NeoCov : ದಕ್ಷಿಣ ಆಫ್ರಿಕಾದಲ್ಲಿ ಅತೀ ಹೆಚ್ಚು ಸಾವಿಗೆ ಕಾರಣವಾಗಬಲ್ಲ ಹೊಸ ವೈರಸ್​ ಪತ್ತೆ

NeoCov :2019ರ ಡಿಸೆಂಬರ್ ತಿಂಗಳಿನಲ್ಲಿ ಚೀನಾದ ವುಹಾನ್​ ಪಟ್ಟಣದಲ್ಲಿ ಮೊಟ್ಟ ಮೊದಲ ಬಾರಿಗೆ ಕೋವಿಡ್​ ಸೋಂಕಿನ ಪ್ರಕರಣ ವರದಿಯಾಗಿತ್ತು. ಇದಾದ ಬಳಿಕ ಜಗತ್ತಿನಲ್ಲಿ ಏನೇನಾಗಿದೆ ಎಂಬುದನ್ನು ಮತ್ತೆ ವಿವರಿಸಿ ಹೇಳಬೇಕಾಗಿಲ್ಲ. ಆದರೆ ಕೋವಿಡ್​ ಸೋಂಕು ವಿಶ್ವದಲ್ಲಿ ರುದ್ರ ನರ್ತನವನ್ನು ಮಾಡಿ ಎರಡು ವರ್ಷಗಳ ಬಳಿಕ ವುಹಾನ್​ನ ಸಂಶೋಧಕರು ಮತ್ತೊಂದು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.


ಹೌದು..! ವುಹಾನ್​ನ ವಿಜ್ಞಾನಿಗಳು ಕೊರೊನಾ ವೈರಸ್​ನ ಹೊಸ ರೂಪಾಂತರಿಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ನಿಯೋಕೋವ್​ ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ರಷ್ಯಾದ ಸುದ್ದಿಸಂಸ್ಥೆಯಾದ ಸ್ಪುಟ್ನಿಕ್ ನೀಡಿರುವ ವರದಿಯ ಪ್ರಕಾರ ದಕ್ಷಿಣ ಆಫ್ರಿಕಾದಲ್ಲಿ ಬಾವಲಿಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗಿದೆ. ಇದು ಕೊರೊನಾ ವೈರಸ್​ಗಿಂತಲೂ ಅತ್ಯಂತ ವೇಗವಾಗಿ ಹರಡಬಲ್ಲದು ಹಾಗೂ ಅತೀ ಹೆಚ್ಚಿನ ಸಾವಿಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.


ಅಂದಹಾಗೆ ಸ್ಪುಟ್ನಿಕ್​​ ನೀಡಿರುವ ಮಾಹಿತಿಯ ಪ್ರಕಾರ ನಿಯೋಕೋವ್​ ಹೊಸ ವೈರಸ್​ ಏನಲ್ಲ. ಇದು 2012 ಹಾಗೂ 2015ರಲ್ಲಿಯೂ ಕಾಣಿಸಿಕೊಂಡಿತ್ತು. ಮಧ್ಯ ಪ್ರಾಚ್ಯ ದೇಶಗಳಲ್ಲಿ ನಿಯೋಕೋವ್​ ಕಾಣಿಸಿಕೊಂಡಿತ್ತು. ಇದು ಅತೀ ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ. ಅಂದರೆ ನಿಯೋಕೋವ್​ ಸೋಂಕಿಗೆ ಒಳಗಾದ ಮೂವರಲ್ಲಿ ಒಬ್ಬರು ಸಾಯುವುದು ಪಕ್ಕಾ ಎನ್ನಲಾಗಿದೆ. ಜನರ ದೇಹದಲ್ಲಿರುವ ಆ್ಯಂಟಿಬಾಡಿ ಅಥವಾ ಪ್ರೋಟಿನ್​ಗಳಿಂದ ನಿಯೋಕೋವ್​ನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ಎನ್ನಲಾಗಿದೆ.


ಇನ್ನು ವುಹಾನ್​ನಲ್ಲಿ ನಡೆದ ಸಂಶೋಧನೆಯನ್ನು ಅನುಸರಿಸಿ ರಷ್ಯಾದ ರಾಜ್ಯ ವೈರಾಲಜಿ ಹಾಗೂ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರದ ತಜ್ಞರು ನಿಯೋಕೋವ್​ನ ಸಂಭಾವ್ಯ ಅಪಾಯಗಳನ್ನು ಅಧ್ಯಯನ ಮಾಡುವುದಾಗಿ ಹೇಳಿದ್ದಾರೆ.


ನಿಯೋಕೋವ್​ ಕೊರೊನಾ ವೈರಸ್​ ಕುರಿತಂತೆ ಚೀನಾ ಸಂಶೋಧಕರಿಂದ ಡೇಟಾವನ್ನು ಪಡೆಯಲಾಗಿದೆ. ಪ್ರಸ್ತುತ ಸಮಯದಲ್ಲಿ ಇದು ಮಾನವರಲ್ಲಿ ಸಕ್ರಿಯವಾಗಿ ಹರಡುವ ಸಾಮರ್ಥ್ಯ ಹೊಂದಿಲ್ಲ ಎಂದು ರಷ್ಯಾದ ಸಂಶೋಧಕರು ಹೇಳಿಕೆ ನೀಡಿದ್ದಾರೆ.

NeoCov: Wuhan Scientists Warn of New Coronavirus Strain With High Death, Infection Rate

ಇದನ್ನು ಓದಿ : Coronavirus pandemic: ದೇಶದಲ್ಲಿ 2.51 ಲಕ್ಷ ದೈನಂದಿನ ಕೋವಿಡ್​ ಪ್ರಕರಣಗಳು ವರದಿ

ಇದನ್ನೂ ಓದಿ : CM Ibrahim persuasion : ಆಪ್ತನ ಬಂಡಾಯಕ್ಕೆ‌ ಬೆದರಿದ ಸಿದ್ದು: ಇಬ್ರಾಹಿಂ ಮನವೊಲಿಕೆಗೆ ರಿಜ್ವಾನ್ ಮೊರೆ ಹೋದ ಸಿದ್ಧರಾಮಯ್ಯ

Comments are closed.