ಇಂದು ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರ ಪುಣ್ಯತಿಥಿ

(Savitribai Phule Death anniversary) ಭಾರತೀಯ ಸಮಾಜ ಸುಧಾರಕಿ, ಶಿಕ್ಷಣತಜ್ಞೆ ಮತ್ತು ಮಹಾರಾಷ್ಟ್ರದ ಕವಿ ಸಾವಿತ್ರಿಬಾಯಿ ಫುಲೆ ಮಾರ್ಚ್ 10, 1897 ರಂದು ಬುಬೊನಿಕ್ ಪ್ಲೇಗ್‌ನೊಂದಿಗೆ ಹೋರಾಡುತ್ತಾ ತಮ್ಮ ಜೀವವನ್ನು ಕಳೆದುಕೊಂಡರು. ದೇಶದ ಮೊದಲ ಆಧುನಿಕ ಸ್ತ್ರೀವಾದಿ ಎಂದು ಪ್ರಶಂಸಿಸಲ್ಪಟ್ಟ ಫುಲೆ ಭಾರತದ ಮೊದಲ ಮಹಿಳಾ ಶಿಕ್ಷಕಿಯಾಗದ್ದರು.

ಜನವರಿ 3, 1831 ರಂದು ಮಹಾರಾಷ್ಟ್ರದ ನೈಗಾಂವ್ ಗ್ರಾಮದಲ್ಲಿ ಸಾವಿತ್ರಿಬಾಯಿ ಪುಲೆ ಲಕ್ಷ್ಮಿ ಮತ್ತು ಖಂಡೋಜಿ ನೆವೇಶೆ ಪಾಟೀಲ್ ಅವರ ಹಿರಿಯ ಮಗಳಾಗಿ ಜನಿಸಿದರು. ತಮ್ಮ 9 ನೇ ವಯಸ್ಸಿನಲ್ಲಿ, ಫುಲೆ ಮಹಾರಾಷ್ಟ್ರದ ಶ್ರೇಷ್ಠ ಸಮಾಜ ಸುಧಾರಕರಲ್ಲಿ ಒಬ್ಬರಾಗಿದ್ದ 13 ವರ್ಷದ ಜ್ಯೋತಿರಾವ್ ಫುಲೆ ಅವರನ್ನು ವಿವಾಹವಾದರು. ದೇಶದ ಮೊದಲ ಕ್ರಾಂತಿಕಾರಿ ಸ್ತ್ರೀವಾದಿ ಎಂದು ಕರೆಯಲ್ಪಡುವ ಸಾವಿತ್ರಿಬಾಯಿ ಓದುವುದು ಮತ್ತು ಬರೆಯುವುದನ್ನು ಕಲಿತು, ಪುಣೆಯ ಮಹರ್ವಾಡದಲ್ಲಿ ಸಗುಣಾಬಾಯಿ ಅವರೊಂದಿಗೆ ಹುಡುಗಿಯರಿಗೆ ವಿದ್ಯೆ ನೀಡಲು ಪ್ರಾರಂಭಿಸಿದರು. ಇವರ ಈ ಕಾರ್ಯಕ್ಕೆ ಅವರ ಪತಿ ಜ್ಯೋತಿರಾವ್ ಅವರೇ ಮಾರ್ಗದರ್ಶಕರಾಗಿದ್ದರು.

ನಂತರ ಫುಲೆ, ತನ್ನ ಪತಿಯೊಂದಿಗೆ, 1848 ರಲ್ಲಿ ಭಿಡೆ ವಾಡಾದಲ್ಲಿ ಬಾಲಕಿಯರಿಗಾಗಿ ಭಾರತದ ಮೊದಲ ಶಾಲೆಯನ್ನು ಪ್ರಾರಂಭಿಸಿದರು. ಶಾಲೆಯ ಪಠ್ಯಕ್ರಮವು ಪಾಶ್ಚಿಮಾತ್ಯ ಶಿಕ್ಷಣವನ್ನು ಆಧರಿಸಿದ್ದು, ಗಣಿತ, ವಿಜ್ಞಾನ ಮತ್ತು ಸಾಮಾಜಿಕ ಅಧ್ಯಯನಗಳನ್ನು ಒಳಗೊಂಡಿತ್ತು. 1851 ರ ಹೊತ್ತಿಗೆ, ಸಾವಿತ್ರಿಬಾಯಿ ಮತ್ತು ಜ್ಯೋತಿರಾವ್ ಫುಲೆ ಅವರು ಪುಣೆಯಲ್ಲಿ ಆಗಿನ ಸಮಾಜದ ಪ್ರತಿರೋಧದ ಹೊರತಾಗಿಯೂ ಸುಮಾರು 150 ಹುಡುಗಿಯರ ಒಟ್ಟು ಸಾಮರ್ಥ್ಯದೊಂದಿಗೆ ಮೂರು ಶಾಲೆಗಳನ್ನು ನಡೆಸುತ್ತಿದ್ದರು.

ಮಹಿಳಾ ಸಬಲೀಕರಣಕ್ಕೆ ಅಡ್ಡಿಯಾಗುವ ವರದಕ್ಷಿಣೆ ಮತ್ತು ಇತರ ಸಾಮಾಜಿಕ ಅನಿಷ್ಟಗಳ ವಿರುದ್ಧವೂ ಸಾವಿತ್ರಿಬಾಯಿ ಫುಲೆ ಹೋರಾಡಿದರು. ಅಸ್ಪೃಶ್ಯರೆಂದು ಪರಿಗಣಿಸಲ್ಪಟ್ಟ ಮಾಂಗ್ ಮತ್ತು ಮಹಾರ್ ಸೇರಿದಂತೆ ಕೆಳಸ್ತರದ ಜಾತಿಗಳ ಮಹಿಳೆಯರು ಮತ್ತು ಮಕ್ಕಳಿಗೆ ಫುಲೆ ಕಲಿಸಲು ಪ್ರಾರಂಭಿಸಿದರು. ಗಂಡ-ಹೆಂಡತಿ ಇಬ್ಬರೂ ವಿವಿಧ ಜಾತಿಯ ಮಕ್ಕಳಿಗಾಗಿ 18 ಶಾಲೆಗಳನ್ನು ತೆರೆದರು. ನಂತರ ದಂಪತಿಗಳು ಸೇರಿ ಸ್ಥಳೀಯ ಸ್ತ್ರೀ ಶಾಲೆ, ಪುಣೆ, ಮತ್ತು ಸೊಸೈಟಿ ಫಾರ್ ಪ್ರಮೋಟಿಂಗ್ ದಿ ಎಜುಕೇಶನ್ ಆಫ್ ಮಹಾರ್ಸ್ ಎನ್ನುವ ಎರಡು ಶೈಕ್ಷಣಿಕ ಟ್ರಸ್ಟ್‌ಗಳನ್ನು ಸ್ಥಾಪಿಸಿದರು. ವಿಧವೆಯರ ತಲೆ ಬೋಳಿಸುವ ಪದ್ಧತಿಯನ್ನು ವಿರೋಧಿಸಲು ಸಾವಿತ್ರಿಬಾಯಿ ಮುಂಬೈ ಮತ್ತು ಪುಣೆಯಲ್ಲಿ ಕ್ಷೌರಿಕರ ಮುಷ್ಕರವನ್ನು ಕೂಡ ಆಯೋಜಿಸಿ ಅದರಲ್ಲೂ ಹೋರಾಟ ನಡೆಸಿದ್ದಾರೆ.

ಇದನ್ನೂ ಓದಿ : International Women’s Day 2023 : ಮಹಿಳೆಯರನ್ನು ಬೆಂಬಲಿಸಿ ವಿಶೇಷ ಗೂಗಲ್ ಡೂಡಲ್

1852 ರಲ್ಲಿ, ಬ್ರಿಟಿಷ್ ಸರ್ಕಾರವು ಶಿಕ್ಷಣಕ್ಕೆ ನೀಡಿದ ಕೊಡುಗೆಗಾಗಿ ಫುಲೆ ಕುಟುಂಬವನ್ನು ಗೌರವಿಸಿತು ಮತ್ತು ಸಾವಿತ್ರಿಬಾಯಿ ಅವರನ್ನು ಅತ್ಯುತ್ತಮ ಶಿಕ್ಷಕಿ ಎಂದು ಹೆಸರಿಸಿತು. ಇದಾದ ಬಳಿಕ 1855 ರಲ್ಲಿ ದಂಪತಿಗಳು ರೈತರು ಮತ್ತು ಕಾರ್ಮಿಕರಿಗಾಗಿ ರಾತ್ರಿ ಶಾಲೆಯನ್ನು ಪ್ರಾರಂಭಿಸಿದರು. 1863 ರಲ್ಲಿ, ಜ್ಯೋತಿರಾವ್ ಮತ್ತು ಸಾವಿತ್ರಿಬಾಯಿ ಭಾರತದಲ್ಲಿ ಮೊದಲ ಬಾರಿಗೆ ಶಿಶುಹತ್ಯೆ ನಿಷೇಧಿಸುವ ಹಿನ್ನಲೆಯಲ್ಲಿ ಬಾಲ್ಹತ್ಯ ಪ್ರತಿಬಂಧಕ್ ಗೃಹವನ್ನು ಪ್ರಾರಂಭಿಸಿದರು. ಇದು ಗರ್ಭಿಣಿ ಬ್ರಾಹ್ಮಣ ವಿಧವೆಯರು ಮತ್ತು ಅತ್ಯಾಚಾರ ಸಂತ್ರಸ್ತರಿಗೆ ಹೆರಿಗೆಯನ್ನು ಮಾಡಲು ಸಹಾಯ ಮಾಡಿತು. ಇನ್ನೂ ಕವಿಯಾಗಿದ್ದ ಸಾವಿತ್ರಿಬಾಯಿ ಅವರು 1854 ರಲ್ಲಿ ಕಾವ್ಯಾ ಫುಲೆ ಮತ್ತು 1892 ರಲ್ಲಿ ಬವನ್ ಕಾಶಿ ಸುಬೋಧ ರತ್ನಾಕರ್ ಎಂಬ ಎರಡು ಪುಸ್ತಕಗಳನ್ನು ಬರೆದಿದ್ದಾರೆ.

Savitribai Phule Death anniversary: Today is India’s first woman teacher Savitribai Phule’s death anniversary.

Comments are closed.