Madhagaja Movie Review :ಚಿತ್ರಮಂದಿರಗಳಲ್ಲಿ ಘೀಳಿಟ್ಟ ‘ಮದಗಜ’ : ಹೇಗಿತ್ತು ಗೊತ್ತಾ ಮೊದಲ ದಿನದ ಬಾಕ್ಸಾಫೀಸ್​ ಕಲೆಕ್ಷನ್​..?

ಸ್ಯಾಂಡಲ್​​ವುಡ್​​ ರೋರಿಂಗ್​ ಸ್ಟಾರ್​​ ಶ್ರೀಮುರುಳಿ ಮುಖ್ಯಭೂಮಿಕೆಯ ಸಿನಿಮಾ ಮದಗಜ(Madhagaja Movie Review ) ರಿಲೀಸ್​ ಮೊದಲ ದಿನವೇ ಬಾಕ್ಸಾಫೀಸಿನಲ್ಲಿ ಗಲ್ಲಾಪೆಟ್ಟಿಗೆ ಸದ್ದು ಮಾಡಿದೆ. ವರ್ಷದ ಕೊನೆಯಲ್ಲಿ ರಿಲೀಸ್​​ ಆಗಿರುವ ಈ ಬಿಗ್​ ಬಜೆಟ್​ ಸಿನಿಮಾವು ನಿನ್ನೆ ರಾಜ್ಯದ 800 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಮೂಲಗಳ ಪ್ರಕಾರ ಈ ಸಿನಿಮಾ ತೆರೆ ಕಂಡ ಮೊದಲ ದಿನವೇ ಕೋಟಿ ಕೋಟಿ ಬಾಚಿದೆ ಎನ್ನಲಾಗಿದೆ.

ಆ್ಯಕ್ಷನ್​ ಸೀನ್​ ಹಾಗೂ ತಾಯಿ ಸೆಂಟಿಮೆಂಟ್​ಗಳೆರಡರಲ್ಲಿಯೂ ಶ್ರೀಮುರುಳಿ ಅಮೋಘ ಪ್ರದರ್ಶನ ನೀಡಿದ್ದಾರೆ ಎನ್ನಲಾಗಿದೆ. ಸಿನಿಮಾದಲ್ಲಿ ಮುರುಳಿಗೆ ಜೋಡಿಯಾಗಿ ಕಾಣಿಸಿಕೊಂಡಿರುವ ನಟಿ ಆಶಿಕಾ ರಂಗನಾಥ್​ ಪಕ್ಕಾ ಹಳ್ಳಿ ಹುಡುಗಿ ಸ್ಟೈಲ್​ನಲ್ಲಿ ಮಿಂಚಿದ್ದಾರೆ.

ಮೂಲಗಳ ಪ್ರಕಾರ ಮದಗಜ ಸಿನಿಮಾ ಮೊದಲ ದಿನದ ಪ್ರದರ್ಶನದಲ್ಲಿಯೇ 7.5 ಕೋಟಿ ರೂಪಾಯಿ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ. ಇಂದು ಹಾಗೂ ನಾಳೆ ಸಿನಿಮಾಗಳಲ್ಲಿ ಪ್ರೇಕ್ಷಕರ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಸಿನಿ ತಂಡದ ಲೆಕ್ಕಾಚಾರವಾಗಿದೆ.

ಈ ಸಿನಿಮಾ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಹೈದರಾಬಾದ್​ ಹಾಗೂ ವಾರಣಾಸಿಯಲ್ಲಿಯೂ ತೆರೆ ಕಂಡಿದೆ. ಅಲ್ಲದೇ ಮುಂದಿನ ವಾರದಲ್ಲಿ ತೆಲಗು ಹಾಗೂ ತಮಿಳು ಭಾಷೆಯಲ್ಲಿಯೂ ಸಿನಿಮಾ ಪ್ರದರ್ಶನ ಕಾಣಲಿದೆ. ಹಿಂದಿ ಭಾಷೆಯ ರಿಮೇಕ್​ಗೂ ಈ ಸಿನಿಮಾ ಸಜ್ಜಾಗುತ್ತಿದೆ ಎಂದು ಚಿತ್ರತಂಡ ಹೇಳಿದೆ.

ಎಸ್​. ಮಹೇಶ್​ ಕುಮಾರ್​ ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದರೆ ರಾಬರ್ಟ್​ ಸಿನಿಮಾ ಖ್ಯಾತಿಯ ಉಮಾಪತಿ ಬಂಡವಾಳ ಹೂಡಿದ್ದಾರೆ. ಮುಂದಿನ ವಾರದಲ್ಲಿ ಈ ಸಿನಿಮಾ ವಿದೇಶಗಳಲ್ಲೂ ತೆರೆ ಕಾಣಲಿದ್ದು ಚಿತ್ರದ ಕಲೆಕ್ಷನ್​ ಇನ್ನಷ್ಟು ಹೆಚ್ಚಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನು ಓದಿ : Amitabh Bachchan : 1000ನೇ ಕಂತು ಪೂರೈಸಿದ ಕೌನ್​ ಬನೇಗಾ ಕರೋಡ್​ಪತಿ : ಕೆಬಿಸಿ ಆಯ್ಕೆ ಮಾಡಿಕೊಂಡಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಅಮಿತಾಬ್​ ಬಚ್ಚನ್​

ಇದನ್ನು ಓದಿ : Actor Shivaram: ಸ್ಯಾಂಡಲ್‌ವುಡ್‌ ಹಿರಿಯ ನಟ ಶಿವರಾಂ ವಿಧಿವಶ

Madhagaja Movie Review, first day box office collection

Comments are closed.