H3N2 ಸೋಂಕಿಗೆ ಹಾಸನದಲ್ಲಿ ಮೊದಲ ಬಲಿ

ಹಾಸನ: (H3N2 Death) ರಾಜ್ಯದಲ್ಲಿ ಹವಾಮಾನ ವೈಪರಿತ್ಯ ಹೆಚ್ಚಾಗುತ್ತಲೇ H3N2 ಸೋಂಕಿನ ಭೀತಿ ಎದುರಾಗಿದೆ. ರಾಜ್ಯದಲ್ಲಿ ವ್ಯಾಪಕವಾದ H3N2 ರೋಗಲಕ್ಷಣಗಳಾದ ಕೆಮ್ಮು, ಶೀತ, ಜ್ವರ ವ್ಯಾಪಕವಾಗಿ ಹರಡುತ್ತಿದ್ದು, ಇದೀಗ ಹಾಸನದಲ್ಲಿ H3N2 ಸೋಂಕಿಗೆ ಮೊದಲ ಸಾವಾಗಿದೆ. H3N2 ಸೋಂಕಿನಿಂದ ಬಳಲುತ್ತಿದ್ದ ಹಾಸನ ಮೂಲದ ವೃದ್ಧರೊಬ್ಬರು ಮೃತಪಟ್ಟಿದ್ದು, ಈ ಬಗ್ಗೆ ಆರೋಗ್ಯ ಇಲಾಖೆಯ ಆಯುಕ್ತರು ಮಾಹಿತಿ ಹಂಚಿಕೊಂಡಿದ್ದಾರೆ.

ಈಗಾಗಲೇ ರಾಜ್ಯದಲ್ಲಿ H3N2 ವೈರಸ್‌ ವ್ಯಾಪಕವಾಗಿ ಹರಡುತ್ತಿದ್ದು, ಸುಮಾರು ಐವತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ಸೋಂಕು ಭೀತಿಯುಂಟುಮಾಡಿದ್ದು, ತನ್ನ ಮೊದಲ ಬಲಿಯನ್ನು ಪಡೆದುಕೊಂಡಿದೆ.

ಜ್ವರ, ಗಂಟಲುನೋವು, ಕೆಮ್ಮಿನಿಂದ ಬಳಲುತ್ತಿದ್ದ ಹಾಸನದ ಆಲೂರು ಮೂಲದ ವೃದ್ದರೋರ್ವರು ಮೃತಪಟ್ಟಿದ್ದು ಈ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮೃತ ವ್ಯಕ್ತಿಯ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಅನಾರೋಗ್ಯ ಪೀಡಿತರನ್ನು ವೈದ್ಯರ ತಂಡ ತಪಾಸಣೆಗೊಳಪಡಿಸುತ್ತಿದ್ದು, ಎಲ್ಲರ ಗಂಟಲು ದೃವವನ್ನು ಲ್ಯಾಬ್‌ ಟೆಸ್ಟ್‌ ಗೆ ಕಳುಹಿಸಲಾಗಿದೆ.

ವ್ಯಾಪಕವಾಗಿ ಹರಡುತ್ತಿರುವ H3N2 ವೈರಸ್‌ ತಡೆಗಟ್ಟುವ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಸಚಿವ ಸುಧಾಕರ್‌ ಸಭೆ ನಡೆಸಿದ್ದು, ಕೆಲವು ಮುನ್ಸೂಚನಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಸಣ್ಣ ಮಕ್ಕಳಿಗೆ ಹಾಗೂ ವೃದ್ದರಿಗೆ ವೇಗವಾಗಿ ಹರಡುವ ಈ ವೈರಸ್‌ ಕನಿಷ್ಟ ಐದರಿಂದ ಏಳು ದಿನಗಳ ವರೆಗೆ ಇರುತ್ತದೆ. ಈ ಹಿನ್ನಲೆಯಲ್ಲಿ ಜನರು ಎಚ್ಚರಿಕೆಯಿಂದ ಇರಲು ತಿಳಿಸಲಾಗಿದೆ.

ಇದನ್ನೂ ಓದಿ : H3N2 guideline: H3N2 ಮಾಹಾಮಾರಿ ಆತಂಕ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

ಇದನ್ನೂ ಓದಿ : Masks mandatory for health workers : ರಾಜ್ಯದಲ್ಲಿ H3N2 ವೈರಸ್ ಆತಂಕ ಹಿನ್ನಲೆ: ಆರೋಗ್ಯ ಸಿಬ್ಬಂದಿಗಳಿಗೆ ಇಂದಿನಿಂದಲೇ ಮಾಸ್ಕ್ ಕಡ್ಡಾಯ

ಕೊರೊನಾ ಎನ್ನುವ ಮಹಾಮಾರಿ ಒಂದೊಮ್ಮೆ ಇಡೀ ದೇಶವನ್ನಷ್ಟೇ ಅಲ್ಲದೇ ಇಡೀ ಪ್ರಪಂಚವನ್ನೇ ನಡುಗಿಸಿಬಿಟ್ಟಿತ್ತು. ಈ ಕೊರೊಮಾ ಮಹಾಮಾರಿಯಿಂದ ದೇಶದ ಜನತೆ ತತ್ತರಿಸಿ ಹೋಗಿದ್ದರು. ಕೊರೊನಾ ಹೋಯ್ತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಹೊಸ ರೂಪದಲ್ಲಿ ಕೊರೊನಾ ಸೋಂಕುಗಳು ಮತ್ತೆ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸುತ್ತಿವೆ. ಇಲ್ಲಿಯವರೆಗೆ ಕೊರೊನಾ, ನಂತರ ಒಮಿಕ್ರಾನ್‌, ಈಗ H3N2 ಸೋಂಕು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಕೊರೊನಾ ದೇಶದ ಮೇಲೆ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಇದರಿಂದ ಜನತೆ ಮತ್ತೆ ಮತ್ತೆ ಆತಂಕಕ್ಕೆ ಒಳಗಾಗುವಂತಾಗಿದೆ

ಇದನ್ನೂ ಓದಿ : H3N2 inFluenza A virus: H3N2 ಕೊರೊನಾಕ್ಕಿಂತಲೂ ಅಪಾಯಕಾರಿಯೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ?

H3N2 Death: First victim of H3N2 infection in Hassan

Comments are closed.