Karnataka Bhovi Development Corporation : ಭೋವಿ ಅಭಿವೃದ್ದಿ ನಿಗಮದಲ್ಲಿ ಭ್ರಷ್ಟಾಚಾರ : ನಿರ್ದೇಶಕರ ವಿರುದ್ದ ಎಫ್‌ಐಆರ್‌ ದಾಖಲು

ಬೆಂಗಳೂರು : ಭೋವಿ ಸಮಾಜದ ಅಭಿವೃದ್ಧಿಗೆ ಸ್ಥಾಪನೆಗೊಂಡ ಭೋವಿ ಅಭಿವೃದ್ಧಿ ನಿಗಮದಲ್ಲಿ (Karnataka Bhovi Development Corporation) ಭ್ರಷ್ಟಾಚಾರ ಹಾಗೂ ವಂಚನೆ ಸದ್ದು ಮಾಡುತ್ತಿದ್ದು, ಪೋರ್ಜರಿ ಸಹಿ ಮಾಡಿ ಸರ್ಕಾರಿ ಹಣ ಮಂಜೂರಾತಿಗೆ ಅನುಮತಿ ಪಡೆಯುವ ಪ್ರಯತ್ನ ನಡೆದಿದೆ ಎಂಬ ಅರೋಪ ಕೇಳಿ ಬಂದಿದೆ. ಪೊರ್ಜರಿ ಸಹಿ ಮಾಡಿ ಸರ್ಕಾರಿ ಹಣ ಮಂಜೂರಾತಿಗೆ ಯತ್ನ ಆರೋಪದಡಿಯಲ್ಲಿ ಭೋವಿ ಅಭಿವೃದ್ಧಿ ನಿಗಮ ನಿರ್ದೇಶಕ ರವಿಕುಮಾರ್ ವಿರುದ್ದ FIR ದಾಖಲಾಗಿದೆ.

ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ ಹಾಗೂ ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪರ ಪೊರ್ಜರಿ ಸಹಿ ಮಾಡಿದ್ದ ರವಿಕುಮಾರ್ ಸರ್ಕಾರದಿಂದ ಮಂಜೂರಾದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂಬ ಆರೋಪವಿದೆ. ಭೋವಿ ಅಭಿವೃದ್ಧಿ ನಿಗಮದ ಇಬ್ಬರು ಹಿರಿಯ ಕೆ.ಎ.ಎಸ್ ಅಧಿಕಾರಿಗಳ ಪೊರ್ಜರಿ ಸಹಿ ಮಾಡಿ 2.35 ಕೋಟಿ ಲೂಟಿ ಮಾಡಲು ಪ್ಲಾನ್ ಮಾಡಿದ್ದು, ಈ ವಿಚಾರ‌ ಬಹಿರಂಗಗೊಂಡ ಹಿನ್ನೆಲೆಯಲ್ಲಿ ರವಿಕುಮಾರ್ ವಿರುದ್ಧ ‌ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಐಪಿಸಿ 420 ಅಡಿಯಲ್ಲಿ ಕೇಸ್ ದಾಖಲಾಗಿದೆ.

ಭೋವಿ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ ಹಾಗೂ ಪ್ರಧಾನ ವ್ಯವಸ್ಥಾಪಕ ಡಾ.ಬಿ.ಕೆ. ನಾಗರಾಜಪ್ಪ ನೀಡಿದ್ದು ರವಿಕುಮಾರ್ ವಿರುದ್ಧ ಸಹಿಯನ್ನು ದುರುಪಯೋಗದ ಆರೋಪ ಮಾಡಿದ್ದಾರೆ. ಲೀಲಾವತಿ ಹಾಗೂ ಪ್ರಧಾನ ವ್ಯವಸ್ಥಾಪಕರ ದೂರು ಆಧರಿಸಿ, ಖಾಕಿ ಪಡೆ ಎಫ್ಐಆರ್ ದಾಖಲಿಸಿಕೊಂಡಿದೆ.

ಇನ್ನೂ ತಮ್ಮ ವಿರುದ್ಧ ಎಫ್.ಐ.ಆರ್. ರಿಜಿಸ್ಟರ್ ಆಗ್ತಿದ್ದಂತೆ ಖಾಕಿ ಕೈಗೆ ಸಿಗದೇ ಎಸ್ಕೇಪ್ ಆಗಿರುವ ರವಿಕುಮಾರ್ ತಲೆಮರೆಸಿಕೊಂಡಿದ್ದಾರೆ. ಅಲ್ಲದೇ ತಮ್ಮನ್ನು ಅಕ್ರಮದ ಬಗ್ಗೆ ಪ್ರಶ್ನಿಸಿದ ಕೆ.ಎ.ಎಸ್ ಅಧಿಕಾರಿಗಳಿಗೆ ಧಮ್ಕಿ‌ ಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೇ ತಮ್ಮ ವಿರುದ್ಧ ದೂರು ನೀಡಿದ ಹಿರಿಯ ಕೆ.ಎ.ಎಸ್ ಅಧಿಕಾರಿ ಹಾಗೂ ನಿಗಮದ ಎಂ.ಡಿ ಲೀಲಾವತಿ ರಿಗೆ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಇನ್ನು ನಿಗಮದ ಪ್ರಧಾನ ವ್ಯವಸ್ಥಾಪಕ ಡಾ.ಬಿ.ಕೆ ನಾಗರಾಜಪ್ಪರಿಗೆ ವಾಟ್ಸಾಫ್ ವಾಯ್ಸ್ ಮೆಸೇಜ್ ನಲ್ಲಿ ಧಮ್ಕಿ ಹಾಕಿರುವ ರವಿಕುಮಾರ್, ತಮ್ಮ ವಿರುದ್ಧ ದೂರು ನೀಡಿದರೇ ಕಾನೂನು ಕ್ರಮಕ್ಕೆ ಮುಂದಾದರೇ ಪರಿಣಾಮ ಒಳ್ಳೆಯದಲ್ಲ ಎಂದೂ ಹೆದರಿಸಿದ್ದಾರಂತೆ. ಸದ್ಯ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ IPC 420 506 504 509 380 465 468 471 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : Summer Holiday : ರಾಜ್ಯದಲ್ಲಿ ಏರುತ್ತಲೇ ಇದೆ ತಾಪಮಾನ : ಶಾಲಾರಂಭ ಮುಂದೂಡಿಕೆ ಸಾಧ್ಯತೆ

ಇದನ್ನೂ ಓದಿ : Cyclone warning : ಚಂಡ ಮಾರುತ ಎಫೆಕ್ಟ್‌ : ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ 5 ದಿನ ಬಾರೀ ಮಳೆ

Karnataka Bhovi Development Corporation Ravi Kumar FIR Against Corruption

Comments are closed.