ಭಾನುವಾರ, ಏಪ್ರಿಲ್ 27, 2025
HomeCorona UpdatesIncreased Corona Death : 10 ದಿನಗಳಲ್ಲಿ ಏರಿಕೆಯಾಯ್ತು ಡೆತ್ ರೇಟ್ : ಆರೋಗ್ಯ ಇಲಾಖೆ...

Increased Corona Death : 10 ದಿನಗಳಲ್ಲಿ ಏರಿಕೆಯಾಯ್ತು ಡೆತ್ ರೇಟ್ : ಆರೋಗ್ಯ ಇಲಾಖೆ ವರದಿಯಲ್ಲಿ ಬಯಲಾಯ್ತು ಆತಂಕಕಾರಿ ಸಂಗತಿ

- Advertisement -

ಬೆಂಗಳೂರು : ರಾಜ್ಯದಲ್ಲಿ ನಿಧಾನಕ್ಕೆ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಈಗಾಗಲೇ ಸೋಂಕಿತರ ಸಂಖ್ಯೆ ಅರ್ಧ ಲಕ್ಷ ದಾಟಿದ್ದು ದಿನವೂ ಪ್ರಕರಣಗಳು ದಾಖಲಾಗುತ್ತಲೇ ಇದೆ. ಆದರೆ ಸರ್ಕಾರ ಇಷ್ಟು ದಿನ ಕೊರೋನಾ ಸಂಖ್ಯೆ ಹೆಚ್ಚಿದ್ದರೂ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ ಎಂಬ ಸಮಾಧಾನದಲ್ಲಿತ್ತು. ಈಗ ಸದ್ದಿಲ್ಲದೇ ಕೊರೋನಾ ಸಾವಿನ ಸಂಖ್ಯೆಯೂ ಏರಲಾರಂಭಿಸಿದ್ದು ಕೊರೋನಾ ನಿಯಮಗಳನ್ನು ಮತ್ತಷ್ಟು ಸಡಿಲಿಸಿದ್ರೇ ಸಾವಿನ ಸಂಖ್ಯೆ (Increased Corona Death) ಇನ್ನಷ್ಟು ಹೆಚ್ಚಲಿದೆ ಎಂಬ ಆತಂಕ ತಜ್ಞರಿಂದಲೇ ವ್ಯಕ್ತವಾಗುತ್ತಿದೆ.

ರಾಜ್ಯದಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಕೇಸ್ ಗಳು ಸಂಖ್ಯೆ ಸಾವಿರದ ಗಡಿದಾಟಿದೆ. ಮೊದ ಮೊದಲು ಸಾವಿನ ಸಂಖ್ಯೆ ಕಡಿಮೆಯಿತ್ತಾದರೂ ಈಗ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಕಳೆದ 10 ದಿನಗಳಲ್ಲಿ ರಾಜ್ಯದಲ್ಲಿ ಕೊರೋನಾ ಕ್ಕೆ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಏರಿಕೆ‌ಕಂಡುಬಂದಿದೆ. ಸಾವಿನ ಸಂಖ್ಯೆಯನ್ನು ದಿನಾಂಕವಾರು ಗಮನಿಸೋದಾದರೇ,

ದಿನಾಂಕ ಕೊರೊನಾ ಪ್ರಕರಣ ಸಾವಿನ ಸಂಖ್ಯೆ
ಜ.18 41457 20
ಜ.19 40499 21
ಜ.20 47754 29
ಜ.21 48049 22
ಜ.22 42470 26
ಜ.23 50210 19
ಜ.24 46426 32
ಜ.25 41400 52
ಜ.26 48905 39
ಜ.27 38083 49

ಇದು ಕಳೆದ 10 ದಿನಗಳ ಅಂಕಿಅಂಶ. ಕಳೆದ 10 ದಿನಗಳ ಪೈಕಿ ಜನವರಿ 25 ರಂದು ಅತಿ ಹೆಚ್ಚು ಅಂದ್ರೇ 56 ಜನರು ಕೊರೋನಾಗೆ ಪ್ರಾಣ ಕಳೆದುಕೊಂಡಿದ್ದಾರೆ. ಗುರುವಾರ ಒಟ್ಟು 42 ಜನರು ಕೊರೋನಾಗೆ ಬಲಿಯಾಗಿದ್ದಾರೆ. ಇನ್ನು ಸಾಮಾನ್ಯ ಕೊರೋನಾ ರೋಗಿಗಳಿಗಿಂತ SARI, ILI ನಿಂದ ಬಳಲುತ್ತಿರುವ ಸೋಂಕಿತರ ಜೀವಕ್ಕೆ ಅಪಾಯವಿದ್ದು SARI, ILI ಸೋಂಕಿತರು ಅತಿ ಹೆಚ್ಚು ಕೋವಿಡ್ ಗೆ ಬಲಿಯಾಗಿದ್ದಾರೆ. ಸಕ್ಕರೆ ಖಾಯಿಲೆ, ಹೈಪರ್ ಟೆನ್ಷನ್ ಬಿಪಿ, ಲಂಗ್ಸ್ ಡಿಸೀಸ್ ಗೆ ಒಳಗಾದ ಸೋಂಕಿತರು ಹೆಚ್ಚು ಸಾವನ್ನಪ್ಪಿದ್ದು, ಜ್ವರ, ಕೆಮ್ಮು, ಉಸಿರಾಟದ ತೊಂದರೆ ಇರುವ ಸೋಂಕಿತರಿಗೆ ಹೆಚ್ಚು ಅಪಾಯ ತರುತ್ತಿದೆ.

ಹೀಗಾಗಿ ಸದ್ಯ ಕಠಿಣ ನಿಯಮಗಳನ್ನು ತೆಗೆಯೋದು ಸಾವಿನ ಸಂಖ್ಯೆಯನ್ನು ಮತ್ತಷ್ಟು ಹೆಚ್ಚು ಮಾಡಲಿದೆ ಅನ್ನೋ ಆತಂಕ‌ತಂದಿದೆ. ಹೀಗಾಗಿ ಕೆಲ‌ದಿನಗಳ ಕಾಲ ಕಠಿಣ ನಿಯಮ ವನ್ನು ಮುಂದುವರೆಸಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗುವಂತೆ ಸರ್ಕಾರಕ್ಕೆ ಆರೋಗ್ಯ ಇಲಾಖೆ ಮನವಿ‌ಮಾಡುತ್ತಿದೆ.

ಇದನ್ನೂ ಓದಿ :  ಅನಗತ್ಯ ಕೊರೋನಾ ಟೆಸ್ಟ್ ಗೆ ಬಿತ್ತು ಕಡಿವಾಣ : ಹೊಸ ಮಾರ್ಗಸೂಚಿ ಹೊರಡಿಸಿದ‌ ಆರೋಗ್ಯ ಇಲಾಖೆ

ಇದನ್ನೂ ಓದಿ : ಕೇರಳದಲ್ಲಿ ಶೇ. 94ರಷ್ಟು ಕೋವಿಡ್-19 ಪಾಸಿಟಿವ್ ರೋಗಿಗಳಲ್ಲಿ ಓಮಿಕ್ರಾನ್ ದೃಢ

( Increased Corona Death Rate in 10 Days in Karnataka, The Department of Health report is a disturbing fact)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular