Women’s Premier League : ಗುಜರಾತ್ ವಿರುದ್ಧ ಗೆದ್ದು ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟ ಯು.ಪಿ ವಾರಿಯರ್ಸ್; ಆರ್‌ಸಿಬಿ ಕನಸು ನುಚ್ಚುನೂರು

ಮುಂಬೈ : ಗುಜರಾತ್ ಜೈಂಟ್ಸ್ (Gujarat Giants Women) ವಿರುದ್ಧ 3 ವಿಕೆಟ್’ಗಳ ರೋಚಕ ಗೆಲುವು ಸಾಧಿಸಿದ ಯು.ಪಿ ವಾರಿಯರ್ಸ್ (UP Warriorz Women) ತಂಡ ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ (Women’s Premier League 2023 Team 2023) ಪ್ಲೇ ಆಫ್ ಹಂತಕ್ಕೆ ಲಗ್ಗೆಯಿಟ್ಟಿದೆ. ಯು.ಪಿ ವಾರಿಯರ್ಸ್ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB Women) ತಂಡದ ಪ್ಲೇ ಆಫ್ ಕನಸು ನುಚ್ಚುನೂರಾಗಿದೆ.

ಇಂದಿನ ಪಂದ್ಯದಲ್ಲಿ ಯು.ಪಿ ವಾರಿಯರ್ಸ್ ಸೋತಿದ್ದರೆ ಆರ್’ಸಿಬಿ ಕನಸು ಜೀವಂತವಾಗಿರುತ್ತಿತ್ತು. ಆದರೆ ಗುಜರಾತ್ ಸೋಲುವುದರೊಂದಿಗೆ ಯು.ಪಿ ವಾರಿಯರ್ಸ್ 7 ಪಂದ್ಯಗಳಿಂದ 4 ಗೆಲುವು ಹಾಗೂ 3 ಸೋಲುಗಳೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುತ್ತಲೇ 3ನೇ ತಂಡವಾಗಿ ಪ್ಲೇ ಆಫ್ ಹಂತಕ್ಕೇರಿದೆ. ಈಗಾಗಲೇ 6 ಪಂದ್ಯಗಳಿಂದ 5 ಗೆಲುವು ಹಾಗೂ ಒಂದು ಸೋಲು ಸಹಿತ 10 ಅಂಕ ಸಂಪಾದಿಸಿರುವ ಮುಂಬೈ ಇಂಡಿಯನ್ಸ್ ಮತ್ತು 6 ಪಂದ್ಯಗಳಲ್ಲಿ 4 ಗೆಲುವು, ಸೋಲುಗಳೊಂದಿಗೆ 8 ಅಂಕ ಗಳಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ಲೇ ಆಫ್ ಹಂತಕ್ಕೇರಿವೆ.

ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆದ 17ನೇ ಲೀಗ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್’ಗಳ ಉತ್ತಮ ಮೊತ್ತ ಕಲೆಹಾಕಿತು. ದಯಾಳನ್ ಹೇಮಲತಾ 33 ಎಸೆತಗಳಲ್ಲಿ 57 ರನ್ ಹಾಗೂ ಆಶ್ಲೇ ಗಾರ್ಡ್ನರ್ 39 ಎಸೆತಗಳಲ್ಲಿ ಸಿಡಿಲಬ್ಬರದ 60 ರನ್ ಬಾರಿಸಿದರು. ಗುರಿ ಬೆನ್ನಟ್ಟಿದ ಯು.ಪಿ ವಾರಿಯರ್ಸ್ ಒಂದು ಹಂತದಲ್ಲಿ 39 ರನ್ನಿಗೆ 3 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.

ಇದನ್ನೂ ಓದಿ : Deandra Dottin : ಮಹಿಳಾ ಪ್ರೀಮಿಯರ್ ಲೀಗ್’ನ ದೊಡ್ಡ ಕಾಂಟ್ರವರ್ಸಿ, ಗುಜರಾತ್ ಜೈಂಟ್ಸ್ ವಿರುದ್ಧ ತಿರುಗಿ ಬಿದ್ದ ವಿಂಡೀಸ್ ಸ್ಟಾರ್

ಇದನ್ನೂ ಓದಿ : ಐಪಿಎಲ್ ಪಂದ್ಯಗಳಿಗೆ ಕನ್ನಡದಲ್ಲಿ ವೀಕ್ಷಕ ವಿವರಣೆ ನೀಡಲಿದ್ದಾರೆ ಬಿಗ್ ಬಾಸ್ ಸ್ಟಾರ್ ರೂಪೇಶ್ ಶೆಟ್ಟಿ

ಆದರೆ 4ನೇ ವಿಕೆಟ್’ಗೆ ಆಸ್ಟ್ರೇಲಿಯಾ ಆಟಗಾರ್ತಿಯರಾದ ತಾಹ್ಲಿಯಾ ಮೆಗ್ರಾತ್ ಮತ್ತು ಗ್ರೇಸ್ ಹ್ಯಾರಿಸ್ ಕೇವಲ 53 ಎಸೆತಗಳಲ್ಲಿ 78 ರನ್’ಗಳ ಜೊತೆಯಾಟವಾಡಿ ತಂಡದ ಗೆಲುವಿಗೆ ಕಾರಣರಾದರು. ಮೆಗ್ರಾತ್ 38 ಎಸೆತಗಳಲ್ಲಿ 57 ರನ್ ಸಿಡಿಸಿ ಔಟಾದ ನಂತರ ಅಬ್ಬರ ಮುಂದುವರಿಸಿದ ಹ್ಯಾರಿಸ್ 41 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್’ಗಳ ನೆರವಿನಿಂದ 72 ರನ್ ಸಿಡಿಸಿ ಯು.ಪಿ ವಾರಿಯರ್ಸ್’ಗೆ ಗೆಲುವು ತಂದುಕೊಟ್ಟು ತಂಡವನ್ನು ಪ್ಲೇ ಆಫ್’ಗೆ ಮುನ್ನಡೆಸಿದರು. ಪ್ಲೇ ಆಫ್ ರೇಸ್’ನಿಂದ ಹೊರ ಬಿದ್ದಿರುವ ಸ್ಮೃತಿ ಮಂಧನ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಳೆ (ಮಂಗಳವಾರ) ನಡೆಯುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಆರ್’ಸಿಬಿ ತಂಡ ಆಡಿರುವ 7 ಲೀಗ್ ಪಂದ್ಯಗಳಲ್ಲಿ 5 ಸೋಲು ಹಾಗೂ 2 ಗೆಲುವುಗಳೊಂದಿಗೆ ಒಟ್ಟು 4 ಅಂಕ ಸಂಪಾದಿಸಿತ್ತು, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

Women’s Premier League Team : UP Warriors entered the play-offs after winning against Gujarat; RCB dream come true

Comments are closed.