ಕೋವಿಡ್‌ 19 ಪ್ರಕರಣ ಹೆಚ್ಚಳ : ರಾಜ್ಯದಲ್ಲಿ ಅಗತ್ಯಕ್ರಮಗಳ ಬಗ್ಗೆ ಸುತ್ತೋಲೆ ಹೊರಡಿಸಿದ ಸರಕಾರ

ಬೆಂಗಳೂರು : ದೇಶದಲ್ಲಿ COVID-19 ಪ್ರಕರಣಗಳಲ್ಲಿ ಕ್ಷಿಪ್ರ ಏರಿಕೆಗೆ ಸಾಕ್ಷಿಯಾಗುತ್ತಿದೆ. ಸೋಮವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಒಂದೇ ದಿನದಲ್ಲಿ 918 ಹೊಸ ಕರೋನವೈರಸ್ ಪ್ರಕರಣಗಳು ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳು 6,350 ಕ್ಕೆ ಏರಿದೆ. ಕರ್ನಾಟಕದ ರಾಜ್ಯದಲ್ಲಿ (Increase covid 19 cases in State) ಕಳೆದ 5 ತಿಂಗಳಗಳಿಂದ ಕೋವಿಡ್‌ 19 ಪರಿಸ್ಥಿತಿಯು ನಿಯಂತ್ರಣದಲ್ಲಿದೆ. ಆದರೆ ಮಾರ್ಚ್‌ 8.2023ಕ್ಕೆ ಮುಕ್ತಾಯಗೊಂಡ ವಾರದಲ್ಲಿ 493 ಪ್ರಕರಣಗಳು ವರದಿಯಾಗಿದ್ದು, ಮಾರ್ಚ್‌ 15, 2023ಕ್ಕೆ ಮುಕ್ತಾಯಗೊಂಡ ವಾರದಲ್ಲಿ 604 ಪ್ರಕರಣಗಳು ವರದಿಯಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮಹಾಮಾರಿಯನ್ನು ಎದುರಿಸಲು ಅಗತ್ಯ ಕ್ರಮಗಳ ಕೈಗೊಳ್ಳಲು ಸುತ್ತೋಲೆಯನ್ನು ಹೊರಡಿಸಲಾಗಿದೆ.

ಇದರಿಂದ ರಾಜ್ಯದ ಕೋವಿಡ್‌ 19 ಪ್ರಕರಣಗಳ ಪಾಸಿಟಿವಿಟಿ ಪ್ರಮಾಣವು ಶೇ. 2.77ರಷ್ಟು ಆಗಿದ್ದು, ಇದೇ ಅವಧಿಯಲ್ಲಿ ಭಾರತ ದೇಶದ ಪಾಸಿಟಿವಿಟಿ ಶೇ. 0.61ರಷ್ಟು ಆಗಿರುತ್ತದೆ. ಅದರಂತೆ, ರಾಜ್ಯದ ಶಿವಮೊಗ್ಗ, ಕಲಬುರಗಿ, ಮೈಸೂರು ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಖಚಿತ ಪ್ರಕರಣಗಳು ವರದಿಯಾಗುವುದನ್ನು ಗಮನಿಸಲಾಗಿದೆ. ಈ ಹಿನ್ನಲೆಯಲ್ಲಿ ಪ್ರಸ್ಕ್ತ ಕೋವಿಡ್‌ 19 ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಗಾವಣೆಯಲ್ಲಿರಿಸಿ ಅಗತ್ಯ ಕ್ರಮಗಳನ್ನು ಅನುಷ್ಠಾನಗೊಳಿಸುವುದು ಅವಶ್ಯವಾಗಿದೆ.

ಭಾರತ ಸರಕಾರದ ಶಿಫಾರಸ್ಸಿನಂತೆ, ಈಗಾಗಲೇ ಚಾಲ್ತಿಯಲ್ಲಿರುವ ಟೆಸ್ಟ್‌, ಟ್ರೇಸ್‌, ಟ್ರ್ಯಾಕ್‌, ಟ್ರೀಟ್‌ ಹಾಘೂ ಲಸಿಕಾ ಕಾರ್ಯಕ್ರಮದ ಯಶಸ್ವಿ ಅನುಷ್ಠಾನದ ಜೊತೆಗೆ ಜಿಲ್ಲೆಗಳಲ್ಲಿ ಈ ಕೆಳಗಿನ ಅಂಶಗಳಿಗೆ ಗಮನಹರಿಸಲು ಸೂಚಿಸಲಾಗಿದೆ.

  • ನಿಗದಿತ ಗುರಿಯಂತೆ ಕೋವಿಡ್‌ 19 ಪ್ರಕರಣಗಳ ಪರೀಕ್ಷೆ ನಡೆಸುವುದು.
  • ಹೊಸದಾಗಿ ಹಾಗೂ ಕ್ಲಸ್ಟರ್‌ ಮಾದರಿಯಲ್ಲಿ ವರದಿಯಾಗುವ ಕೋವಿಡ್‌ 19 ಪ್ರಕರಣಗಳ ಮೇಲ್ವಿಚಾರಣೆ ನಡೆಸುವುದು.
  • ಕೋವಿಡ್‌ 19 ಸೋಂಕು ಹರಡುವುದನ್ನು ತಡೆಗಟ್ಟಲು ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ನಿಯಮಿತವಾಗಿ ಎಚ್ಚರಿಕೆ ಚಿಹ್ನೆಗಳನ್ನು (early warning signals)ಐಎಲ್‌ಐ ಹಾಗೂ ಪ್ರಕರಣಗಳನ್ನು ಪತ್ತೆಹಚ್ಚಿ ಉಸ್ತುವಾರಿಯನ್ನು ನಡೆಸಬೇಕು.
  • ಅಂತರಾಷ್ಟ್ರೀಯ ಪ್ರಯಾಣಿಕರನ್ನು ಸ್ಥಳೀಯವಾಗಿ ವರದಿಯಾಗುವ ಕ್ಲಸ್ಟರ್‌ ಪ್ರಕರಣಗಳು ಹಾಗೂ ಸೆಂಟಿನೆಲ್‌ ಸೈಟ್‌ಗಳಲ್ಲಿ ಸಂಗ್ರಹಿಸಲಾಗುವ ಮಾದರಿಗಳನ್ನು, ಚಾಲಿಯಲ್ಲಿರುವ ಶಿಷ್ಟಾರದಂತೆ ಜೀನೋಮ್‌ ಸೀಕ್ವೆನ್ಸಿಂಗ್‌ ನಡೆಸುವುದು.
  • ಅರ್ಹ ಜನರಿಗೆ Precaution dose ನ್ನು ನೀಡಿಕೆಯ ಪ್ರಮಾಣವನ್ನು ಹೆಚ್ಚಿಸುವುದು.
  • ಮುಚ್ಚಿದ ಸಂರಕ್ಷಣೆಗಳು ಹಾಗೂ ಜನಸಂದಣಿ ಇರುವ ಪ್ರದೇಶಗಳಲ್ಲಿ Covid Appropriate Behavior (CAB) ಪಾಲನೆಯನ್ನು ಖಚಿತಪಡಿಸಿಕೊಳ್ಳುವುದು.

ಇದನ್ನೂ ಓದಿ : ICMR`s emergency meeting: ಭಾರತದಲ್ಲಿ ಕೋವಿಡ್ ಸೋಂಕು ಹೆಚ್ಚಳ : ತುರ್ತು ಸಭೆ ಕರೆದ ಐಸಿಎಂಆರ್

ಇದನ್ನೂ ಓದಿ : ಭಾರತದಲ್ಲಿ ಸದ್ದಿಲ್ಲದೇ ಹೆಚ್ಚುತ್ತಿದೆ ಕೋವಿಡ್‌ ಪ್ರಕರಣ : ಇಂದು 918 ಹೊಸ ಕೋವಿಡ್ ಪ್ರಕರಣ ದಾಖಲು, 4 ಸಾವುi

ಜಿಲ್ಲೆಗಳಲ್ಲಿ ಬದಾಲಗುತ್ತಿರುವ ಕೋವಿಡ್‌ 19 ಪರಿಸ್ಥಿತಿಉ ಹಿನ್ನಲೆಯಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಅಗತ್ಯಕ್ರಮಗಳನ್ನು ಕೈಗೊಳ್ಳುವಂತೆ ಈ ಮೂಲಕ ಸೂಚಿಸಿದೆ.

Increase covid 19 cases in State: Increase in covid 19 cases: Government has issued a circular about necessary measures in the state

Comments are closed.