ಜಿಂಬಾಬ್ವೆಯಿಂದ ಗುಜರಾತ್ನ ( Gujarat ) ಜಾಮ್ನಗರಕ್ಕೆ ಮರಳಿದ್ದ ವೃದ್ಧನಲ್ಲಿ ಕೊರೊನಾ ಓಮಿಕ್ರಾನ್(OMICRON ) ರೂಪಾಂತರಿ ಕಾಣಿಸಿಕೊಂಡಿದೆ ಎಂದು ಗುಜರಾತ್ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಈ ಮೂಲಕ ದೇಶದಲ್ಲಿ ಒಟ್ಟು ಮೂರು ಓಮಿಕ್ರಾನ್ (omicron 3) ಪ್ರಕರಣ ಪತ್ತೆಯಾದಂತಾಗಿದೆ.
72 ವರ್ಷದ ಜಾಮ್ ನಗರದ ನಿವಾಸಿಯ ಪರೀಕ್ಷೆಯ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಗುರುವಾರದಂದು 72 ವರ್ಷದ ಈ ವ್ಯಕ್ತಿಯು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಪ್ರಯೋಗಾಲಯದ ಪರೀಕ್ಷಾ ವರದಿಯಲ್ಲಿ ಇವರಿಗೆ ಓಮಿಕ್ರಾನ್ ರೂಪಾಂತರಿ ತಗುಲಿರುವುದು ಧೃಡಪಟ್ಟಿದೆ ಎಂದು ಗುಜರಾತ್ ಆರೋಗ್ಯ ಸಚಿವ ಜೈಪ್ರಕಾಶ್ ಶಿವ್ರ್ಹಾರೆ ಅಧಿಕೃತ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ 46 ವರ್ಷದ ಸಂಪೂರ್ಣ ಲಸಿಕೆಯನ್ನು ಸ್ವೀಕರಿಸಿದ ಹಾಗೂ ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲದ ವೈದ್ಯರೊಬ್ಬರಿಗೆ ಓಮಿಕ್ರಾನ್ ಸೋಂಕು ತಗುಲಿತ್ತು. ಇದರ ಜೊತೆಯಲ್ಲಿ ಬೆಂಗಳೂರಿಗೆ ಕೊರೊನಾ ನೆಗೆಟಿವ್ ವರದಿಯೊಂದಿಗೆ ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದ 66 ವರ್ಷದ ವೃದ್ಧನಲ್ಲಿಯೂ ಓಮಿಕ್ರಾನ್ ರೂಪಾಂತರಿ ಇರೋದು ದೃಢಪಟ್ಟಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಈಗಾಗಲೇ ಓಮಿಕ್ರಾನ್ ಕುರಿತಂತೆ ಸಾಕಷ್ಟು ಎಚ್ಚರಿಕೆಯನ್ನು ನೀಡಿದೆ.ಇದು ಡೆಲ್ಟಾ ರೂಪಾಂತರಿಗಿಂತಲೂ ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಆರೋಗ್ಯದ ಮೇಲೆ ಇನ್ನೂ ಹೆಚ್ಚಿನ ದುಷ್ಪರಿಣಾಮ ಬೀರಬಲ್ಲುದು ಎನ್ನಲಾಗಿದೆ.
ಇದನ್ನು ಓದಿ :Omicron New Guidelines : ಮದುವೆಗೆ ನಿರ್ಬಂಧ, ಪೋಷಕರು 2 ವ್ಯಾಕ್ಸಿನ್ ಪಡೆದಿದ್ರೆ ಮಕ್ಕಳಿಗೆ ಶಾಲೆಗೆ ಪ್ರವೇಶ
ಇದನ್ನು ಓದಿ : Omicron Meeting : ಓಮಿಕ್ರಾನ್ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಪ್ರಕಟ
Omicron – Infected Man Returned To Gujarat From Zimbabwe, India’s 3rd Case