಯೆ ರಾಜ್ಯದಲ್ಲಿ ನಾಲ್ಕನೇ ಅಲೆಯ ಆತಂಕದಲ್ಲಿದ್ದ ಜನರಿಗೆ ಕೊಂಚ ಸಮಾಧಾನದ ಸುದ್ದಿ ಆರೋಗ್ಯ ಇಲಾಖೆಯಿಂದ ಹೊರಬಿದ್ದಿದ್ದು, ಕಳೆದ ತಿಂಗಳಿನಲ್ಲೇ ಕೊರೋನಾದಿಂದ ಅತಿ ಕಡಿಮೆ ಸಾವು (Corona Death) ದಾಖಲಾಗಿದೆ.

ಏಪ್ರಿಲ್ 2022 ರಲ್ಲಿ ಕೊವೀಡ್ (Corona) ನಿಂದ 5 ಜನರು ಸಾವನ್ನಪ್ಪಿದ್ದಾರೆ. ಇದು ಕಳೆದ ಮೂರು ಅಲೆಯಲ್ಲಿ ಕೊರೋನಾದ ಸಾವನ್ನಪ್ಪಿದವರ ಪ್ರಮಾಣಕ್ಕೆ ಹೋಲಿಸಿದರೇ ಅತಿ ಕಡಿಮೆ ಸಾವಿನ ಸಂಖ್ಯೆಯಾಗಿದೆ. ಈ 2 ವರ್ಷದಲ್ಲೇ ಲಸಿಕೆ, ಮುನ್ನೆಚ್ಚರಿಕೆ ಕ್ರಮಗಳಿಂದ ಸಾವಿನ ಸಂಖ್ಯೆ ಇಳಿಕೆಯಾಗುತ್ತಿದೆ ಎನ್ನಲಾಗಿತ್ತು. ಆದರೆ ಈ ಹೇಳಿಕೆಗೆ ಬಲಬಂದಿರಲಿಲ್ಲ. ಈಗ ದಾಖಲೆಗಳು ಈ ಮಾತಿಗೆ ಪುಷ್ಠಿ ಒದಗಿಸಿದ್ದು, ಮುನ್ನೆಚ್ಚರಿಕೆ ಕ್ರಮ ಹಾಗೂ ಲಸಿಕೆಯಿಂದಾಗಿ ಸಾವಿನ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಕೋವಿಡ್‌ಗೆ 15523 ಬಲಿಯಾಗಿದ್ದರು. ಈ ವರ್ಷ ಏಪ್ರಿಲ್ ನಲ್ಲಿ ಸಾವಿನ ಸಂಖ್ಯೆ ಕೇವಲ 5 ಆಗಿದ್ದು, ಕೊರೋನಾದಿಂದ ಕಂಗೆಟ್ಟ ಜನರಿಗೆ ಈ ವಿಚಾರ‌ ಸಮಾಧಾನ ತಂದಿದೆ. ಇನ್ನೂ ಕಳೆದ ನಾಲ್ಕು ತಿಂಗಳಿನಲ್ಲಿ ಕೊರೋನಾ ಪಾಸಿಟಿವ್ ಹಾಗೂ ಸಾವಿನ ಸಂಖ್ಯೆ ಎಷ್ಟಿದೆ ಅನ್ನೋದನ್ನು ನೋಡೋದಾದರೇ,

ತಿಂಗಳು – ಪಾಸಿಟಿವ್ – ಸಾವು
ಜನವರಿ – 8,02,130 – 663
ಫೆಬ್ರವರಿ – 1,31,596 – 952
ಮಾರ್ಚ್ – 4,451 – 104
ಏಪ್ರಿಲ್ – 2,108 – 5

ರಾಜ್ಯದಲ್ಲಿ ಈವರೆಗೆ ಕೋವಿಡ್ ಗೆ 40,059 ಬಲಿಯಾಗಿದ್ದು, ಈ ವರ್ಷದ ಏಪ್ರಿಲ್ 30 ರವರೆಗೆ ರಾಜ್ಯದಲ್ಲಿ ಒಟ್ಟಾರೆ 40,059 ಮಂದಿ ಸಾವು ಕಂಡಿದ್ದಾರೆ. ಅದರಲ್ಲಿ ಬೆಂಗಳೂರು ನಗರದಲ್ಲಿ ಕೋರೊನಾಗೆ 16,962 ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹಾಗೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿದ್ದರೂ ರಾಜ್ಯ ಸರ್ಕಾರ ನಾಲ್ಕನೇ ಅಲೆಯನ್ನು ಎದುರಿಸಲು ಅಗತ್ಯ ಸಿದ್ಧತೆ ‌ಮಾಡಿಕೊಂಡಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ , ಆಕ್ಸಿಜನ್ ಸೇರಿದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಿಕೊಂಡಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಏರುತ್ತಲೇ ಇದೆ ತಾಪಮಾನ : ಶಾಲಾರಂಭ ಮುಂದೂಡಿಕೆ ಸಾಧ್ಯತೆ

ಇದನ್ನೂ ಓದಿ :  ಭೋವಿ ಅಭಿವೃದ್ದಿ ನಿಗಮದಲ್ಲಿ ಭ್ರಷ್ಟಾಚಾರ : ನಿರ್ದೇಶಕರ ವಿರುದ್ದ ಎಫ್‌ಐಆರ್‌ ದಾಖಲು

Good News Corona Death Rate decrease in April

Comments are closed.