miraculous recovery from COVID : ಅರಬ್​ ರಾಷ್ಟ್ರದಲ್ಲಿ ಕೋವಿಡ್​ ವಿರುದ್ಧ 6 ತಿಂಗಳ ಹೋರಾಟ ನಡೆಸಿ ಗೆದ್ದ ಭಾರತೀಯ

ನವದೆಹಲಿ : ಗಡಿಯಲ್ಲಿ ನಿಂತು ದೇಶವನ್ನು ಕಾಯುವವರದ್ದು ಒಂದು ರೀತಿಯಲ್ಲಿ ಜೀವದ ಜೊತೆಯಲ್ಲಿ ಆಟವಾದರೆ ಕೋವಿಡ್​ ಸಾಂಕ್ರಾಮಿಕದ ವಿರುದ್ಧ ಜನರನ್ನು ರಕ್ಷಿಸುತ್ತಿರುವ ಮುಂಚೂಣಿ ಕಾರ್ಯಕರ್ತರ ಕಾಯಕ ಕೂಡ ಯಾವುದೇ ಹೋರಾಟಕ್ಕೆ ಕಡಿಮೆಯೇನಿಲ್ಲ. ಸೋಂಕಿನ ಭಯವಿದ್ದರೂ ಜನರಿಗಾಗಿ ಅವರ ಆರೋಗ್ಯಕ್ಕಾಗಿ ಹೋರಾಡುವ ಇವರ ಕಾರ್ಯವನ್ನು ಮೆಚ್ಚುವಂತದ್ದೇ. ಅದೇ ರೀತಿ ಅರಬ್​ ರಾಷ್ಟ್ರದಲ್ಲಿಯೂ ಮುಂಚೂಣಿ ಸಿಬ್ಬಂದಿಯಾಗಿದ್ದ (miraculous recovery from COVID) ಭಾರತೀಯ ವ್ಯಕ್ತಿ ಬರೋಬ್ಬರಿ ಆರು ತಿಂಗಳುಗಳ ಬಳಿಕ ಕೋವಿಡ್​ ಸೋಂಕಿನಿಂದ ಗುಣಮುಖರಾಗಿದ್ದಾರೆ .

ಕೇರಳ ಮೂಲದವರಾದ 38 ವರ್ಷದ ಅರುಣ್​ ಕುಮಾರ್​ ನಾಯರ್​ ಕೋವಿಡ್​ ಸೋಂಕಿಗೆ ಒಳಗಾದ ಬಳಿಕ ಅವರ ಶ್ವಾಸಕೋಶ ತೀವ್ರವಾಗಿ ಹಾನಿಗೊಳಗಾಗಿತ್ತು. ಹೀಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅರುಣ್​ಕುಮಾರ್​ ನಾಯರ್​ ಸರಿ ಸುಮಾರು ಆರು ತಿಂಗಳುಗಳ ಕಾಲ ಲೈಫ್​ಸಪೋರ್ಟಿಂಗ್​ ಸಿಸ್ಟಂನಲ್ಲಿಯೇ ಇದ್ದರು. ಒಟಿ ಟೆಕ್ನಿಷಿಯನ್​ ಆಗಿ ಸೇವೆ ಸಲ್ಲಿಸುತ್ತಿದ್ದ ಅರುಣ್​ ಕುಮಾರ್​ ಕೋವಿಡ್​​ ಹೋರಾಟದ ಹಾದಿ ಕೂಡ ದುರ್ಗಮವಾಗಿತ್ತು. ಇವರಿಗೆ ಕೇವಲ ಕೋವಿಡ್​ ಸೋಂಕಿನಿಂದ ಶ್ವಾಸಕೋಶ ಮಾತ್ರ ಹಾನಿಗೊಳಗಾಗಿರಲಿಲ್ಲ. ಈ ಅವಧಿಯಲ್ಲಿ ಅವರಿಗೆ ಹೃದಯ ಸ್ತಂಭನ ಕೂಡ ಉಂಟಾಗಿತ್ತು.

ಆದರೆ ಅರುಣ್​ ಕುಮಾರ್​ ನಾಯರ್​ ತಮ್ಮ ಹೋರಾಟವನ್ನು ಕೈ ಬಿಡಲಿಲ್ಲ. ಸುಮಾರು ಐದು ತಿಂಗಳುಗಳ ಕಾಲ ಆಸ್ಪತ್ರೆಯ ಐಸಿಯುವಿನಲ್ಲಿ ಲೈಫ್​ ಸಪೋರ್ಟಿಂಗ್​ ಸಿಸ್ಟಂನಲ್ಲಿಯೇ ಇದ್ದ ಅರುಣ್​ ಕುಮಾರ್​​ ಟ್ರಾಕಿಯೋಸ್ಟೊಮಿ ಹಾಗೂ ಬ್ರಾಂಕೋಸ್ಕೋಪಿಯೋದಂತಹ ಚಿಕಿತ್ಸೆಗಳನ್ನು ಮಾಡಿಸಿಕೊಂಡರು. ಕೃತಕ ಶ್ವಾಸಕೋಶದಿಂದ ಉಸಿರಾಡುತ್ತಿದ್ದ ಅರುಣ್​ ಕುಮಾರ್​ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ತಮ್ಮ ಅನುಭವವನ್ನು ಹಂಚಿಕೊಂಡಿರುವ ಅರುಣ್​ ಕುಮಾರ್​ ನಾಯರ್​, ಬರೋಬ್ಬರಿ ಅರ್ಧ ವರ್ಷಗಳ ಕಾಲ ಜಗತ್ತಿನಲ್ಲಿ ಏನಾಯ್ತು ಎಂಬುದೇ ನನಗೆ ತಿಳಿದಿಲ್ಲ. ನನಗೆ ಈ ಮರುಜನ್ಮ ಸಿಕ್ಕಿದೆ. ನಾನು ಸಾವಿನ ದವಡೆಯಿಂದ ಬಚಾವಾಗಿ ಬಂದಿದ್ದೇನೆ ಎಂದು ಹೇಳಿದರು,

ಇನ್ನು ಆಸ್ಪತ್ರೆಯಲ್ಲಿ ಮುಂಚೂಣಿ ಸಿಬ್ಬಂದಿಯ ಕೋವಿಡ್​ ಹೋರಾಟವನ್ನು ಗಮನಿಸಿದ ಬಹುರಾಷ್ಟ್ರೀಯ ಆರೋಗ್ಯ ಸೇವಾ ಗುಂಪು ವಿಪಿಎನ್​​ ಹೆಲ್ತ್ ಕೇರ್​ ಅರುಣ್​ ಕುಮಾರ್​ರಿಗೆ 50 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದೆ. ಪವಾಡದ ರೀತಿಯಲ್ಲಿ ಕೋವಿಡ್​ನಿಂದ ಪಾರಾದ ಅರುಣ್​ ಕುಮಾರ್​​​ರಿಗೆ ಬುರ್ಜಿಲ್​ ಆಸ್ಪತ್ರೆಯಲ್ಲಿ ಗುರುವಾರ ನಡೆದ ಸಮಾರಂಭ ದಲ್ಲಿ ಅರುಣ್​ ಕುಮಾರ್​ರ ಎಮಿರೇಟ್ಸ್​ ಸಹೋದ್ಯೋಗಿಗಳು ಆರ್ಥಿಕ ಸಹಾಯವನ್ನು ಹಸ್ತಾಂತರಿಸಿದ್ದಾರೆ.

ಇದನ್ನು ಓದಿ : CM Ibrahim persuasion : ಆಪ್ತನ ಬಂಡಾಯಕ್ಕೆ‌ ಬೆದರಿದ ಸಿದ್ದು: ಇಬ್ರಾಹಿಂ ಮನವೊಲಿಕೆಗೆ ರಿಜ್ವಾನ್ ಮೊರೆ ಹೋದ ಸಿದ್ಧರಾಮಯ್ಯ

ಇದನ್ನೂ ಓದಿ : Coronavirus pandemic: ದೇಶದಲ್ಲಿ 2.51 ಲಕ್ಷ ದೈನಂದಿನ ಕೋವಿಡ್​ ಪ್ರಕರಣಗಳು ವರದಿ

Indian frontline worker in UAE beats death; makes miraculous recovery from COVID-19

Comments are closed.